ಪಾರು ಸೀರಿಯಲ್ ನಟನಿಗೆ ಇದೆಂಥ ಅವಸ್ಥೆ… ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು!

Published : Apr 26, 2025, 03:31 PM ISTUpdated : Apr 27, 2025, 08:14 AM IST

ಪಾರು, ವಧು ಸೀರಿಯಲ್ ಸೇರಿ ಕನ್ನಡ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ನಟ, ರಂಗ ಶಿಕ್ಷಕ ಶ್ರೀಧರ್ ನಾಯ್ಕ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.   

PREV
17
ಪಾರು ಸೀರಿಯಲ್ ನಟನಿಗೆ ಇದೆಂಥ ಅವಸ್ಥೆ… ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು!

ಯಾರಿಗೆ, ಯಾವಾಗ, ಏನಾಗುತ್ತೆ? ಅನ್ನೋದು ಈ ದಿನಗಳಲ್ಲೆ ಗೊತ್ತಾಗೋದಿಲ್ಲ. ನಿನ್ನೆ ಸರಿ ಇದ್ದವರು ಇವತ್ತು ಅನಾರೋಗ್ಯದಿಂದ ಆಸ್ಪತ್ರೆ ಸೇರಿರೋದನ್ನು ನೋಡಿದ್ದಿವಿ. ಅಂತಹ ಒಂದು ಪರಿಸ್ಥಿತಿಯಲ್ಲಿದ್ದಾರೆ ಕನ್ನಡ ಕಿರುತೆರೆಯ ಖ್ಯಾತ ನಟರೊಬ್ಬರು. 
 

27

ಹೌದು, ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದ ನಟ ಶ್ರೀಧರ್ ನಾಯ್ಕ್  (Sridhar Naik) ಇದೀಗ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸುಂದರ ನಗುವಿನ ಒಡೆಯ ಶ್ರೀಧರ್ ಇದೀಗ, ಮುಖದಲ್ಲಿನ ಕಳೆ ಕಳೆದುಕೊಂಡು, ಸೊರಗಿ ಹೋಗಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. 
 

37

ಪಾರು ಧಾರಾವಾಹಿಯಲ್ಲಿ (Paaru serial) ಆದಿಯ ಚಿಕ್ಕಪ್ಪನ ಪಾತ್ರದ ಮೂಲಕ, ಹಾಗೂ ಇದೀಗ ಇತ್ತಿಚೆಗಷ್ಟೇ ಪ್ರಸಾರ ಆರಂಭಿಸಿದ ವಧು ಸೀರಿಯಲ್ ನಲ್ಲೂ ಸಹ ವಧುವಿನ ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ನಾಯ್ಕ್ ನಟಿಸುತ್ತಿದ್ದರು. ಅಷ್ಟೇ ಅಲ್ಲ ಮ್ಯಾಕ್ಸ್ ಸಿನಿಮಾದಲ್ಲೂ ಇವರು ನಟಿಸಿದ್ದಾರೆ. ಇದೀಗ ದಿಢೀರ್ ಆಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

47

ಶ್ರೀಧರ್ ನಾಯ್ಕ್ ಅವರು ತೀವ್ರವಾದ ಇನ್’ಫೆಕ್ಷನ್ ಗೆ ಒಳಗಾಗಿದ್ದು, ಇದರಿಂದಾಗಿ ಇವರ ಆರೋಗ್ಯ ದಿನದಿಂದ ದಿನಕ್ಕೆ ಕುಂದಿ ಹೋಗಿ, ಸೊರಗಿ ಹೋಗಿದ್ದಾರೆ. ಪ್ರತಿದಿನ ಚಿಕಿತ್ಸೆಗೆ 10 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಆದಾಯ ಇಲ್ಲದೇ ಹಣ ಸಹಾಯಕ್ಕಾಗಿ ನಟ ಹಾಗೂ ಅವರ ಆಪ್ತರು ಮನವಿ ಮಾಡಿದ್ದಾರೆ.
 

57

ಇತ್ತೀಚೆಗೆ ನಟಿ ಸ್ವಪ್ನಾ ದೀಕ್ಷಿತ್ (Swapna Dixith), ರಘು ವೈನ್ ಸ್ಟೋರ್, ಕಮಲಿ ಸೀರಿಯಲ್ ನಟಿ ಅಂಕಿತಾ ಕೂಡ, ವಿಡೀಯೋ ಮೆಸೇಜ್ ಶೇರ್ ಮಾಡುವ ಮೂಲಕ ನಟನಿಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಇದೀಗ ನಟಿ ದೀಪಾ ಅಯ್ಯರ್ , ನಾರಾಯಣ ಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. 
 

67

ದೀಪಾ ಅಯ್ಯರ್ (Deepa Iyer)ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿ, ನಟ ಶ್ರೀಧರ್ ನಾಯಕ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿದೆ ಮತ್ತು ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಮತ್ತು ಅಗತ್ಯ ಪ್ರೋಟೀನ್‌ಗಳನ್ನು ದ್ರವಗಳ ಮೂಲಕ ನೀಡಲಾಗುತ್ತದೆ. ನಾವು ಇಂದು ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಅವರಿಗೆ ಸಹಾಯದ ಅವಶ್ಯಕತೆಯಿದೆ. ವೈದ್ಯರು ಅವರು ಉತ್ತಮವಾಗಬಹುದು ಮತ್ತು ಸಂಪೂರ್ಣ ಬೆಂಬಲ ನೀಡಿದರೆ ಅವರ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದು ಹೇಳುತ್ತಾರೆ. ಅವರು ಈಗ ಕನಿಷ್ಠ ಸ್ವಲ್ಪ ಹೊತ್ತು ಕುಳಿತು ಮಾತನಾಡಲು ಸಾಧ್ಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
 

77

ಶ್ರೀಧರ್ ನಾಯ್ಕ್ ಅವರು ಕೇವಲ ಒಬ್ಬ ನಟನಾಗಿರಲಿಲ್ಲ, ಇವರು ಮೇಕಪ್ ಆರ್ಟಿಸ್ಟ್ (Makeup Artist) ಕೂಡ ಆಗಿದ್ದರು, ಅಷ್ಟೇ ಅಲ್ಲ ನಿರೂಪಕ, ಆಕ್ಟಿಂಗ್ ಟ್ರೈನರ್, ರಂಗ ಶಿಕ್ಷಕ, ಡಬ್ಬಿಂಗ್ ಕಲಾವಿದರಿಗೆ ವಾಯ್ಸ್ ಟ್ರೈನರ್ ಆಗಿಯೂ ಕೆಲಸ ಮಾಡುತ್ತಿದ್ದರು. ಇವರು ಹಲವಾರು ಮಕ್ಕಳ ಶಿಬಿರ ಕಾರ್ಯಕ್ರಮಗಳನ್ನು ಸಹ ನೀಡುತ್ತಿದ್ದರು. 
 

Read more Photos on
click me!

Recommended Stories