'ಬ್ರಾ-ಪ್ಯಾಂಟಿ' ಧರಿಸೋದು ಬಿಡೋದು ವೈಯಕ್ತಿಕ ವಿಷಯ - ಉರ್ಫಿ!

First Published | Mar 17, 2022, 7:47 PM IST

ಉರ್ಫಿ ಜಾವೇದ್ (Urfi Javed)ತಮ್ಮ ಡ್ರೆಸ್ಸಿಂಗ್‌ನಿಂದ ಟ್ರೋಲ್‌ಗೆ ಗುರಿಯಾಗುವುದು ಈ ದಿನಗಳಲ್ಲಿ ಹೊಸ ವಿಷಯವೇನಲ್ಲ. ಒಂದಲ್ಲ ಒಂದು ಕಾರಣಕ್ಕೆ ಉರ್ಫಿ ಸದಾ ಚರ್ಚೆಯಲ್ಲಿರುತ್ತಾರೆ. ನಟನೆ ಇಲ್ಲದೆ ಮುಖ್ಯಾಂಶಗಳಲ್ಲಿ ಹೇಗೆ ಇರಬೇಕೆಂದು ಬಹುಶಃ ಉರ್ಫಿ ಜಾವೇದ್‌ಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ. ಈಗ ಮತ್ತೆ ಉರ್ಫಿ ಸುದ್ದಿ ಅಗಿದ್ದಾರೆ. ಬ್ರಾ-ಪ್ಯಾಂಟಿ' ಧರಿಸುವುದು ಅವರ ವೈಯಕ್ತಿಕ ವಿಷಯ ಎಂದು ಉರ್ಫಿ ಹೇಳಿದ್ದಾರೆ.
 

Image: Urfi JavedInstagram

ಉರ್ಫಿ ಜಾವೇದ್  ಅವರು ಬ್ರಾ ಧರಿಸಲು ಇಷ್ಟಪಡುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಇದನ್ನು ಟ್ರೋಲ್‌ ಮಾಡಿದವರಿಗೆ ನಟಿ ತಿರುಗೇಟು ನೀಡಿದ್ದಾರೆ ಮತ್ತು ತಮ್ಮ ಕೋಪವನ್ನು ಕ್ಯಾಮರಾದ ಮುಂದೆ ವ್ಯಕ್ತಪಡಿಸಿದ್ದಾರೆ.  
 

ನಾನು ಬ್ರಾ-ಪ್ಯಾಂಟಿ ಧರಿಸಿದ್ದೇನೆಯೇ ಅಥವಾ ಇಲ್ಲವೇ ಎಂದು ನೀವು ಯಾಕೆ ಚಿಂತೆ ಮಾಡುತ್ತಿದ್ದೀರಿ. ನಿಮ್ಮದನ್ನು ನೀವು ನೋಡಿಕೊಳ್ಳಿ ಎಂದು ಹೇಳಿದರು. ಒಳ ಉಡುಪು ಧರಿಸುವುದು ವೈಯಕ್ತಿಕ ವಿಷಯ ಎಂದು ಉರ್ಫಿ ಟ್ರೋಲ್‌ ಮಾಡಿದವರ ಬಾಯಿ ಮುಚ್ಚಿದ್ದಾರೆ.

Tap to resize

Image: Urfi JavedInstagram

ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮಕೋಪವನ್ನು ವ್ಯಕ್ತಪಡಿಸಿದ್ದಾರೆ. ಅವರ  ಬಟ್ಟೆಗಳ ಬಗ್ಗೆ ಬರೆಯುವ ರೀತಿಯಿಂದ ಯುವ ಪೀಳಿಗೆಗೆ ಅವರ ಬಗ್ಗೆ ಕೆಟ್ಟ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಮೀಡಿಯಾದ ಮೇಲೆ ಕೆಂಡ ಕಾರಿದ್ದಾರೆ.

Urfi

ನನ್ನ ಬಗ್ಗೆ ಕೆಟ್ಟದಾಗಿ ನ್ಯೂಸ್‌ ಚಾನೆಲ್‌ಗಳಲ್ಲಿ ಹೇಳಿ ಜನರಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವಿರಿ.ಮೊದಲನೆಯದಾಗಿ ನನ್ನ ಮಿತಿಗಳನ್ನು ನಿರ್ಧರಿಸಲು ನೀವು ಯಾರು ಎಂದು ವಿಡಿಯೋದಲ್ಲಿ ಉರ್ಫಿ ಹೇಳಿದ್ದಾರೆ.

Image: Urfi JavedInstagram

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದೆ. ಉರ್ಫಿ ಅವರ ಮಾತಿಗೆ ಅನೇಕರು ಸಹಮತ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ ಮತ್ತೆ ಯಾರೋ ಅಸಹ್ಯಕರ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ಒಳ ