ದುರ್ಗಾಪೂಜೆಯಲ್ಲಿ ಅರೆ ಬೆತ್ತಲು, ಜಿಮ್​ನಲ್ಲಿ ಸೀರೆಯುಟ್ಟು ವರ್ಕ್​ಔಟ್​: ಮಿಸ್​ ಕೋಲ್ಕತಾ ವಿಡಿಯೋ ವೈರಲ್​!

By Suchethana D  |  First Published Oct 17, 2024, 12:36 PM IST

ದುರ್ಗಾ ಪೂಜೆಯಲ್ಲಿ ಅರೆ ಬೆತ್ತಲು ಡ್ರೆಸ್​ ತೊಟ್ಟಿದ್ದ ಮಾಜಿ ಮಿಸ್​ ಕೋಲ್ಕತಾ ಸನ್ನತಿ ಮಿತ್ರಾ ಈಗ ಜಿಮ್​ನಲ್ಲಿ ಸೀರೆಯುಟ್ಟು ವರ್ಕ್​ಔಟ್​ ಮಾಡಿರುವ ವಿಡಿಯೋ ಶೇರ್​ ಮಾಡಿದ್ದಾರೆ. ನೆಟ್ಟಿಗರು ಹೇಳ್ತಿರೋದೇನು?
 


ಕೆಲ ದಿನಗಳ ಹಿಂದೆ ನಡೆದ ದುರ್ಗಾಪೂಜೆಯಲ್ಲಿ ಅರೆ ಬೆತ್ತಲು ಡ್ರೆಸ್​ ತೊಟ್ಟಿದ್ದ ಮಾಜಿ ಮಿಸ್​ ಕೋಲ್ಕತಾ  ಸನ್ನತಿ ಮಿತ್ರಾ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್​ಗೆ ಒಳಗಾಗಿದ್ದರು. ಸನ್ನತಿ ಮಿತ್ರಾ ಸೇರಿದಂತೆ ಮೂವರು ರೂಪದರ್ಶಿಗಳು ದುರ್ಗಾಮಾತೆಯ ಎದುರು ಅತ್ಯಂತ ಅಶ್ಲೀಲ ಎನ್ನುವ ತೊಡುಗೆ ತೊಟ್ಟು ಪೋಸ್​ ಕೊಟ್ಟಿದ್ದರು. ಹೇಗಾದರೂ ಮಾಡಿ ಹೆಸರು ಗಳಿಸುವ ಹಂಬಲ ಹಲವರದ್ದು. ಸ್ವ ಪ್ರಯತ್ನದಿಂದ ಏನಾದರೂ ಮಾಡಿ ಸಾಧನೆ ಮಾಡಿದರೆ ಅಷ್ಟು ಸುಲಭದಲ್ಲಿ ಪ್ರಚಾರಕ್ಕೆ ಬರುವುದಿಲ್ಲ ಎನ್ನುವುದು ಬಹುತೇಕರಿಗೆ ತಿಳಿದಿದೆ. ಇದೇ ಕಾರಣಕ್ಕೆ ಇಂಥ ಅಶ್ಲೀಲ ಎನ್ನುವಂಥ ಕೃತ್ಯ ಎಸಗಿ ತಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತಾರೆ. ಕುಖ್ಯಾತಿ ಗಳಿಸಿಯಾದರೂ ಸೈ, ಒಟ್ಟಿನಲ್ಲಿ ಹೆಸರು ಮಾಡಬೇಕು ಎನ್ನುವುದು ಇಂಥವರ ಹಂಬಲ. ಇದೇ ಕಾರಣಕ್ಕೆ, ದುರ್ಗಾಪೂಜೆಯಲ್ಲಿ ಬಿಕಿನಿ ತೊಟ್ಟಿದ್ದಳು 2016ರಲ್ಲಿ ಮಿಸ್​ ಕೋಲ್ಕತಾ ಆಗಿದ್ದ ಸನ್ನತಿ ಮಿತ್ರಾ ಮತ್ತು ಇನ್ನಿಬ್ಬರು ರೂಪದರ್ಶಿಗಳು.

ಈಗ ಅದೇ ಸನ್ನತಿ ಜಿಮ್​ನಲ್ಲಿ ಸೀರೆಯುಟ್ಟ ವರ್ಕ್​ಔಟ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಜಿಮ್​ನಲ್ಲಿ ಜಿಮ್​  ಡ್ರೆಸ್​ ಹಾಕಿ ವರ್ಕ್​ಔಟ್​ ಮಾಡಿದರೆ ಖ್ಯಾತ ಸಿನಿಮಾ ಸೆಲೆಬ್ರಿಟಿಗಳ ವಿಡಿಯೋ ಮಾತ್ರ ವೈರಲ್​ ಆಗುತ್ತದೆ. ಇದೇ ಕಾರಣಕ್ಕೆ ಈ ರೀತಿಯ ವಿಭಿನ್ನ ಮಾರ್ಗವನ್ನು ಹಿಡಿದಿದ್ದಾರೆ ಈಕೆ.  ಈ ವಿಡಿಯೋ ಕೂಡ ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ. ಈ ರೀತಿ ಸೀರೆಯುಡುವ ಬದಲು, ಹಾಗೇ ಇದ್ದರೆ ಬೆಸ್ಟ್​ ಇತ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಆದರೆ ನಟಿಯ ಆಸೆ ಈಡೇರಿದೆ. ಸೀರೆಯಲ್ಲಿನ ವರ್ಕ್​ಔಟ್​ ಸಕ್ಸಸ್​ ಆಗಿದೆ. ಈ ಹಿಂದೆ  ಫಿಟ್‌ನೆಸ್ ಫ್ರೀಕ್   ರೀನಾ ಸಿಂಗ್  ಎಂಬ ಸಾಮಾಜಿಕ ಬಳಕೆದಾರರು ಸೀರೆಯುಟ್ಟು ವರ್ಕ್​ಔಟ್​ ಮಾಡಿದ್ದರು.  ಅವರು ಆಗಾಗ್ಗೆ ತನ್ನ  ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೇ ರೀತಿ, ಈಗ ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿ ಎಲ್ಲರ ಹುಬ್ಬೇರಿಸಿದ್ದರು. 

