ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ತಾಜಾವಾಗಿ ಇರಿಸುವ ಸೀಕ್ರೆಟ್ ಟಿಪ್ಸ್!

Published : Apr 26, 2025, 03:22 PM ISTUpdated : Apr 26, 2025, 03:34 PM IST

Jasmine Flower Storage Tips: ಹೂವುಗಳನ್ನು ಫ್ರಿಜ್‌ನಲ್ಲಿ ಅಥವಾ ಇಲ್ಲದೆ ವಾರಗಟ್ಟಲೆ ತಾಜಾವಾಗಿಡಲು ಸರಳ ವಿಧಾನಗಳು. ಈ ಬೇಸಿಗೆಯಲ್ಲಿ ನೀವು ಸಹ ಈ ರೀತಿಯಾಗಿ ಹೂಗಳನ್ನು ಸಂಗ್ರಹಿಸಿ.

PREV
16
ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ತಾಜಾವಾಗಿ ಇರಿಸುವ ಸೀಕ್ರೆಟ್ ಟಿಪ್ಸ್!

How To Store Jasmine Flowers In Fridge For Long Time : ನಮ್ಮಲ್ಲಿ ಬಹುತೇಕರು ಹೂವುಗಳನ್ನು ಖರೀದಿಸಿದ ನಂತರ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಫ್ರಿಡ್ಜ್‌ನಲ್ಲಿರಿಸಿದರೂ ಹೂಗಳು ಎರಡೇ ದಿನಕ್ಕೆ ಬಾಡುತ್ತವೆ ಇಲ್ವೇ ಕೊಳೆಯಲು ಆರಂಭಿಸುತ್ತವೆ. ಆದ್ರೆ ಇಂದು ನಾವು ಹೇಳುವ ರೀತಿಯಲ್ಲಿ ಹೂಗಳನ್ನು ಫ್ರಿಡ್ಜ್‌ ನಲ್ಲಿಟ್ರೆ ಒಂದು ವಾರದವರೆಗೆ ಪ್ರೆಶ್ ಆಗಿರುತ್ತವೆ. 

26

1.ಮೊದಲು ಕಟ್ಟಿದ ಹೂವನ್ನು ಅಂದವಾಗಿ ಸುತ್ತಿ ಅದನ್ನು ಬಾಳೆ ಎಲೆಯಲ್ಲಿ ಇರಿಸಿ ಬಿಗಿಯಾಗಿ ಮಡಿಸಿ. ಬಾಳೆ ಎಲೆಯಲ್ಲಿ ಹೂವನ್ನು ಮಡಿಸುವಾಗ ಒತ್ತಡ ಹೇರದೆ ಲಘುವಾಗಿ ಪ್ಯಾಕ್ ಮಾಡಬೇಕು. ನಂತರ ಅದನ್ನು ಪಾತ್ರೆಯಲ್ಲಿ ಇರಿಸಿ, ಗಾಳಿಯಾಡದಂತೆ ಮುಚ್ಚಿ ನಂತರ ಫ್ರಿಜ್‌ನಲ್ಲಿ ಸಂಗ್ರಹಿಸಿ. ಹೀಗೆ ಇರಿಸಿದ್ರೆ ಮಲ್ಲಿಗೆ ಹೂವು ಒಂದು ವಾರದವರೆಗೆ ಬಾಡದೆ ಮೊಗ್ಗುಗಳಲ್ಲಿ ಉಳಿಯುತ್ತದೆ.

36

2.ನಿಮ್ಮ ಬಳಿ ಬಾಳೆ ಇಲ್ಲದಿದ್ರೆ ಹೂಗಳನ್ನು ಬಿಳಿ ಕಾಗದ ಅಥವಾ ಟಿಶ್ಯೂ ಪೇಪರ್‌ನಲ್ಲಿರಿಸಿ ನಿಧಾನವಾಗಿ ಸುತ್ತಬೇಕು. ಕಾಟನ್ ಬಟ್ಟೆಯಲ್ಲಿಯೂ ಹೂಗಳನ್ನು ಇರಿಸಬಹುದು. ಹೂಗಳು ಸುತ್ತುವ ಮುನ್ನ ಕಾಟನ್ ಬಟ್ಟೆಯನ್ನು ತೇವ ಮಾಡಿಕೊಳ್ಳಬೇಕು. ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಬೇಕು. ಈ ರೀತಿ ಮಾಡುವುದರಿಂದ ಮಲ್ಲಿಗೆ ಹೂವುಗಳನ್ನು ದೀರ್ಘಕಾಲ ಬಾಡದೇ ತಾಜಾ ಆಗಿರುತ್ತವೆ. 

