ಫೈಜರ್ ಕೋವಿಡ್ ಲಸಿಕೆಯಲ್ಲಿ ಮಂಕಿ ವೈರಸ್, ಕೆನಡಾದಿಂದ ಸ್ಫೋಟಕ ಮಾಹಿತಿ ಬಹಿರಂಗ!

By Suvarna NewsFirst Published Oct 21, 2023, 3:23 PM IST
Highlights

ಕೋವಿಡ್ ನಿಯಂತ್ರಣಕ್ಕೆ ಹಲವು ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪೈಕಿ ಫೈಜರ್ mRNA ಕೂಡ ಒಂದು. ಆದರೆ ಈ ಲಸಿಕೆಯಲ್ಲಿ ಮಂಕಿ ವೈರಸ್ ಇದೆ ಎಂದು ಹೆಲ್ತ್ ಕೆನಡಾ ಬಹಿರಂಗಪಡಿಸಿದೆ.

ಟೊರೆಂಟೊ(ಅ.21) ಫೈಜರ್ ಕೋವಿಡ್ ಲಸಿಕೆಯಲ್ಲಿ ಡಿಎನ್‌ಎ ಸೀಕ್ವೆನ್ಸ್ ಬಹಿರಂಗಪಡಿಸುವ ಅಂಶಗಳಿವೆ ಎಂದು ಹೆಲ್ತ್ ಕೆನಡಾ ಹೇಳಿದೆ. ಈ ಕುರಿತು ಅಧ್ಯಯನ ಮುಂದುವರಿಸಿರುವ ಹೆಲ್ತ್ ಕೆನಡಾ, ಕ್ಯಾನ್ಸರ್ ಕಾರಕ ಅಂಶಗಳ ಕುರಿತು ಸಂಶೋಧನೆ ನಡೆಸುತ್ತಿದೆ.  ಫೈಜರ್ ಸಲ್ಲಿಸಿದ ಪ್ಲಾಸ್ಮಿಡ್ DNA ಅನುಕ್ರಮದ ಆಧಾರದ ಮೇಲೆ ವೈರಸ್ ದೃಢೀಕರಿಸಲು ಹೆಲ್ತ್ ಕೆನಡಾಗೆ ಸಾಧ್ಯವಾಗಿದೆ ಎಂದು ಇಮೇಲ್ ಮೂಲಕ ಮಾಹಿತಿ ಬಹಿರಂಗಪಡಿಸಿದೆ.

ಫೈಜರ್ ಕೋವಿಡ್ ಲಸಿಕೆಯಲ್ಲಿ ಸಿಮಿಯನ್ ವೈರಸ್ 40 (SV40) ಇದೆ ಅನ್ನೋದು ಕೆನಡಾ ಹೆಲ್ತ್ ಸಂಶೋಧಕರ ವರದಿಯಾಗಿದೆ. ಇದರ ನಡುವೆ ಕೆಲ ವಿಜ್ಞಾನಿಗಳು ಇದು ಕ್ಯಾನ್ಸರ್‌ಗೆ ಕಾರಣವಾಗಲಿದೆ ಅನ್ನೋ ವಾದ ಮುಂದಿಟ್ಟಿದ್ದರೆ, ಮತ್ತೊಂದು ಗುಂಪು ಕ್ಯಾನ್ಸರ್ ಸಾಧ್ಯತೆ ಕಡಿಮೆ ಎಂದಿದೆ. ಹೀಗಾಗಿ ಫೈಜರ್ ಲಸಿಕೆಯಲ್ಲಿನ ಸಿಮಿಯನ್ ವೈರಸ್ 40 (SV40) ಕ್ಯಾನ್ಸರ್‌ನಂತ ಮಾರಕ ಸಮಸ್ಯೆಗೆ ಕಾರಣವಾಗಲಿದೆಯಾ ಅನ್ನೋ ಕುರಿತು ಸಂಶೋಧನೆ ಮುಂದುವರಿಸಿದೆ.

