EXCLUSIVE: ಮೋದಿ 'ಖೇಲೋ ಇಂಡಿಯಾ' ವಿಷನ್‌ ಮೆಚ್ಚಿದ ಸೆಬಾಸ್ಟಿಯನ್‌ ಕೋ, ನೀರಜ್‌ ಚೋಪ್ರಾ ಬಗ್ಗೆ ಶ್ಲಾಘನೆ

Nov 29, 2024, 1:23 PM IST

ಬೆಂಗಳೂರು (ನ.29): ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ, ಏಷ್ಯಾನೆಟ್ ನ್ಯೂಸ್ ಗ್ರೂಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಲ್ರಾ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ, ದೇಶದಲ್ಲಿ ಕ್ರೀಡೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾವಧಿಯ ದೃಷ್ಟಿಕೋನವನ್ನು ಶ್ಲಾಘಿಸಿದರು. 

ನಾಲ್ಕು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು ಜಾಗತಿಕ ಕ್ರೀಡಾ ಆಡಳಿತದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಕೋ, ಫಿಟ್‌ನೆಸ್ ಮತ್ತು ಜಾಗತಿಕ ಕ್ರೀಡಾ ಸಾಧನೆಗಳೆರಡರಲ್ಲೂ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಖೇಲೋ ಇಂಡಿಯಾ ಕಾರ್ಯಕ್ರಮದಂತಹ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಉಪಕ್ರಮಗಳು ಹೇಗೆ ಪ್ರಮುಖವಾಗಿವೆ ಎನ್ನುವುದನ್ನು ವಿವರಿಸಿದರು.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸೆಬಾಸ್ಟಿಯನ್‌ ಕೋ, ಪ್ರಧಾನಿ ನರೇಂದ್ರ ಅವರನ್ನು ಭೇಟಿಯಾಗಿದ್ದರು. ದೇಶದ ಅಭಿವೃದ್ಧಿಯಲ್ಲಿ ಕ್ರೀಡೆ ಪಾತ್ರವಹಿಸುವ ಬಗ್ಗೆ ಪ್ರಮುಖ ಚರ್ಚೆಯಲ್ಲಿ ಅವರು ಭಾಗಿಯಾಗಿದ್ದರು. ಪ್ರಧಾನಮಂತ್ರಿಯವರ ಮುಂದಾಲೋಚನೆಯ ಬಗ್ಗೆ ಕೋ ಪ್ರಭಾವಿತರಾಗಿದ್ದರು.