ನಿಮ್ಮ ಜೀವನಶೈಲಿಯಿಂದಾಗಿ ಅನೇಕ ಬಾರಿ ಫರ್ಟಿಲಿಟಿ (fertility) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮದುವೆಯಾದ ಮೂರು ವರ್ಷಗಳ ನಂತರವೂ ನಿಮಗೆ ಮಕ್ಕಳು ಆಗದೇ ಇದ್ದರೆ, ಅದಕ್ಕೆ ಏನು ಕಾರಣ ಇರಬಹುದು ಅನ್ನೋದನ್ನು ತಿಳಿಯಿರಿ. ಸಮಸ್ಯೆ ಏನೂ ದೊಡ್ಡದಿರೋದಿಲ್ಲ. ನಿಮ್ಮ ಜೀವನಶೈಲಿ ಬದಲಾಯಿಸಿದ್ರೆ ಫರ್ಟಿಲಿಟಿ ಆರೋಗ್ಯವೂ ಚೆನ್ನಾಗಿರುತ್ತೆ.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (polycystic ovary syndrome)
ಬೊಜ್ಜು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯಿಂದಾಗಿ ಮಕ್ಕಳಾಗಲು ತಡೆ ಉಂಟಾಗುತ್ತೆ.
ತೆಳ್ಳಗಿರೋದು ಸಹ ಸಮಸ್ಯೆ
ದೇಹದಲ್ಲಿ ಬೊಜ್ಜು ಹೆಚ್ಚಾಗಿದ್ರೆ ಮಕ್ಕಳಾಗೋದಾಕ್ಕೆ ಸಮಸ್ಯೆ ಖಚಿತ. ಜೊತೆಗೆ ನೀವು ತುಂಬಾ ತೆಳ್ಳಗಿದ್ರೂ ಸಹ ಮಕ್ಕಳಾಗೋದಕ್ಕೆ ಸಮಸ್ಯೆ ಉಂಟಾಗುತ್ತೆ.
ಧೂಮಪಾನ (smoking)
ಸಿಗರೇಟ್ ಮತ್ತು ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ. ಇವು ನಿಮ್ಮ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತವೆ. ನೀವು ಈ ಎಲ್ಲಾ ವ್ಯಸನಗಳಿಗೆ ಅಡಿಕ್ಟ್ ಆದ್ರೆ ಅದ್ರಿಂದಾನೂ ಸಮಸ್ಯೆ ಕಾಡುತ್ತೆ.
ಮಾಲಿನ್ಯ (pollution)
ನೀವು ತುಂಬಾ ಕಲುಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಅದು ಸಹ ಬಂಜೆತನಕ್ಕೆ ಒಂದು ಕಾರಣವಾಗಿರಬಹುದು. ಯಾಕಂದ್ರೆ ಮಾಲಿನ್ಯದಿಂದ ಹಾರ್ಮೋನ್ ಗಳಲ್ಲಿ ಅಸಮತೋಲವಾಗಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕೊಬ್ಬು
ಬೊಜ್ಜು (obesity) ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾದ್ರೆ ಇದು ಬಂಜೆತನಕ್ಕೂ ಕಾರಣವಾಗಬಹುದು. ಹಾಗಾಗಿ ರೆಗ್ಯುಲರ್ ಆಗಿ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಮತ್ತು ಆರೋಗ್ಯಯುತ ಆಹಾರ ಸೇವಿಸುವ ಮೂಲಕ ಕೊಬ್ಬು ಇಳಿಸಿ.
ಒತ್ತಡ (stress)
ಅತಿಯಾದ ಒತ್ತಡವು ತಾಯ್ತನಕ್ಕೆ ಅಡ್ಡಿಯಾಗುತ್ತದೆ. ಮಗುಯಾಗೋದಿಲ್ಲ ಎಂದು ಹೆಚ್ಚು ಹೆಚ್ಚು ತಲೆ ಕೆಡಿಸಿದಷ್ಟು ಒತ್ತಡ ಹೆಚ್ಚುತ್ತದೆ. ಇದರಿಂದ ಗರ್ಭ ನಿಲ್ಲೋದಕ್ಕೆ ಕಷ್ಟವಾಗುತ್ತೆ. ಹಾಗಾಗಿ ಒತ್ತಡದಿಂದ ದೂರವಿರಬೇಕು.
ವ್ಯಾಯಾಮ ಮಾಡದೇ ಇರೋದು
ನೀವು ವ್ಯಾಯಾಮ (exercise) ಅಥವಾ ನಡಿಗೆಯಿಂದ ದೂರವಿದ್ದರೆ, ದಿನವಿಡೀ ದೇಹಕ್ಕೆ ಯಾವುದೇ ಕೆಲಸ ಕೊಡದೇ ಸುಮ್ಮನೆ ಕುಳಿತಿದ್ದರೆ, ಅದು ಕೂಡ ಗರ್ಭಧಾರಣೆಯ ಮೇಲೂ ಪರಿಣಾಮ ಬೀರುತ್ತದೆ.
ಬಂಜೆತನದ ಲಕ್ಷಣಗಳು ಯಾವುವು?
ಋತುಚಕ್ರದ ತೊಂದರೆ, ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು, ಗರ್ಭಾಶಯದಿಂದ ರಕ್ತಸ್ರಾವ, ನಿದ್ರಾಹೀನತೆ, ಮುಖದ ಮೇಲಿನ ಕೂದಲು ಇವೆಲ್ಲವೂ ನಿಮಗೆ ಬಂಜೆತನ (infertility) ಸಮಸ್ಯೆ ಕಾಡುತ್ತಿದೆ ಅನ್ನೋದನ್ನ ಸೂಚಿಸುತ್ತೆ.