ಎದೆಹಾಲನ್ನು ಸಂಗ್ರಹಿಸಿಡಲು ಸಾಧ್ಯವೇ? ಅದು ಹೇಗೆ?

First Published Jun 19, 2021, 5:08 PM IST

ಕಚೇರಿ ಮತ್ತು ಮನೆಯನ್ನು ಒಟ್ಟಿಗೆ ನಿರ್ವಹಿಸುವ ಅಮ್ಮಂದಿರಿಗೆ ತಮ್ಮ ಶಿಶುಗಳಿಗೆ ಹಾಲುಣಿಸಲು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಎದೆಹಾಲು ಸಿಗದೇ ಹೋಗಬಹುದು. ಆದರೆ ಪ್ರಸ್ತುತ ಸ್ತನ ಪಂಪ್ ಅನೇಕ ಹೊಸ ಅಮ್ಮಂದಿರಿಗೆ ಅನಿವಾರ್ಯ. ಸುರಕ್ಷತೆ ಮತ್ತು ತಾಜಾತನವನ್ನು ಹೆಚ್ಚಿಸಲು ಪಂಪ್ ಮಾಡಿದ ಎದೆಹಾಲನ್ನು ಸಂಗ್ರಹಿಸುವ ಬಗ್ಗೆ ತಿಳಿದುಕೊಳ್ಳಬೇಕು.

ಕೋಣೆಯ ತಾಪಮಾನದಲ್ಲಿ ಎದೆ ಹಾಲುಕೋಣೆಯ ತಾಪಮಾನವು 77 ಡಿಗ್ರಿಗಳಿಗಿಂತ ಹೆಚ್ಚಾಗಿದ್ದರೆ, ಹಾಲು ತೆಗೆದ ನಾಲ್ಕು ಗಂಟೆಗಳೊಳಗೆ ರೆಫ್ರಿಜರೇಟರ್‌ನಲ್ಲಿ ಎದೆಹಾಲನ್ನು ಸಂಗ್ರಹಿಸುವುದು ಉತ್ತಮ. ಬಿಸಿಯಾದ ಕೋಣೆಯ ತಾಪಮಾನವು ಹಾಲನ್ನು ವೇಗವಾಗಿ ಕೆಡುವಂತೆ ಮಾಡುತ್ತದೆ.
undefined
ಮಗು ಪಂಪ್ ಮಾಡಿದ ಎದೆಹಾಲನ್ನು ಅರ್ಧ ಕುಡಿದಿದ್ದರೆ, ಅದನ್ನು ಎರಡು ಗಂಟೆ ಅದನ್ನು ತೆಗೆದಿರಿಸಿ. ನಂತರ ಬಳಕೆ ಮಾಡಬಹುದು. ಆದರೆ ಹೆಚ್ಚು ಸಮಯ ಇಟ್ಟರೆ ಅದು ಕೆಟ್ಟು ಹೋಗುತ್ತದೆ.
undefined

