ಹ್ಯಾಂಡ್ ಸಮ್ ಹುಡುಗ ನೀವಾಗಿದ್ರೆ ಮದುವೆಗೆ ಸಿದ್ಧರಾಗಿ! ವೈರಲ್ ಆಗಿದೆ ವರಾನ್ವೇಷಣೆ ಪೋಸ್ಟ್

Published : Nov 28, 2024, 12:14 PM IST
 ಹ್ಯಾಂಡ್ ಸಮ್ ಹುಡುಗ ನೀವಾಗಿದ್ರೆ ಮದುವೆಗೆ ಸಿದ್ಧರಾಗಿ! ವೈರಲ್ ಆಗಿದೆ ವರಾನ್ವೇಷಣೆ ಪೋಸ್ಟ್

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ವೈರಲ್ ಆಗ್ತಿರುತ್ತದೆ. ಅದ್ರಲ್ಲಿ ಕೆಲವೊಂದು ಗಮನ ಸೆಳೆಯುತ್ತದೆ. ಈಗ ಮಹಿಳೆಯೊಬ್ಬಳ ವರಾನ್ವೇಷಣೆ ಪೋಸ್ಟ್ ಸುದ್ದಿ ಮಾಡ್ತಿದೆ.   

ವಧು – ವರರ (Bride and groom) ಅನ್ವೇಷಣೆಗೆ ಈಗ ಮ್ಯಾಟ್ರಿಮೋನಿ (Matrimony) ಬಳಕೆ ಹೆಚ್ಚಾಗಿದೆ. ಜನರು ಮ್ಯಾಟ್ರಿಮೋನಿ ಅಪ್ಲಿಕೇಷನ್ ಅಥವಾ ಸೋಶಿಯಲ್ ಮೀಡಿಯಾ (Social Media) ಮೂಲಕ ತಮ್ಮ ಸಂಗಾತಿಗಳಿಗೆ ಹುಡುಕಾಟ ನಡೆಸುತ್ತಾರೆ.  ಮದುವೆ ಈಗಿನ ದಿನಗಳಲ್ಲಿ ಸುಲಭದ ಮಾತಲ್ಲ. ಅವಿವಾಹಿತ ಯುವಕ ಹಾಗೂ ಯುವತಿಯರ ಸಂಖ್ಯೆ ಸಾಕಷ್ಟಿದ್ದರೂ ಪರಸ್ಪರ ಹೊಂದಾಣಿಕೆಯಾಗ್ತಿಲ್ಲ. ಇಬ್ಬರ ಬೇಡಿಕೆಗಳು ಭಿನ್ನವಾಗಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ವರ ಬೇಕಾಗಿದ್ದಾನೆ, ವಧು ಬೇಕಾಗಿದ್ದಾಳೆ ಎಂಬ ಜಾಹೀರಾತು (Advertising)ಗಳನ್ನು ನಾವು ನೋಡ್ತಿರುತ್ತೇವೆ. ಅದ್ರಲ್ಲಿ ಕೆಲವರ ಬೇಡಿಕೆ ವಿಚಿತ್ರವಾಗಿರುತ್ತದೆ. ವ್ಯಕ್ತಿಯ ವ್ಯಕ್ತಿತ್ವಕ್ಕಿಂತ ಹಣ, ಆಸ್ತಿ ನೋಡುವವರ ಸಂಖ್ಯೆಯೇ ಈಗ ಹೆಚ್ಚಿದೆ. ಮತ್ತೆ ಕೆಲವರ ಬೇಡಿಕೆ ಹಾಸ್ಯಾಸ್ಪದವಾಗಿದ್ದು, ನಗುತರಿಸುವಂತಿರುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಜಾಹೀರಾತು ಸುದ್ದಿ ಮಾಡಿದೆ. ಆಕೆಯ ಬೇಡಿಕೆಗಳನ್ನು ಓದಿದ ಬಳಕೆದಾರರಲ್ಲಿ ಕೆಲವರು ತಮಾಷೆ ಮಾಡಿದ್ರೆ ಮತ್ತೆ ಕೆಲವರು ಟೀಕಿಸಿದ್ದಾರೆ.

30 ವರ್ಷದ ಮಹಿಳೆ ಪತ್ರಿಕೆಯೊಂದಕ್ಕೆ ವರ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡಿದ್ದಾಳೆ. ಇದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. @rishigree ಖಾತೆಯಲ್ಲಿ ಜಾಹೀರಾತಿನ ಫೋಟೋ ಪೋಸ್ಟ್ ಮಾಡಲಾಗಿದೆ. 30 ವರ್ಷ ವಯಸ್ಸಿನ ಸ್ತ್ರೀವಾದಿ ಮಹಿಳೆಗೆ ಬಂಡವಾಳಶಾಹಿಯ ವಿರುದ್ಧ ಕೆಲಸ ಮಾಡಲು ಸುಸ್ಥಾಪಿತ ವ್ಯಾಪಾರದೊಂದಿಗೆ 25 ವರ್ಷದ ಶ್ರೀಮಂತ ಹುಡುಗನ ಅಗತ್ಯವಿದೆ. ಯಾರಾದರೂ ಇದ್ದರೆ ಹೇಳಿ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ.

