ಚಿತಾಭಸ್ಮದಲ್ಲಿ ಗಾಂಜಾ ಬೆಳೆದು, ದಮ್ಮೆಳೆದ ಮಗಳು: ಅಪ್ಪನ ಅಂತಿಮ ಆಸೆಯಂತೆ! ಶಾಕಿಂಗ್‌ ವಿಡಿಯೋ ವೈರಲ್‌

Published : Nov 28, 2024, 12:48 PM IST
ಚಿತಾಭಸ್ಮದಲ್ಲಿ ಗಾಂಜಾ ಬೆಳೆದು, ದಮ್ಮೆಳೆದ ಮಗಳು: ಅಪ್ಪನ ಅಂತಿಮ ಆಸೆಯಂತೆ! ಶಾಕಿಂಗ್‌ ವಿಡಿಯೋ ವೈರಲ್‌

ಸಾರಾಂಶ

ಅಪ್ಪನ ಚಿತಾಭಸ್ಮದಲ್ಲಿ ಗಾಂಜಾ ಬೆಳೆದು, ದಮ್ಮೆಳೆದಿದ್ದಾಳೆ ಮಗಳು! ಇದು ಅಪ್ಪನ ಅಂತಿಮ ಆಸೆಯಂತೆ. ಇವಳು ಹೇಳಿದ್ದೇನು ಕೇಳಿ, ವಿಡಿಯೋ ವೈರಲ್‌ ಆಗಿದೆ.   

ಈ ಜಗತ್ತಿನಲ್ಲಿ ಯಾವ ಪರಿಯ ಜನ ಇರುತ್ತಾರೋ ಎಂದು ಹೇಳುವುದೇ ಕಷ್ಟ. ಎಂಥ ಮನಸ್ಥಿತಿ, ವಿಚಿತ್ರ ವರ್ತನೆಯ ಜನರು ಇರುತ್ತಾರೆ ಎಂದು ಕಲ್ಪನೆಗೂ ಕೆಲವೊಮ್ಮೆ ಬರುವುದೇ ಇಲ್ಲ. ಅಂಥದ್ದೇ ಒಬ್ಬ ಯೂಟ್ಯೂಬರ್‍‌ ಇಲ್ಲಿದ್ದಾಳೆ. ಇವಳ ಹೆಸರು ರೋಸನ್ನಾ ಪ್ಯಾನ್ಸಿನೊ. ಈಕೆ ತನ್ನ  ಮೃತ ತಂದೆಯ ಚಿತಾಭಸ್ಮದಲ್ಲಿ   ಗಾಂಜಾ ಬೆಳೆದು ಐದು ವರ್ಷಗಳ ಬಳಿಕ ಅದನ್ನೇ  ಸೇದಿದ್ದಾಳೆ. ಇದಕ್ಕೆ ಕಾರಣವೂ ಇದೆ. ಇದು ಅಪ್ಪನಿಗೆ ಸಲ್ಲಿಸುವ ಗೌರವ ಎಂದಿದ್ದಾಳೆ. ಏಕೆಂದರೆ, ಅಪ್ಪನ ಅಂತಿಮನ ಇಚ್ಛೆ ಇದೇ ಆಗಿತ್ತಂತೆ. ಇವಳ ಫೋಟೋ ವೈರಲ್‌ ಆಗಿದೆ. ಇದರಲ್ಲಿ ಇವಳು ಸಿಗರೆಟ್‌ ಸೇದುತ್ತಿರುವುದನ್ನು ನೋಡಬಹುದು. ತುಂಬಾ ತೃಪ್ತ ಮನೋಭಾವ ಅವಳಲ್ಲಿ ಇದ್ದಂತೆ ಕಾಣುತ್ತಿದೆ. ಇದು ತನ್ನ ತಂದೆಯ ಅಂತಿಮ ಇಚ್ಛೆ. ಅದನ್ನು ಪಾಲಿಸುತ್ತಿದ್ದೇನೆ ಎಂದಿದ್ದಾಳೆ ರೋಸನ್ನಾ! 

ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ರೋಸನ್ನಾ ಪೋಸ್ಟ್‌ ಮಾಡಿದ್ದಾಳೆ. ಐದು ವರ್ಷಗಳ ಹಿಂದೆ ಲ್ಯುಕೇಮಿಯಾದಿಂದ ನನ್ನ ತಂದೆ ನಿಧನರಾದರು. ಅವರ ಅಂತಿಮ ಇಚ್ಛೆಯಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ನನ್ನ  ತಂದೆಯ ಆಶಯವನ್ನು ಗೌರವಿಸುವ ಮಾರ್ಗ ಇದಾಗಿದೆ ಎಂದು ಹೇಳಿದ್ದಾಳೆ.  ತನ್ನ ಪಾಡ್‌ಕ್ಯಾಸ್ಟ್‌ನ ಮೊದಲ ಸಂಚಿಕೆಯಲ್ಲಿ ಇದರ ಬಗ್ಗೆ ಈಕೆ ವಿವರವಾದ ವಿಡಿಯೋ ಶೇರ್‍‌ ಮಾಡಿಕೊಂಡಿದ್ದಾಳೆ!  ವಿಡಿಯೋದಲ್ಲಿ   ರೋಸನ್ನಾ  ಸಂವಹನದ ಉದ್ದಕ್ಕೂ  ಧೂಮಪಾನ ಮಾಡುವುದನ್ನು ನೋಡಬಹುದಾಗಿದೆ.  

ರೀಲ್ಸ್‌ ಹುಚ್ಚಿಗೆ ಮಹಿಳೆಯರ ಒಳ ಉಡುಪು ಧರಿಸಿ ರಸ್ತೆಗೆ ಬಂದ! ಆಗಬಾರದ್ದು ಆಗೋಯ್ತು... ವಿಡಿಯೋ ವೈರಲ್‌

 'ಸ್ಮೋಕಿಂಗ್ ಮೈ ಡೆಡ್ ಡ್ಯಾಡ್' ಎಂಬ ಶೀರ್ಷಿಕೆಯ ಜೊತೆ ರೋಸನ್ನಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.  'ಪಾಪಾ ಪಿಜ್ಜಾ' ಎಂಬುದು ನನ್ನ ತಂದೆಯ ಹೆಸರಾಗಿತ್ತು. ಅವರು ಮೃತರಾಗುವ ಸಯದಲ್ಲಿ ತಮ್ಮ ಅಂತಿಮ ಇಚ್ಛೆಯನ್ನು ತಿಳಿಸಿದ್ದರು ಎಂದು ಈಕೆ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ, ತಂದೆಯ ಬಗ್ಗೆ ವಿಚಿತ್ರ ಗುಣಗಳನ್ನೂ ಈಕೆ ಬರೆದುಕೊಂಡಿದ್ದಾಳೆ.  "ನನ್ನ ತಂದೆ ಒಬ್ಬ ದುಷ್ಟ ಮತ್ತು  ಬಂಡಾಯಗಾರ ಆಗಿದ್ದ,  ನಾನು ಅವರ ಮಗಳಾಗಿ ಅವರ  ಹೆಜ್ಜೆಗಳನ್ನು ಅನುಸರಿಸುತ್ತೇನೆ. ಅವರ ಅಂತಿಮ ಕೋರಿಕೆಯನ್ನು ಈಡೇರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.  ಸಾಯುವ ಮೊದಲು ನನ್ನ ಅಪ್ಪ, ನನ್ನನ್ನು ಮತ್ತು ತಾಯಿಯನ್ನು ಕರೆದು ವಿಷಯ ತಿಳಿಸಿದರು. 

ಅವರ ಸಾವಿನ ಬಳಿಕ ಚಿತಾಭಸ್ಮದಿಂದ ಗಾಂಜಾ ಬೆಳೆಯಲು ನನ್ನ ತಾಯಿ ಹಿಂಜರಿದು. ನಾನೇ ಅವರಿಗೆ ಧೈರ್‍ಯ ತುಂಬಿದೆ.  ಈಗ ಐದು ವರ್ಷ ಆಗಿದೆ.  ತಂದೆ ಬಯಸಿದ್ದನ್ನು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಸ್ಮೋಕ್ ಮಾಡುತ್ತಲೇ ಹೇಳಿರುವ ಈಕೆ, ಇದು ತುಂಬಾ ಟೇಸ್ಟಿಯಾಗಿದೆ ಎಂದಿದ್ದಾಳೆ. ಒಟ್ಟಿನಲ್ಲಿ ಅಪ್ಪ ಹುಚ್ಚನೋ, ಮಗಳು ಹುಚ್ಚಿಯೋ ಅಥವಾ ಇಬ್ಬರೂ ಹುಚ್ಚರೋ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 

ಇವ್ರ ಮಾತನ್ನು ಸರಿಯಾಗಿ ಕೇಳಿಸ್ಕೊಳಿ... ಈಕೆ ಹಿಜಾಬ್‌ ಧರಿಸ್ತಿರೋದಕ್ಕೆ ನಾನ್‌ ಕಾರಣ ಅಲ್ಲ ಎಂದ ಸನಾ ಪತಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!