ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದ ಮಧ್ಯಪ್ರದೇಶದ ಬೆಡಗಿ: ಯಾರೀ ನಿಕಿತಾ ಪೋರ್ವಾಲ್​?

By Suchethana D  |  First Published Oct 17, 2024, 3:56 PM IST

ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ  ಮಧ್ಯಪ್ರದೇಶದ ಸುಂದರಿ ನಿಕಿತಾ ಪೋರ್ವಾಲ್​ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ವಿಜೇತರಾಗಿದ್ದಾರೆ. ಯಾರಿವರು?
 


ನಿನ್ನೆ ರಾತ್ರಿ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ 24 ವರ್ಷದ ಬೆಡಗಿ ನಿಕಿತಾ ಪೋರ್ವಾಲ್ 2024 ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.  ಗುಜರಾತ್‌ನ ಆಯುಷಿ ಧೋಲಾಕಿಯಾ ಫೆಮಿನಾ ಮಿಸ್ ಇಂಡಿಯಾ 2024 - 2 ನೇ ರನ್ನರ್ ಅಪ್ ಆಗಿ ಆಯ್ಕೆಯಾದರು.  ಕಳೆದ ಬಾರಿಯ ಮಿಸ್​ ಇಂಡಿಯಾ ವರ್ಲ್ಡ್​​ ವಿಜೇತರಾಗಿದ್ದ ನಂದಿನಿ ಗುಪ್ತಾ ಅವರು, ನಿಖಿತಾಗೆ ಕಿರೀಟ ಮುಡಿಗೇರಿಸಿದರು. ಈ ವೇಳೆ ನಟಿ ನೇಹಾ ದೂಪಿಯಾ ಕೂಡ ವೇದಿಕೆಯ ಮೇಲಿದ್ದರು. 

ಮಾಜಿ ಮಿಸ್​ ಇಂಡಿಯಾ ಸಂಗೀತಾ ಬಿಜ್ಲಾನಿ ಅದ್ಭುತ ಪ್ರದರ್ಶನ ನೀಡಿ, ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮದಲ್ಲಿ ನೃತ್ಯಪಟು ರಾಘವ್​ ಜುಯಲ್​ ಸೇರಿದಂತೆ ಅನೇಕ ಸೆಲಿಬ್ರಿಟಿಗಳು ಹಾಜರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಅನುಷಾ ದಂಡೇಕರ್​ ಭಾಗಿಯಾಗಿದ್ದರು.  ನಿಕಿತಾ ಅವರು ಮಧ್ಯಪ್ರದೇಶದ ಉಜ್ಜೈಯಿನಿಯವರು. 

Tap to resize

Latest Videos

undefined

ಆಕಾಶ್​ಗೆ ಗುರುವಾಗಿದ್ದ ರತನ್​ ಟಾಟಾ: ಅಗಲಿದ ಉದ್ಯಮಿ ಕುರಿತು ನೀತಾ ಅಂಬಾನಿ ಭಾವುಕ

ಇವರು ಪೆಟ್ರೋಕೆಮಿಕಲ್​ ಉದ್ಯಮಿ ಅಶೋಕ್​ ಪೊರ್ವಾಲಾ ಅವರ ಪುತ್ರಿ. ಪದವಿಯನ್ನು ಪೂರ್ಣಗೊಳಿಸಿರುವ ಇವರು ರಂಗಭೂಮಿಯಲ್ಲಿಯೂ ಪದವಿ ಪಡೆದಿದ್ದಾರೆ. ಕಿರುತೆರೆಯಲ್ಲಿ ನಿರೂಪಕಿಯಾಗಿ 18ನೇ ವಯಸ್ಸಿನಲ್ಲಿಯೇ ಕಾಲಿಟ್ಟಿದ್ದ ನಿಖಿತಾ,  ಉತ್ತಮ ಕಥೆಗಾರ್ತಿಯೂ ಹೌದು. 60 ನಿಮಿಷದ ನಾಟಕವೊಂದರಲ್ಲಿ ನಟಿಸಿದ್ದಾರೆ. ಕೃಷ್ಣಾ ಲೀಲಾ ಎಂಬ 250 ಪುಟದ ನಾಟಕವನ್ನು ಸಹ ಇವರು ಬರೆದಿದ್ದಾರೆ.  ಇಷ್ಟೇ ಅಲ್ಲದೇ, ನಿಕಿತಾ ಅವರು,  ಅನೇಕ ಫೀಚರ್​ ಫಿಲ್ಮನ ಭಾಗವಾಗಿದ್ದಾರೆ. ಇವರ  ಚಿತ್ರಗಳು ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಸಾರವಾಗಿದ್ದು,  ಶೀಘ್ರದಲ್ಲಿಯೇ ಭಾರತದಲ್ಲಿಯೂ ಬಿಡುಗಡೆಗೆ ಸಜ್ಜಾಗಿವೆ. ಇತ್ತೀಚೆಗೆ ಇವರು  ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.  ಇನ್ನು  ಮಿಸ್​ ಇಂಡಿಯಾ ವರ್ಲ್ಡ್​ ಕುರಿತು ಹೇಳುವುದಾದರೆ,  ಈ ಪ್ರಶಸ್ತಿಯನ್ನು ಈವರೆಗೆ ಗೆದ್ದ ಭಾರತೀಯರು 1999ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೈಡೆನ್​, 1999ರಲ್ಲಿ ಯುಕ್ತಾ ಮುಖಿ, 2000ರಲ್ಲಿ ಪ್ರಿಯಾಂಕಾ ಚೋಪ್ರಾ, 2017ರಲ್ಲಿ ಮಾನುಷಿ ಚಿಲ್ಲರ್ ಪಡೆದಿದ್ದರು​.
 

ಇನ್ನು ನಿನ್ನೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ರೀತಿ ಇದೆ;

 ಫೆಮಿನಾ ಮಿಸ್​ ಇಂಡಿಯಾ ನಾರ್ತ್​ ಈಸ್ಟ್​​ 2024- ಏಂಜೆಲಿಯಾ ಅನ್ನಾ ಮಾರ್ವೆನ್​
ಫೆಮಿನಾ ಮಿಸ್​​ ಇಂಡಿಯಾ ಈಸ್ಟ್ 2024- ರಿಯಾ ನಂದಿನಿ
ಫೆಮಿನಾ ಮಿಸ್​ ಇಂಡಿಯಾ ಸೌತ್​​ 2024 ಮಲಿನಾ
ಫೆಮಿನಾ ಮಿಸ್​ ಇಂಡಿಯಾ ವೆಸ್ಟ್​ 2024- ಅರ್ಷಿಯಾ ರಶೀದ್​
ಫೆಮಿನಾ ಮಿಸ್​ ಇಂಡಿಯಾ ನಾರ್ಥ್​​ 2024- ಸಿಫ್ಟಿ ಸಿಂಗ್​ ಸಾರಂಗ್​​

ದುರ್ಗಾಪೂಜೆಯಲ್ಲಿ ಅರೆ ಬೆತ್ತಲು, ಜಿಮ್​ನಲ್ಲಿ ಸೀರೆಯುಟ್ಟು ವರ್ಕ್​ಔಟ್​: ಮಿಸ್​ ಕೋಲ್ಕತಾ ವಿಡಿಯೋ ವೈರಲ್​!
 

click me!