ಬೆಟ್ಟದ ತುದಿ ನಿಂತು ರೀಲ್ಸ್‌ ಮಾಡ್ತಿದ್ದ ಯುವತಿಗೆ ಮುಂದೇನಾಯ್ತು ನೋಡಿ! ಶಾಕಿಂಗ್‌ ವಿಡಿಯೋ ವೈರಲ್

Published : Nov 29, 2024, 06:06 PM IST
ಬೆಟ್ಟದ ತುದಿ ನಿಂತು ರೀಲ್ಸ್‌ ಮಾಡ್ತಿದ್ದ ಯುವತಿಗೆ ಮುಂದೇನಾಯ್ತು ನೋಡಿ! ಶಾಕಿಂಗ್‌ ವಿಡಿಯೋ ವೈರಲ್

ಸಾರಾಂಶ

ಬೆಟ್ಟದ ತುದಿ ನಿಂತು ರೀಲ್ಸ್‌ ಮಾಡ್ತಿದ್ದ ಯುವತಿಗೆ ಮುಂದೇನಾಯ್ತು ನೋಡಿ!  ಶಾಕಿಂಗ್‌ ವಿಡಿಯೋ ವೈರಲ್  

ಇಂದು  ರೀಲ್ಸ್‌ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್‍‌ ಎಂದು ಫೇಮಸ್‌ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್‌ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್‌ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್‌ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್‌ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.


ಈಗ ಹಿಮಾಚಲ ಪ್ರದೇಶದ ಚಂಬಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಯುವತಿಯೊಬ್ಬಳು ರೀಲ್ಸ್‌ ಮಾಡಲು ಬೆಟ್ಟದ ತುದಿಯಲ್ಲಿ ನಿಂತಿದ್ದಾರೆ. ತನ್ನ ದುಪ್ಪಟ್ಟಾ ಅನ್ನು ಹಾರಿಸುತ್ತಾ ವಿಡಿಯೋ ಮಾಡುತ್ತಿದ್ದಾಳೆ. ಅಲ್ಲಿಗೆ ಸುಮ್ಮನಾಗದೇ ಕುಣಿಯಲು ಶುರು ಮಾಡಿದ್ದಾಳೆ. ಆಗ ಏಕಾಏಕಿ ಆಯತಪ್ಪಿ ಕೆಳಕ್ಕೆ ಉರುಳಿ ಉರುಳಿ ಬಿದ್ದು ಹೋಗಿದ್ದಾಳೆ. ಅದೃಷ್ಟವಶಾತ್‌ ಆಕೆಯ ಪ್ರಾಣಕ್ಕೆ ಹಾನಿಯಾಗಿಲ್ಲ ಎನ್ನಲಾಗಿದೆ. ಆದರೆ ಗಂಭೀರವಾಗಿ ಏಟಾಗಿದೆ. ಅಲ್ಲಿ ಹುಲ್ಲು ಹೆಚ್ಚಾಗಿದ್ದರಿಂದ ಜೀವ ಉಳಿದಿದೆ. ಆದರೆ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎನ್ನಲಾಗಿದೆ.  ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತಿದ್ದರೂ ಒಂದಿಷ್ಟು ಲೈಕ್ಸ್‌, ಕಮೆಂಟ್ಸ್‌ಗಳಿಗಾಗಿ ಜೀವವನ್ನು ಪಣಕ್ಕಿಡುವುದು ಎಷ್ಟು ಸರಿ ಎನ್ನುವುದು ನೆಟ್ಟಿಗರ ಮಾತು. ಅದೂ ಅಲ್ಲದೇ ಈ ರೀತಿ ರೀಲ್ಸ್‌ ಹುಚ್ಚಿನಲ್ಲಿ ಜೀವ ಕಳೆದುಕೊಳ್ಳುವ ವಿಡಿಯೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‍‌ ಆದಾಗ, ಅಯ್ಯೋ ಪಾಪ ಎನ್ನುವವರೂ ಇರುವುದಿಲ್ಲ ಎನ್ನುವುದು ನೆನಪಿರಲಿ, ಆ ವಿಡಿಯೋ ವೈರಲ್‌ ಆಗಿ, ಅದನ್ನು ಶೇರ್‍‌ ಮಾಡಿದವರಿಗೆ ಬೆನಿಫಿಟ್‌ ಆಗತ್ತೆ ಅಷ್ಟೇ. ಆದರೆ ಅದನ್ನು ನೋಡಲು ಆ ರೀಲ್ಸ್‌ ಮಾಡಿರುವವರ ಪ್ರಾಣ ಇರುವುದಿಲ್ಲ ಎಂದು ಹಲವರು ಬುದ್ಧಿಮಾತನ್ನೂ ಹೇಳುತ್ತಿದ್ದಾರೆ. 