ದಿನಬಳಕೆಗೆ ಸಿಂಪಲ್ ಆಗಿರುವ ಚಿನ್ನದ ಕಿವಿಯೋಲೆಗಳ ಲೇಟೆಸ್ಟ್ ಕಲೆಕ್ಷನ್

ಅಷ್ಟಕ್ಕೂ ಜಾಹೀರಾತಿನಲ್ಲಿ ಏನಿದೆ? : ಯುವತಿ ಜಾಹೀರಾತಿನಲ್ಲಿ ತನ್ನ ವಯಸ್ಸು 30 ವರ್ಷ ಎಂದಿದ್ದಾಳೆ. ಅವಳು ಸ್ತ್ರೀವಾದಿಯಾಗಿದ್ದು, 25-28 ವರ್ಷ ವಯಸ್ಸಿನ ವರ ಬೇಕಂತೆ. ವರ ಆರೋಗ್ಯವಂತ ಮತ್ತು ಫಿಟ್ ಆಗಿರಬೇಕು. ಹುಡುಗ ಯಶಸ್ವಿ ವ್ಯಾಪಾರ ನಡೆಸುತ್ತಿರಬೇಕು ಮತ್ತು ಬಂಗಲೆ ಅಥವಾ 20 ಎಕರೆ ತೋಟದ ಮನೆಯನ್ನು ಹೊಂದಿರಬೇಕು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ. ಇದರ ಇನ್ನೊಂದು ವಿಶೇಷ ಅಂದ್ರೆ ಅಡುಗೆ. ಪೋಸ್ಟ್ನಲ್ಲಿ  ವರನಿಗೆ ಅಗತ್ಯವಾಗಿ ಅಡುಗೆ ಬರಬೇಕೆಂದು ಬರೆಯಲಾಗಿದೆ. 

ಇದನ್ನು ಓದಿದ ಬಳಕೆದಾರರು ನಗ್ತಿದ್ದಾರೆ. ಇನ್ಮುಂದೆ 10 ನಿಮಿಷದಲ್ಲಿ ವರ ಸಿಗುವಂತಹ ವ್ಯವಸ್ಥೆ ಬರಬೇಕೆಂದು ಕಮೆಂಟ್ ಮಾಡಿದ್ದಾರೆ. ಬಂಡವಾಳಶಾಹಿಗಳ ವಿರುದ್ಧ ಹೋರಾಡಲು ಅಕ್ಕನಿಗೆ ಬಂಡವಾಳ ಬೇಕಾಗಿದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ರೆ, ಈ ಅವಕಾಶ ಪಡೆಯಲು ತಮ್ಮ ತಂದೆ- ತಾಯಿಯನ್ನು ಮಾರಾಟ ಮಾಡುವ ಹುಡುಗರೂ ಇದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಪುರುಷರೇ, ಹಾಸಿಗೆಯಲ್ಲಿ ಹುಷಾರ್!‌ ಹೆಣ್ಣಿನಲ್ಲಿ ಈ ಗುಣ ಪುರುಷನಿಗಿಂತ 6 ಪಟ್ಟು ಹೆಚ್ಚಂತೆ!

ಅಡುಗೆಯೂ ಬರಬೇಕು ಎಂದಾದರೆ ಅಡುಗೆ ಮಾಡುವವರನ್ನು ನೇಮಿಸಿಕೊಳ್ಳಿ. ನಿಮಗೆ ಪತಿ ಯಾಕೆ ಬೇಕು ಎಂದು ಕೆಲವರು ಕೇಳಿದ್ದಾರೆ. ಇವರಿಗೆ ಪತಿಯ ಅಗತ್ಯವಿದೆಯಾ ಇಲ್ಲ ಸೇವಕರ ಅಗತ್ಯವಿದೆಯಾ ಎಂದು ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಸ್ತ್ರೀವಾದಿ ಮಹಿಳೆಗೆ ಇಷ್ಟೊಂದು ಹಣ ಏಕೆ ಬೇಕು ಎಂಬುದು ಕೂಡ ಕೆಲವರ ಪ್ರಶ್ನೆಯಾಗಿದೆ. ಈಕೆಯನ್ನ ಮದುವೆಯಾಗುವವರು ಯಾರಾದ್ರೂ ಇದ್ದಿರಬಹುದು ಎಂದು ಮತ್ತೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ತ್ರೀವಾದಿಗೆ ಮದುವೆ ಏಕೆ ಬೇಕು, ಇದು ತಮಾಷೆಯಾಗಿದೆ, ರೇವಾ ಪಾರ್ಟಿಗೆ ಫಾರ್ಮ್ ಹೌಸ್ ಅಗತ್ಯವಿದೆ, ನಾನು ಮದುವೆಯಾಗಲು ಸಿದ್ಧನಿದ್ದೇನೆ ಹೀಗೆ ಮಹಿಳೆ ಜಾಹೀರಾತಿಗೆ ನಾನಾ ಕಮೆಂಟ್ ಗಳು ಬಂದಿವೆ. ಇಂಥ ಜಾಹೀರಾತುಗಳು ಇದೇ ಮೊದಲಲ್ಲ. ಈ ಹಿಂದೆ ಕೂಡ ಸಾಕಷ್ಟು ಇಂತ ಫೋಸ್ಟ್ ವೈರಲ್ ಆಗಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಮಿಕಲ್ ಬೇಡ, ಈ 4 ಮನೆಮದ್ದಿನಿಂದ ಕಪ್ಪಾದ ಬೆಳ್ಳಿ ಕಾಲುಂಗುರ-ಗೆಜ್ಜೆ ಫಳ ಫಳ ಹೊಳೆಯುತ್ತೆ
ಹೆಣ್ಮಕ್ಕಳು ರಾತ್ರಿ ಕೂದಲು ಬಿಡೋದು, ಬಾಚೋದು ಮಾಡ್ಬಾರ್ದು.. ಇದರ ಹಿಂದಿದೆ ಈ ಕಾರಣ