Tap to resize

Latest Videos

undefined

ಈ ನಟಿ ಬಾಯ್​ಫ್ರೆಂಡ್​ನನ್ನು ಬಿಡಲು ಕಾರಣವಾಗಿದ್ದು ಮೂತ್ರವಂತೆ! ಕೈನಾತ್ ಹೇಳಿದ್ದೇನು ಕೇಳಿ...

ಈ ವಿಡಿಯೋ ಒಂದೇ ದಿನದಲ್ಲಿ  33 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಇದಕ್ಕೆ 9 ಲಕ್ಷ 82 ಸಾವಿರದ 306 ಲೈಕ್ಸ್‌ ಸಹ ಸಿಕ್ಕಿದ್ದವು.  ಲ್ಯಾಟ್‌ ಪುಲ್‌ಡೌನ್‌ ಸೇರಿ ಅನೇಕ ವ್ಯಾಯಾಮ, ಕಸರತ್ತುಗಳನ್ನು ಸೀರೆ ಉಟ್ಟುಕೊಂಡೇ ಮಾಡಿದ್ದರು. ಸ್ಕ್ವಾಟ್‌ಗಳನ್ನು ನಿರ್ವಹಿಸುವಾಗ ಆಕೆ ಜಿಗಿಯುವುದು ಮತ್ತು ಬೃಹತ್ ಟೈರ್ ಅನ್ನು ಎತ್ತುವುದನ್ನು ಸಹ ಕಾಣಬಹುದು. ಈಗ ಅದೇ ಮಾದರಿಯನ್ನು ಅನುಸರಿಸಿದ್ದಾರೆ ಸನ್ನತಿ ಮಿತ್ರಾ. ಇನ್ನು ಸನ್ನತಿ ಕುರಿತು ಹೇಳುವುದಾದರೆ,  ಅವರು Instagram ಪ್ರಭಾವಿ ಮತ್ತು ಮಾಡೆಲ್ ಆಗಿಯೂ ಹೆಸರು ಮಾಡಿದ್ದಾರೆ.

ಇನ್ನು ಸನ್ನತಿ ದುರ್ಗಾದೇವಿ ಮುಂದೆ ಬಿಕಿನಿ ಧರಿಸಿ ಪೋಸ್​ ಕೊಟ್ಟಾಗಿನಿಂದ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈ ರೀತಿ ಪೋಸ್​ ಕೊಟ್ಟು ಅವರು,  ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರ ಲುಕ್​ ಅನ್ನು ‘ಬಂಡಾಯ’ ಎಂದು ಬರೆದುಕೊಂಡಿದ್ದರು.  ‘ಇದು ತುಂಬಾ ಬಂಡಾಯವಾಗಿತ್ತು, ಇದು ಸಾಧ್ಯ ಎಂದು ನಾವು ಎಂದಿಗೂ ಯೋಚಿಸಲಿಲ್ಲ, ನಾವು ಯಾವಾಗಲೂ ನಮ್ಮ ದೇಹವನ್ನು ‘ಕೆಟ್ಟದ್ದು’ ಎಂದು ತಿಳಿದಿದ್ದೇವೆ ಆದರೆ ಜೀವನವು ಹೊಸ ಉದಾಹರಣೆಗಳು ಮತ್ತು ಅನುಭವಗಳನ್ನು ನೀಡುತ್ತದೆ’ ಎಂದಿದ್ದರು. ಆದರೆ ಇದು ಸಾಕಷ್ಟು ಟ್ರೋಲ್​ಗೆ ಒಳಗಾಗಿತ್ತು. ಧಾರ್ಮಿಕ ಆಚರಣೆಗೆ ಇಂಥ ಬಟ್ಟೆ ಸೂಕ್ತವಲ್ಲ. ಪೂಜಾ ಮಂಟಪದಲ್ಲಿ ಈ ರೀತಿಯ ಅಸಭ್ಯತೆಯನ್ನು ನಿಲ್ಲಿಸಿ. ಇದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು  ಆಕ್ರೋಶ ವ್ಯಕ್ತಪಡಿಸಿದ್ದರು.  ಇದು ಮಹಿಳಾ ಸಬಲೀಕರಣವಲ್ಲ. ಇದು ನಮ್ಮ ಸನಾತನ ಧರ್ಮವನ್ನು ಗೇಲಿ ಮಾಡುತ್ತಿದ್ದಾರೆ ಎಂದು ಮತ್ತೆ ಕೆಲವರು ಹೇಳಿದ್ದರು.

ಮಿನಿ ಸ್ಕರ್ಟ್​ ಬಿಟ್ಟು ಬುರ್ಖಾಧಾರಿಯಾದ ಗಗನಸಖಿ ರಿಧಿ ಜಾಧವ್​- ಬಿಗ್​ಬಾಸ್​ ಅದ್ನಾನ್​ ಶೇಖ್​​ ಚಪ್ಪಲಿ ಮೇಲೆ ನೆಟ್ಟಿಗರ ಕಣ್ಣು!

click me!