ರೀಲ್ಸ್‌ ಹುಚ್ಚಿಗೆ ಮಹಿಳೆಯರ ಒಳ ಉಡುಪು ಧರಿಸಿ ರಸ್ತೆಗೆ ಬಂದ! ಆಗಬಾರದ್ದು ಆಗೋಯ್ತು... ವಿಡಿಯೋ ವೈರಲ್‌

ಇತ್ತೀಚೆಗೆ ಜಲಪಾತದ ಮಧ್ಯೆ ನಿಂತುಕೊಂಡು ರೀಲ್ಸ್‌ ಮಾಡುವ ಸಂದರ್ಭದಲ್ಲಿ, ಪ್ರವಾಹದಲ್ಲಿ ಸಿಲುಕಿಕೊಂಡು ಕುಟುಂಬವೊಂದು ಕೊಚ್ಚಿ ಹೋದ ದೃಶ್ಯ ವೈರಲ್‌ ಆಗಿತ್ತು.  ಇದರ ಬೆನ್ನಲ್ಲೇ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ  ಅನ್ವಿ ಕಂಬಾರ್ ಎಂಬ 27 ವರ್ಷದ ಯುವತಿ  ರೀಲ್ಸ್ ಮಾಡಲು ಕಾರನ್ನು ರಿವರ್ಸ್ ತೆಗೆಯುವಾಗ 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿ ಸಾವನ್ನಪ್ಪಿದ್ದರು. ಹೀಗೆ ರೀಲ್ಸ್‌ ಹುಚ್ಚು ಪ್ರಾಣವನ್ನು ಪಡೆಯುತ್ತಿದ್ದರೂ ಅದನ್ನು ಲೆಕ್ಕಿಸದ ಯುವ ಸಮೂಹ ಒಂದೆಡೆಯಾದರೆ, ಇನ್ನೊಂದು ಕಡೆ ಇಂಥ ಅಶ್ಲೀಲ ಎನ್ನುವ ರೀಲ್ಸ್ ಮಾಡಿ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗುವುದೂ ಇದೆ. 

ಮೊನ್ನೆಯಷ್ಟೇ, ಹರಿಯಾಣದ ಪಾಣಿಪತ್‌ನಲ್ಲಿ ರೀಲ್ಸ್‌ ಹುಚ್ಚಿಗೆ  ಜನಜಂಗುಳಿ ಇರುವ ಮಾರ್ಕೆಟ್‌ನಲ್ಲಿ ಯುವಕನೊಬ್ಬ ಮಾಡಬಾರದ್ದು ಮಾಡಿ ಒದೆ ತಿಂದಿದ್ದ.  ಮಹಿಳೆಯರ ಒಳಉಡುಪು ಧರಿಸಿ ರೀಲ್ಸ್ ಮಾಡುತ್ತಿದ್ದ! ಆರಂಭದಲ್ಲಿ ಈತ ಒಬ್ಬ ಹುಚ್ಚ ಎಂದುಕೊಂಡರು ಜನರು. ಬಳಿಕ ರೀಲ್ಸ್‌ ಮಾಡುತ್ತಿರುವುದು ತಿಳಿಯಿತು. ಈತನನ್ನು ನೋಡಿ ಮಹಿಳೆಯರು ಮುಜುಗರ ಪಟ್ಟುಕೊಂಡಿದ್ದಾರೆ. ಜನರಿಗೂ ಅಶ್ಲೀಲ ಎನ್ನಿಸಿದೆ. ಅಷ್ಟಕ್ಕೆಸುಮ್ಮನಾಗದ ಜನರು, ಈತನ ಸುತ್ತುವರೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಆತನ ರೀಲ್ಸ್‌ ವೈರಲ್‌ ಆಯ್ತೋ ಇಲ್ವೋ ಗೊತ್ತಿಲ್ಲ. ಆದರೆ ಯುವಕನನ್ನು ಥಳಿಸಿದ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  

PREV
Read more Articles on
click me!

Recommended Stories

Viral Video: "ಡೋಂಟ್ ವರಿ ಕಂದ ನಾನಿದಿನಿ"..ಮರಿ ಆನೆಗಳಿಗೆ Z+ ಭದ್ರತೆ ನೀಡಿದ ಹಿರಿಯಾನೆಗಳು!
ಆರೋಗ್ಯಕರ ತಿಂಡಿಗಳು: ಹಸಿವಾದಾಗ ಏನು ತಿನ್ನಬೇಕು?