ಗಂಡ ತಾಂಡವ್​ಗಾಗಿ ಬದಲಾಯ್ತು ಭಾಗ್ಯಳ ಲುಕ್​! ಸುಂದರಿಯಾಗಿ ಕಂಡ್ರೂ ನೆಟ್ಟಿಗರಿಂದ ತೀವ್ರ ಆಕ್ರೋಶ

By Suchethana D  |  First Published Oct 17, 2024, 11:59 AM IST

ಗಂಡನಿಗಾಗಿ ಭಾಗ್ಯ ಬದಲಾಗಿದ್ದಾಳೆ. ಸೊಸೆಯನ್ನು ಮಗನ ಸಲುವಾಗಿ ಲುಕ್​ ಬದಲಿಸಿದ್ದಾಳೆ ಕುಸುಮಾ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ವಿಷಯ?
 


ಶ್ರೇಷ್ಠಾ ಮದ್ವೆಯಾಗ್ತಿರೋ ಹುಡುಗ ಯಾರು ಎಂದು ಕಂಡುಹಿಡಿಯಲು ಭಾಗ್ಯ ಹರಸಾಹಸ ಪಟ್ಟರೂ ಅದಿನ್ನೂ ಗೊತ್ತಾಗಲಿಲ್ಲ! ಎಲ್ಲರಿಗೂ ಸತ್ಯ ತಿಳಿದಿದ್ದರೂ ವಿಚಿತ್ರ ಎಂಬಂತೆ ಭಾಗ್ಯಳಿಗೆ ಮಾತ್ರ ಇನ್ನೂ ಸತ್ಯ ಗೊತ್ತಾಗಲಿಲ್ಲ. ಆ ಹುಡುಗ ತನ್ನ ಗಂಡ ತಾಂಡವ್​ನೇ ಇರಬೇಕು ಎಂಬ ಸಂದೇಹದಿಂದ ಆ ಸತ್ಯವನ್ನು ತಿಳಿಯಲು ಭಾಗ್ಯ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಸತ್ಯ ಮಾತ್ರ ಗೊತ್ತಾಗಲಿಲ್ಲ. ಅತ್ತ ಶ್ರೇಷ್ಠಾಳನ್ನು ಕಟ್ಟಿ ಹಾಕಿ ಕುಸುಮಾ, ಪೂಜಾ ಎಲ್ಲರೂ ಸೇರಿ ಹಿಂಸೆ ಕೊಡುತ್ತಿರುವ ವಿಷಯ ತಾಂಡವ್​ಗೆ ಗೊತ್ತಾಗಿದೆ. ಎಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಹವಣಿಸುತ್ತಿದ್ದಾಳೆ. ಆದರೆ ಇನ್ನೊಂದು ತಿಂಗಳು ತಡೆದುಕೋ. ಅಷ್ಟರಲ್ಲಿ ಅಮ್ಮ ತನ್ನ ಕೈಯಾರೇ ಡಿವೋರ್ಸ್​ ಕೊಡಿಸುತ್ತಾಳೆ ಎಂದು ಶ್ರೇಷ್ಠಾಳನ್ನು ಸಮಾಧಾನಪಡಿಸಿದ್ದಾನೆ ತಾಂಡವ್​. 

ಅಷ್ಟಕ್ಕೂ ಆತ ಹಾಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ಮದುವೆ ಮಂಟಪದಿಂದ  ತಾಂಡವ್​ನನ್ನು   ಎಳೆದುಕೊಂಡು ಬಂದಿದ್ದಳು ಕುಸುಮಾ.  ಆಗ ತಾಂಡವ್​ಗೆ ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಳು. ಅಷ್ಟಕ್ಕೂ ತಾಂಡವ್​ಗೆ ಭಾಗ್ಯಳ ಮೇಲಿರೋ ಬಹುದೊಡ್ಡ ಸಿಟ್ಟು ಎಂದರೆ ಆಕೆ ಹಳೆ ಕಾಲದ ಹೆಂಗಸಿನ ರೀತಿ ಇದ್ದಾಳೆ, ಶ್ರೇಷ್ಠಾಳಂತೆ ಮಾಡರ್ನ್​ ಆಗಿಲ್ಲ, ಪೆದ್ದಿ ಎನ್ನೋದು. ಆದ್ರೆ ಇದಾಗಲೇ ಭಾಗ್ಯ ಇಂಗ್ಲಿಷ್​ ಕಲಿತು, ಎಸ್​ಎಸ್​ಎಲ್​ಸಿ ಬರೆದು, ಲಕ್ಷಗಟ್ಟಲೆ ದುಡಿಯೋ ಕೆಲಸನೂ ಗಿಟ್ಟಿಸಿಕೊಂಡಾಯ್ತು. ಈಗ ಏನಿದ್ದರೂ ಆಕೆಯನ್ನು ಸುಂದರಿಯಾಗಿ ಮಾಡುವುದು ಅಷ್ಟೇ. ಅದನ್ನೆ ಕುಸುಮಾ ಹೇಳಿದ್ದಳು.