Latest Videos


ಹೊಸದಾಗಿ ಸಂಗ್ರಹಿಸಿದ ಹಾಲನ್ನು ಮಗುವಿನ ಬಾಯಿಯೊಂದಿಗೆ ಸಂಪರ್ಕಕ್ಕೆ ಬರದ ಕಾರಣ ಕೋಣೆಯ ತಾಪಮಾನದಲ್ಲಿ ನಾಲ್ಕು ಗಂಟೆಗಳ ಕಾಲ ಬಿಡಬಹುದು. ಒಂದು ವೇಳೆ ಅದು ಹೆಚ್ಚು ಕಾಲ ಹೊರಗಿದ್ದರೆ ಬ್ಯಾಕ್ಟೀರಿಯಾ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಬೇಗನೆ ಹಾಲು ಹಾಳಾಗುತ್ತದೆ.
undefined
ಪಂಪ್ ಮಾಡಿದ ಹಾಲನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದುಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ಪ್ರಕಾರ, ಹೊಸದಾಗಿ ತೆಗೆದ ಎದೆಹಾಲನ್ನು ರೆಫ್ರಿಜರೇಟರ್‌ನಲ್ಲಿ ನಾಲ್ಕು ದಿನಗಳವರೆಗೆ ಸಂಗ್ರಹಿಸಬಹುದು.
undefined
ರೆಫ್ರಿಜರೇಟರ್ ನಲ್ಲಿ ಎದೆಹಾಲನ್ನು ಇಡುವಾಗ, ಅದನ್ನು ಫ್ರಿಜ್ ನಲ್ಲಿ ಹಿಂಭಾಗದಲ್ಲಿ ಇಡಬೇಕು ಮತ್ತು ಬಾಗಿಲಲ್ಲಿ ಅಲ್ಲ. ಏಕೆಂದರೆ ಫ್ರಿಡ್ಜ್ ನ ಬಾಗಿಲು ಯಾವಾಗಲೂ ಕೋಣೆಯ ತಾಪಮಾನಕ್ಕೆ ಒಡ್ಡಲ್ಪಟ್ಟಿದೆ. ಫ್ರಿಡ್ಜ್ ನ ತಾಪಮಾನವು 39-40 ಡಿಗ್ರಿ ಫ್ಯಾರನ್ ಹೀಟ್ ನಡುವೆ ಇದೆ ಎಂದು ಖಚಿತಪಡಿಸಿಕೊಳ್ಳಿ.
undefined
ಈ ಹಾಲನ್ನು ಬಳಸುವ ಮೊದಲು, ಬಾಟಲಿಯನ್ನು ಬೆಚ್ಚಗಿನ ನೀರಿನ ಮಡಕೆಯಲ್ಲಿ ಇರಿಸಿ ಅಥವಾ ಕೆಲವು ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿಡಿ. ಅನೇಕ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದರೆ, ಮೊದಲು ಹಳೆಯದನ್ನು ಬಳಸುವ ಮೂಲಕ ಪ್ರಾರಂಭಿಸಿ.
undefined
ಸಂಗ್ರಹಿಸಿದ ಹಾಲಿನ ಜೀವಿತಾವಧಿಯನ್ನು ಹೆಚ್ಚಿಸಲು, ಅದನ್ನು ಫ್ರೀಜರ್‌ನಲ್ಲಿ ಇರಿಸಿಹೆಚ್ಚುವರಿ ಎದೆ ಹಾಲನ್ನು ಹೊಂದಿದ್ದರೆ, ಆರರಿಂದ 12 ತಿಂಗಳವರೆಗೆ ಎದೆಹಾಲನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು. ಸಾಧ್ಯವಾದಷ್ಟು ಬೇಗ ಅದನ್ನು ಬಳಸುವುದು ಉತ್ತಮ.
undefined
ಏಕೆಂದರೆ, ಮೂರು ತಿಂಗಳ ಸಂಗ್ರಹಣೆನಂತರ, ತಾಜಾ ಹಾಲಿಗೆ ಹೋಲಿಸಿದರೆ ಎದೆಹಾಲಿನಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಕಡಿಮೆ ಕೊಬ್ಬು ಇದೆ.
undefined
ನಾಲ್ಕು ನಿಯಮವನ್ನು ನೆನಪಿಡಿಎದೆಹಾಲನ್ನು ಸಂಗ್ರಹಿಸುವ ಈ ನಿಯಮವನ್ನು ಸರಳವಾಗಿ ನೆನಪಿಡಿ 'ಕೋಣೆಯ ತಾಪಮಾನದಲ್ಲಿ ನಾಲ್ಕು ಗಂಟೆಗಳು, ಫ್ರಿಜ್ನಲ್ಲಿ ನಾಲ್ಕು ದಿನಗಳು' ಅಲ್ಲದೆ, ಹಾಲನ್ನು ಫ್ರಿಜ್ ಅಥವಾ ಫ್ರೀಜರ್ನಲ್ಲಿ ಇಡುವ ಮೊದಲು ದಿನಾಂಕ ಮತ್ತು ಸಮಯದೊಂದಿಗೆ ಲೇಬಲ್ ಮಾಡಲು ಖಚಿತಪಡಿಸಿಕೊಳ್ಳಿ.
undefined
ಹಾಲು ಕೆಟ್ಟದಾಗಿದೆಯೇ ಎಂದು ಹೇಗೆ ಹೇಳುವುದು?ಎಷ್ಟೇ ಜಾಗರೂಕರಾಗಿರಲಿ, ಎದೆಹಾಲು ಕೆಡಬಹುದು. ಹಾಳಾದ ಎದೆಹಾಲು ಕೆಟ್ಟ ವಾಸನೆ ಅಥವಾ ಹುಳಿ ಅಥವಾ ಎರಡು ನೋಡಬಹುದು. ಹುಳಿ ವಾಸನೆ ಬಂದರೆ ಅದನ್ನು ಮತ್ತೆ ಬಳಕೆ ಮಾಡಬೇಡಿ.
undefined
click me!