ಫೈಜರ್‌ ಲಸಿಕೆ ದಕ್ಷತೆಯ ಕುರಿತ ಪ್ರಶ್ನೆಗೆ ಉತ್ತರಿಸಲು ಸಿಇಒ ನಕಾರ, ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಪ್ರತೀಕಾರ!

ಫೈಜರ್ ಕೋವಿಡ್ ಲಸಿಕೆಯಲ್ಲಿ ಪ್ಲಾಸ್ಮಿಡ್ ಡಿಎನ್‌ಎ ಪತ್ತೆಹಚ್ಚಲಾಗಿದೆ. ಇದು ಮಾನವನ ಜಿನೋಮ್ ಬದಲಾಸಿಯುವ ಸಾಧ್ಯತೆ ಇದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಫೈಜರ್ ಲಸಿಕೆಯಲ್ಲಿನ ಸಿಮಿಯನ್ ವೈರಸ್ 40 (SV40) ಡಿಎನ್‌ಎ ಕುರಿತು ವಿಜ್ಞಾನಿಗಳಾದ ಕೆವಿನ್ ಮೆಕರ್ನಾನ್ ಹಾಗೂ ಡಾ.ಫಿಲಿಪ್ ಜೆ ಬಕ್ ಹಾಲ್ಟ್ಸ್ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಫೈಜರ್ ಪ್ಲಾಸ್ಮಿಡ್ ಡಿಎನ್ಎ ವಿವರಗಳನ್ನು ಸಲ್ಲಿಕೆ ಮಾಡಿತ್ತು. ಇದರ ಆಧಾರದ ಮೇಲೆ ಸಂಶೋಧನೆ ನಡೆಸಲಾಗಿದೆ. 

19500ರ ದಶಕದಲ್ಲಿ ಪೊಲಿಯೋ ಮಾರಕ ರೋಗವಾಗಿ ಕಾಣಿಸಿಕೊಂಡಿತ್ತು. ವಿಶ್ವವೇ ಪೊಲಿಯೋ ಹೋಗಲಾಡಿಸಲು 50 ಹಾಗೂ 60ರ ದಶಕದಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗಿತ್ತು. ತ್ವರಿತಗತಿಯಲ್ಲಿ ಫಲಿತಾಂಶ ಕಾಣುವ ಸಲುವಾಗಿ ಪೊಲಿಯೋ ಲಸಿಕೆಯಲ್ಲಿ ಪಾಲಿಯೋಮಾವೈರಸ್ ಸಿಮಿಯನ್ ವೈರಸ್ 40, ಆಂಕೊಜೆನಿಕ್ ಡಿಎನ್‌ಎ ವೈರಸ್ ಬಳಲಾಗಿತ್ತು. ಈ ಲಸಿಕೆಗಳಲ್ಲಿ  SV40 ವೈರಲ್ ಕಾರಣ ಬಳಕೆಗೆ ಯೋಗ್ಯವಲ್ಲ ಎಂದು ಅಧ್ಯಯನ ವರದಿ ನೀಡಿತ್ತು. ಬಳಿಕ ಪೊಲಿಯೋ ಲಸಿಕೆಗಳಿಂದ  SV40 ತೆಗೆದುಹಾಕಲಾಗಿತ್ತು. ಇದೀಗ ಫೈಜರ್ ಲಸಿಕೆಯೆಲ್ಲೂ ಇದೇ  SV40 ವೈರಸ್ ಉಪಸ್ಥಿತಿಯನ್ನು ಹೆಲ್ತ್ ಕೆನಡಾ ಎಜೆನ್ಸಿ ದೃಢಪಡಿಸಿದೆ.  

ವಿದೇಶಿ ಲಸಿಕೆ ಫೈಜರ್‌ ಖರೀದಿಗೆ ವಿಪಕ್ಷ ಒತ್ತಡ ಹೇರಿತ್ತು: ರಾಜೀವ್‌ ಚಂದ್ರಶೇಖರ್‌

click me!