ತಮಿಳುನಾಡಲ್ಲಿ ಮೇಯೋನಿಸ್‌ ಬ್ಯಾನ್, ಮಧುಮೇಹ ಜೊತೆ ಇದು ತರೋ ಅನಾರೋಗ್ಯ ಒಂದೆರಡಲ್ಲ

Published : Apr 26, 2025, 03:16 PM ISTUpdated : Apr 27, 2025, 08:26 AM IST
ತಮಿಳುನಾಡಲ್ಲಿ ಮೇಯೋನಿಸ್‌ ಬ್ಯಾನ್, ಮಧುಮೇಹ ಜೊತೆ ಇದು ತರೋ ಅನಾರೋಗ್ಯ ಒಂದೆರಡಲ್ಲ

ಸಾರಾಂಶ

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ  ಮೇಯನೇಸ್ ಉತ್ಪಾದನೆ, ಮಾರಾಟ ಮತ್ತು ಪ್ಯಾಕೇಜಿಂಗ್ ಮೇಲೆ ತಮಿಳುನಾಡು ಸರ್ಕಾರ ಒಂದು ವರ್ಷ ನಿಷೇಧ ಹೇರಿದೆ. ಮೊಟ್ಟೆ, ಎಣ್ಣೆ, ವಿನೆಗರ್ ಮಿಶ್ರಣದಿಂದ ತಯಾರಾಗುವ ಮೇಯನೇಸ್‌ನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿರುತ್ತವೆ. ಏಪ್ರಿಲ್ 8ರಿಂದ ಈ ಆದೇಶ ಜಾರಿಗೆ ಬರಲಿದೆ.

ತಮಿಳುನಾಡು ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಆಹಾರ ಪ್ರಿಯರ ನೆಚ್ಚಿನ ಮೇಯನೇಸ್ ನಿಷೇಧಿಸಿ ಆದೇಶ ಹೊರಡಿಸಿದೆ. ಮೇಯನೇಸ್ ಉತ್ಪಾದನೆ, ಪ್ಯಾಕೇಜಿಂಗ್  ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿದೆ. "ಆಹಾರ ವಿಷವಾಗುವುದರ ಜೊತೆಗೆ, ಇದು ಆರೋಗ್ಯಕ್ಕೂ ಅಪಾಯಕಾರಿ" ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದ್ದು, ಈ ಆದೇಶ ಏಪ್ರಿಲ್ 8 ರಿಂದ ಜಾರಿಗೆ ಬರಲಿದೆ.  

ಮೇಯನೇಸ್...ಈ ಹೆಸರು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಪರಿಚಿತ. ನೀವು ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಯಾವುದೇ ರೆಸ್ಟೋರೆಂಟ್‌ಗೆ ಹೋಗಿ ಗರಿಗರಿಯಾದ ಆಹಾರವನ್ನು ಆರ್ಡರ್ ಮಾಡಿದರೂ, ಮೇಯನೇಸ್ ಕೂಡ ಅದರೊಟ್ಟಿಗಿರುತ್ತದೆ. ಇದನ್ನು ಸಾಮಾನ್ಯವಾಗಿ ಪಾಶ್ಚರೀಕರಿಸಿದ ಮೊಟ್ಟೆಗಳಿಂದ ಮಾತ್ರ ತಯಾರಿಸಲಾಗುತ್ತದೆ. ಆದರೆ ಆರೋಗ್ಯ ತಜ್ಞರು ಹೇಳುವಂತೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಮಾರಕವಾಗಬಹುದು, ಅದನ್ನು ಹೇಗೆ ಸಂಗ್ರಹಿಸಿದರೂ ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸುತ್ತಿದ್ದಾರೆ. ಅತಿಯಾಗಿ ತಿನ್ನುವುದು ಕೂಡ ಅಪಾಯಕಾರಿ. ಹಾಗಾಗಿ ಆ ಸಮಸ್ಯೆಗಳು ಏನೆಂದು ತಿಳಿದುಕೊಳ್ಳುವುದು, ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.    

World Malaria Day 2025: ಮಲೇರಿಯಾದಲ್ಲಿ ಎಷ್ಟು ವಿಧಗಳಿವೆ?, ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಯ ವಿವರ

ಮೇಯನೇಸ್ ಮಾಡುವುದು ಹೇಗೆ?  
ಮೇಯನೇಸ್  ಮಾಡುವಾಗ ಮೊಟ್ಟೆಯ ಬಿಳಿಭಾಗವನ್ನು ಎಣ್ಣೆ, ವಿನೆಗರ್ ಅಥವಾ ನಿಂಬೆ ರಸದೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಬೆರೆಸಿ. ಇದನ್ನು ಹೆಚ್ಚಾಗಿ ಶವರ್ಮಾ, ಮಂಡಿ ಬಿರಿಯಾನಿ, ಕಬಾಬ್‌, ಪಿಜ್ಜಾ, ಬರ್ಗರ್‌, ಸ್ಯಾಂಡ್‌ವಿಚ್‌ ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಚಟ್ನಿಯಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಬಳಸುವ ಎಲ್ಲಾ ಪದಾರ್ಥಗಳು ಬೇಯಿಸದೆ ಹಾಕುವುದರಿಂದ ಇದರಲ್ಲಿ ಅಪಾಯಕಾರಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯಿದೆ. ಅನೇಕ ಹೋಟೆಲ್‌ಗಳು ಅಡುಗೆಗೆ ಸ್ವಚ್ಛವಲ್ಲದ ಕೋಳಿ ಮೊಟ್ಟೆಗಳನ್ನು ಒಡೆದು ಬಳಸುತ್ತಿವೆ. ಇಂತಹ ಮೇಯನೇಸ್ ಬೇಗನೆ ಹಾಳಾಗುತ್ತದೆ ಮತ್ತು ರೆಫ್ರಿಜರೇಟರ್‌ನಲ್ಲಿ ದಿನಗಟ್ಟಲೇ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತೆಲಂಗಾಣದಲ್ಲಿ ಈಗಾಗಲೇ ಇದನ್ನು ನಿಷೇಧಿಸಲಾಗಿದೆ. 

ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ? 

ತೂಕ ಹೆಚ್ಚಳ 
ಅನೇಕ ಜನರಿಗೆ ಮೇಯನೇಸ್ ರುಚಿ ಇಷ್ಟ. ಆದರೆ ಅದನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ವಿವರಗಳು ತಿಳಿದಿರುವುದಿಲ್ಲ. ಇದನ್ನು ಮೊಟ್ಟೆ, ಎಣ್ಣೆ ಮತ್ತು ಬಹಳಷ್ಟು ಉಪ್ಪಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದರಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೇಯನೇಸ್ ಅನ್ನು ಆಗಾಗ್ಗೆ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. 

ಹೃದಯ ಕಾಯಿಲೆ
ಮೇಯನೇಸ್ ಅನ್ನು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಲಾಗುತ್ತದೆ. ಇದು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳಲ್ಲಿ ಅಧಿಕವಾಗುವಂತೆ ಮಾಡುತ್ತದೆ. ಆದರೆ, ಹೆಚ್ಚು ಮೇಯನೇಸ್ ತಿನ್ನುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. 2017 ರಲ್ಲಿ "ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್" ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚು ಮೇಯನೇಸ್ ತಿನ್ನುವ ಜನರಲ್ಲಿ ಹೃದಯ ಕಾಯಿಲೆಯ ಅಪಾಯ ಶೇಕಡ 15 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ, ಅಮೆರಿಕದ ಹಾರ್ವರ್ಡ್ ವೈದ್ಯಕೀಯ ಶಾಲೆಯ ಡಾ. ಡಾ. ದರಿಯುಷ್ ಮೊಜಾಫರಿಯನ್ ಭಾಗವಹಿಸಿದ್ದರು. ಹೆಚ್ಚು ಮೇಯನೇಸ್ ತಿನ್ನುವ ಜನರು ಹೃದಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಅವರೂ ಹೇಳಿದ್ದಾರೆ.

ಜೀರ್ಣಕ್ರಿಯೆಯ ಸಮಸ್ಯೆ 
ಮಾರುಕಟ್ಟೆಯಲ್ಲಿ ಲಭ್ಯವಿರುವ ಮೇಯನೇಸ್ ಪ್ಯಾಕೆಟ್‌ಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗಾಗಿ ಅವುಗಳನ್ನು ಆಗಾಗ್ಗೆ ತಿನ್ನುವುದು ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ವಿಶೇಷವಾಗಿ ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ.  

ಮಧುಮೇಹ ಬರುವ ಸಾಧ್ಯತೆ ಹೆಚ್ಚು
ಮೇಯನೇಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಆಗಾಗ್ಗೆ ಹೆಚ್ಚಾಗುತ್ತದೆ. ಇದು ಮಧುಮೇಹ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ಬೀಜಗಳು ಕೋಳಿ, ಕುರಿ ಮಾಂಸಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿ!

ಮನೆಯಲ್ಲಿಯೇ ಮೇಯನೇಸ್ ತಯಾರಿಸುವುದು ಹೇಗೆ? 
ಮೊದಲು ಒಂದು ಹಿಡಿ ಗೋಡಂಬಿಯನ್ನು ತೆಗೆದುಕೊಂಡು ಕಾಲು ಗಂಟೆ ನೆನೆಸಿಡಿ. ಈಗ ಮಿಕ್ಸಿ ತೆಗೆದುಕೊಂಡು ನೆನೆಸಿದ ಗೋಡಂಬಿ, ಮೂರು ಬೆಳ್ಳುಳ್ಳಿ ಎಸಳು, ಒಂದು ಚಮಚ ಆಪಲ್ ಸೈಡರ್ ವಿನೆಗರ್, ಕಾಲು ಚಮಚ ಮೆಣಸಿನ ಪುಡಿ, ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಸಿಂಪಲ್ ಮೇಯನೇಸ್ ಗರಿಗರಿಯಾದ ತಿಂಡಿಗಳೊಂದಿಗೆ ರುಚಿಕರವಾಗಿರುತ್ತದೆ. 

ಪುದೀನಾ ಮೇಯನೇಸ್
ಮೊದಲು ಒಂದು ಹಿಡಿ ಗೋಡಂಬಿಯನ್ನು ತೆಗೆದುಕೊಂಡು ಕಾಲು ಗಂಟೆ ನೆನೆಸಿಡಿ. ನಂತರ ಮಿಕ್ಸಿ ತೆಗೆದುಕೊಂಡು ಇದಕ್ಕೆ ನೆನೆಸಿದ ಗೋಡಂಬಿ, ಒಂದು ಹಿಡಿ ಪುದೀನಾ ಎಲೆಗಳು, ಮೂರು ಬೆಳ್ಳುಳ್ಳಿ ಎಸಳು, ಎರಡು ಹಸಿರು ಮೆಣಸಿನಕಾಯಿ ಅಥವಾ ನೆನೆಸಿದ ಒಣ ಮೆಣಸಿನಕಾಯಿ, ಒಂದು ಸಣ್ಣ ತುಂಡು ಶುಂಠಿ, ಒಂದು ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಪುದೀನಾ ಮೇಯನೇಸ್ ತಿನ್ನುವುದಕ್ಕೆ ರುಚಿಕರ ಮಾತ್ರವಲ್ಲ ಆರೋಗ್ಯಕರವಾಗಿಯೂ ಇರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?