ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಬಿರುಕಿಗೆ ಕಾರಣವೇನು ಎನ್ನುವುದು ಸ್ಪಷ್ಟವಾಗದಿದ್ದರೂ ನಟಿ ಕಂಗನಾ ರಣಾವತ್ ಅವರ ಮಾತು ಮಾತ್ರ ಭರ್ಜರಿ ಸೌಂಡ್ ಮಾಡುತ್ತಿದೆ!
ಈಗ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಬ್ರೇಕಪ್ದ್ದೇ ವಿಷಯ ಚರ್ಚೆಯಾಗುತ್ತಿದೆ. ಇದು ನಿಜವೋ, ಸುಳ್ಳೋ ಎಂಬ ಬಗ್ಗೆ ಹಲವಾರು ರೀತಿಯ ವಾದ-ಪ್ರತಿವಾದಗಳು ಇದ್ದರೂ, ಇದೀಗ ಐಶ್ವರ್ಯ ಅವರು ತಮ್ಮ ಹೆಸರಿನ ಎದುರಿಗಿರುವ ಬಚ್ಚನ್ ಸರ್ನೇಮ್ ತೆಗೆದು ಎಲ್ಲಾ ಗಾಳಿಸುದ್ದಿಗೂ ಫುಲ್ಸ್ಟಾಪ್ ಇಟ್ಟಿದ್ದಾರೆ. ಮಾತ್ರವಲ್ಲದೇ ಇತ್ತೀಚಿಗೆ ನಡೆಯುತ್ತಿರುವ ಹಲವಾರು ಘಟನೆಗಳನ್ನು ಗಮನಕ್ಕೆ ತೆಗೆದುಕೊಂಡರೆ, ಇವರು ಡಿವೋರ್ಸ್ ಪಡೆದುಕೊಳ್ಳುವುದು ಬಹುತೇಕ ನಿಜ ಎನ್ನುವುದು ತಿಳಿದಿದೆ. ಇದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಬಿ-ಟೌನ್ನಲ್ಲಿ ಚರ್ಚೆ ಶುರುವಾಗುತ್ತಲೇ ಇದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ, ಇದಕ್ಕೆ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ ಇದರ ನಡುವೆಯೇ, ಕಂಗನಾ ರಣಾವತ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಈ ಹೇಳಿಕೆಗೂ, ಐಶ್ವರ್ಯಾ ಬದುಕಿಗೂ ತಾಳೆ ಹಾಕಲಾಗುತ್ತಿದೆ. ಅಷ್ಟಕ್ಕೂ ಕಂಗನಾ ಏನೂ ಐಶ್ವರ್ಯ ರೈ ಅವರ ಕುರಿತು ಈ ಹೇಳಿಕೆಯನ್ನು ನೀಡಿದ್ದೇನೂ ಅಲ್ಲ, ಆದರೂ ಅದಕ್ಕೂ ಇದಕ್ಕೂ ಹೋಲಿಕೆ ಮಾಡಲಾಗುತ್ತಿದೆಯಷ್ಟೇ.
ಈ ವಿಡಿಯೋದಲ್ಲಿ ಕಂಗನಾ, ಸುಖಮಯ ದಾಂಪತ್ಯದ ಕುರಿತು ಹಾಗೂ ಪುರುಷರ ಮನಸ್ಥಿತಿಯ ಕುರಿತು ಹೇಳಿದ್ದಾರೆ. ಪುರುಷ ವರ್ಗ ಕಂಗನಾ ಮಾತಿಗೆ ಕಿಡಿ ಕಾರುತ್ತಿದ್ದರೆ, ಬಹುತೇಕ ಮಹಿಳೆಯರು ಸಂಸದೆ ಹೇಳಿದ್ದರಲ್ಲಿ ಸ್ವಲ್ಪವೂ ಅತಿಶೋಯಕ್ತಿ ಇಲ್ಲ ಎನ್ನುತ್ತಿದ್ದಾರೆ. ಕೆಲವರಂತೂ ಕಂಗನಾ ಕಂಡರೆ ನನಗೆ ಆಗಿಬರುವುದೇ ಇಲ್ಲ, ಅವರ ಮಾತುಗಳೂ ನನಗೆ ಇಷ್ಟವಾಗುವುದಿಲ್ಲ. ಆದರೆ ಈ ವಿಷಯದಲ್ಲಿ ಮಾತ್ರ ಕಂಗನಾ 200% ಕರೆಕ್ಟ್ ಇದ್ದಾರೆ ಎನ್ನುತ್ತಿದ್ದಾರೆ. ಹಾಗಿದ್ದರೆ ಅಂಥದ್ದೇನು ಹೇಳಿದ್ದಾರೆ ಎಂದು ನೋಡುವುದಾದರೆ, ಪುರುಷರು ಎಷ್ಟೇ ಎತ್ತರಕ್ಕೆ ಹೋಗಿರಲಿ, ಎಷ್ಟೇ ಹೆಸರು ಮಾಡಿರಲಿ, ಎಷ್ಟೇ ಪ್ರಖ್ಯಾತಿ ಗಳಿಸಿದರಲಿ, ಅವರಿಗಿಂತ ಒಂದು ಹೆಜ್ಜೆ ಮಹಿಳೆಯರು ಮುಂದೆ ಹೋಗಿಬಿಟ್ಟರು ಎಂದರೆ ಉರಿದು ಹೋಗುತ್ತಾರೆ. ಮಹಿಳೆಯರು ಎಂದಿಗೂ ತಮಗಿಂತ ಮುಂದೆ ಹೋಗುವುದನ್ನು ಪುರುಷರು ಸಹಿಸುವುದೇ ಇಲ್ಲ. ಬೆರಳೆಣಿಕೆ ಪ್ರಕರಣದಲ್ಲಿ ಹೀಗೆ ಆಗದೆ ಇರಬಹುದು. ಅದರೆ ಬಹುತೇಕ ಪುರುಷರ ಮನಸ್ಥಿತಿ ಹೀಗೆಯೇ ಇರುವುದು ಎಂದಿದ್ದಾರೆ.