Tap to resize

Latest Videos

undefined

ಈ ನಟಿ ಬಾಯ್​ಫ್ರೆಂಡ್​ನನ್ನು ಬಿಡಲು ಕಾರಣವಾಗಿದ್ದು ಮೂತ್ರವಂತೆ! ಕೈನಾತ್ ಹೇಳಿದ್ದೇನು ಕೇಳಿ...

ಇದನ್ನು ಕೇಳಿ ನೆಟ್ಟಿಗರು ಸೀರೆ ಜಾಗದಲ್ಲಿ ಜೀನ್ಸ್​ ಬರತ್ತೆ, ಜಡೆ ಹೋಗಿ ಬಾಬ್​ಕಟ್​ ಬರತ್ತೆ ಎಂದೆಲ್ಲಾ ಅಂದುಕೊಂಡಿದ್ದರು. ಆದರೆ ಹಾಗೆ ಏನೂ ಆಗಿಲ್ಲ. ಸೀರೆಯಲ್ಲಿಯೇ ಭಾಗ್ಯ ಇನ್ನಷ್ಟು ಸುಂದರಿಯಾಗಿ ಕಾಣುವ ಹಾಗೆ ಕುಸುಮಾ ಮಾಡಿದ್ದಾಳೆ. ಅದರ ಪ್ರೊಮೋ ಬಿಡುಗಡೆಯಾಗಿದೆ. ನಿನ್ನನ್ನು ಬಿಟ್ಟು ತಾಂಡವ್​ ಯಾರನ್ನೂ ನೋಡಲ್ಲ ಎಂದು ಹೇಳಿದ್ದಾಳೆ. ಹೆಚ್ಚಿಗೆ ಏನೂ ವ್ಯತ್ಯಾಸ ಕಾಣದಿದ್ದರೂ ಬಿಟ್ಟ ಕೂದಲಿನಿಂದಾಗಿ ಚೆನ್ನಾಗಿ ಕಾಣಿಸುತ್ತಿದ್ದಾಳೆ ಭಾಗ್ಯ. ಆದರೆ ನೆಟ್ಟಿಗರು ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ಎಂದರೆ, ಶ್ರೇಷ್ಠಾಳ ಎದುರು ಭಾಗ್ಯಳನ್ನು ಎಮ್ಮೆ ಎಂದಿದ್ದಾನೆ ತಾಂಡವ್​. ಪತ್ನಿಯನ್ನು ಈ ರೀತಿ ಸೀರಿಯಲ್​ಗಳಲ್ಲಿ ಸಂಬೋಧಿಸಿ ಅದನ್ನೇ ಮಾದರಿ ಮಾಡಿಕೊಳ್ಳುವ ಹಾಗೆ ಮಾಡುವುದು ಎಷ್ಟು ಸರಿ ಎಂದು ಛೀಮಾರಿ ಹಾಕುತ್ತಿದ್ದಾರೆ ನೆಟ್ಟಿಗರು. 

 

ಇನ್ನೊಂದು ವಿಷಯ ಏನೆಂದರೆ,  ಗಂಡನಿಗಾಗಿ ಅದೂ ತಾಂಡವ್​ನಂಥ ಗಂಡನಿಗಾಗಿ ಹೆಣ್ಣು ಬದಲಾಗಬೇಕಾ ಎನ್ನುವ ಪ್ರಶ್ನೆ ನೆಟ್ಟಿಗರದ್ದು.  ಗಂಡನಿಗಾಗಿ ಹೆಂಡತಿ ತನ್ನತನವನ್ನೇ ಮರೆಯಬೇಕಾ? ಇಷ್ಟು ಬದಲಾಗಬೇಕಾ? ಹೆಣ್ಣಿನ ಹಣೆಬರಹವೇ ಇಷ್ಟಾ, ಹೆಣ್ಣಿನ ಜನ್ಮ ಗಂಡ, ಅತ್ತೆಯ ಅಣತಿಯಂತೆ ನಡೆಯುವುದಾ? ಅದೇ ಅವಳ ಜೀವನನಾ... ಎಂದೆಲ್ಲಾ  ಹಲವು ಪ್ರಶ್ನೆಗಳನ್ನು ಕಮೆಂಟ್​  ಮೂಲಕ ಕೇಳುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು. ಇಂಥ ದೃಶ್ಯಗಳನ್ನು ತೋರಿಸಿ ಏನು ಹೇಳಲು ಹೊರಟಿದ್ದೀರಿ ಎನ್ನುವುದು ಅವರ ಪ್ರಶ್ನೆ. 
 

ಮಿನಿ ಸ್ಕರ್ಟ್​ ಬಿಟ್ಟು ಬುರ್ಖಾಧಾರಿಯಾದ ಗಗನಸಖಿ ರಿಧಿ ಜಾಧವ್​- ಬಿಗ್​ಬಾಸ್​ ಅದ್ನಾನ್​ ಶೇಖ್​​ ಚಪ್ಪಲಿ ಮೇಲೆ ನೆಟ್ಟಿಗರ ಕಣ್ಣು!

click me!