46

3.ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ, ಒಂದು ಅಗಲವಾದ ಬಟ್ಟಲಿಗೆ ನೀರು ಸುರಿಯಿರಿ ಮತ್ತು ಅದರ ಮೇಲೆ ಬಾಳೆ ಎಲೆಯನ್ನು ಇರಿಸಿ. ನಂತರ ಕಟ್ಟಿದ ಹೂವನ್ನು ಅದರ ಮೇಲೆ ಇರಿಸಿ. ನಂತರ, ನೀವು ಒದ್ದೆಯಾದ ಹತ್ತಿ ಬಟ್ಟೆಯನ್ನು ನೆನೆಸಿ ಹೂವಿನ ಮೇಲೆ ಹಾಕಿ. ಪಾತ್ರೆಯನ್ನು ಮುಚ್ಚಿ, ಅದರ ಮೇಲೆ ಬೆಳ್ಳಿಯ ತಟ್ಟೆಯನ್ನು ತಲೆಕೆಳಗಾಗಿ ಇಟ್ಟರೆ, ಹೂವು ಒಂದು ವಾರದವರೆಗೆ ಬಾಡದೆ ತಾಜಾವಾಗಿರುತ್ತದೆ. ಬಾಳೆ ಎಲೆಯನ್ನು ನೀರಿನಲ್ಲಿ ತೇಲಿಸುವಾಗ, ಬಾಳೆ ಎಲೆಯೊಳಗೆ ನೀರು ಹೋಗದಂತೆ ನೋಡಿಕೊಳ್ಳಿ.

56

4.ನಿಮ್ಮ ಮನೆಯಲ್ಲಿ ಫ್ರಿಡ್ಜ್‌ ಇಲ್ಲದಿದ್ರೆ ಮೊದಲು ಹೂಗಳನ್ನು ಮಾಲೆಯಾಗಿ ಕಟ್ಟಿಕೊಳ್ಳಿ. ನಂತರ ಅವುಗಳಲ್ಲಿರುವ ನೀರಿನಂಶ ಹೋಗುವರೆಗೂ ವೇಟ್ ಮಾಡಿ. ಆನಂತರ ಕಾಟನ್ ಬಟ್ಟೆಯಲ್ಲಿ ಸುತ್ತಿ ಗಾಳಿಯಾಡದ ಡಬ್ಬದಲ್ಲಿಟ್ಟರೆ ಹೂಗಳು ಫ್ರೆಶ್ ಆಗಿರುತ್ತವೆ.

66

ಗಮನಿಸಿ: ಕಾಟನ್ ಬಟ್ಟೆಯನ್ನು ಬಳಸುವಾಗ, ಅದು ಒಣಗಿದರೆ ಅದನ್ನು ಮತ್ತೆ ಒದ್ದೆ ಮಾಡಲು ಮರೆಯಬೇಡಿ. ಮೇಲಿನ ಸಲಹೆಗಳನ್ನು ನೀವು ಅನುಸರಿಸಿದರೆ, ನಿಮ್ಮ ಮಲ್ಲಿಗೆ ಹೂವುಗಳು ಖಂಡಿತವಾಗಿಯೂ ತಾಜಾವಾಗಿರುತ್ತವೆ ಮತ್ತು ಬಾಡುವುದಿಲ್ಲ. ಫ್ರಿಡ್ಜ್ ಇಲ್ಲದಿದ್ರೆ ಮಡಿಕೆಗಳಲ್ಲಿ ಹೂವಿನ ಮಾಲೆ ಇರಿಸಿ ಸಂಗ್ರಹಿಸಬಹುದು.

Read more Photos on
click me!

Recommended Stories