4ನೇ ಹಂತದ ಕ್ಯಾನ್ಸರ್ ಗೆದ್ದ ಕಾರಣ ನೀಡಿದ ಸಿಧು ಪತ್ನಿಗೆ 850 ಕೋಟಿ ರೂ. ಲೀಗಲ್ ನೋಟಿಸ್!
ಇಷ್ಟಕ್ಕೇ ಸುಮ್ಮನಾಗದ ಕಂಗನಾ, ಕೆಲವೊಮ್ಮೆ ಮದುವೆ ಸುಖಮಯವಾಗಿ ಹೇಗೆ ಇರುತ್ತದೆ ಎಂದು ನಾನು ಅಚ್ಚರಿಪಡುತ್ತೇನೆ. ಆಗ ನೋಡಿದ್ರೆ, ಅಲ್ಲಿ ಮಹಿಳೆ ಫೇಲ್ ಆಗಿರುತ್ತಾಳೆ. ವೃತ್ತಿಯಲ್ಲಿ, ಯಶಸ್ಸಿನಲ್ಲಿ ಆಕೆ ಸೋಲನ್ನು ಒಪ್ಪಿಕೊಂಡಿರುತ್ತಾಳೆ. ಅಂಥ ಸಂದರ್ಭಗಳಲ್ಲಿ ಮಾತ್ರ ಪುರುಷರು ಆಕೆಯ ಜೊತೆ ಸುಖಮಯ ಸಂಸಾರ ಮಾಡುತ್ತಾರೆ, ಮದುವೆ ಸುಖಮಯವಾಗಿ ಇರುತ್ತದೆ ಎನ್ನುವ ಮೂಲಕ ಪುರುಷರಿಗೆ ಉರಿ ಹೊತ್ತಿಸಿದ್ದಾರೆ ಕಂಗನಾ ರಣಾವತ್.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮೂರು ದಿನಗಳಲ್ಲಿಯೇ ಒಂದು ಲಕ್ಷ ಮಂದಿ ಲೈಕ್ ಮಾಡಿದ್ದು, ನಟಿಯ ಹೇಳಿಕೆಗೆ ಭೇಷ್ ಭೇಷ್ ಎಂದಿದ್ದಾರೆ. ಲೈಕ್ ಮಾಡಿದವರಲ್ಲಿ ಕೆಲವರು ಪುರುಷರೂ ಇದ್ದಾರೆ ಎನ್ನುವುದು ಕುತೂಹಲದ ವಿಷಯ. ಆದರೆ ಹಲವರು ನಟಿಯ ಮಾತಿಗೆ ಕಿಡಿಯಾಗಿದ್ದಾರೆ. ಕೆಲವು ಪುರುಷರು ಹೀಗೆ ಇರಬಹುದು. ಹಾಗೆಂದು ಇಡೀ ಸಮುದಾಯವನ್ನು ಈ ರೀತಿ ಬಿಂಬಿಸುವುದು ಸರಿಯಲ್ಲ ಎಂದಿದ್ದರೆ, ಮತ್ತೆ ಕೆಲವರು, ಎಷ್ಟೋ ಮಹಿಳೆಯರು ಪುರಷರ ಯಶಸ್ಸನ್ನು ಸಹಿಸುವುದಿಲ್ಲ. ಅವರ ಬಗ್ಗೆಯೂ ಸ್ವಲ್ಪ ಹೇಳಿ ಎಂದಿದ್ದಾರೆ. ದಂಪತಿಯ ಮಧ್ಯೆ ಕಿಡಿ ಹೊತ್ತಿಸಲು ಇಂಥ ಹೇಳಿಕೆಗಳು ಯಶಸ್ವಿಯಾಗುತ್ತದೆ, ಇಂಥ ಕ್ರಮ ಖಂಡನೀಯ ಎಂದು ಕೆಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.
ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?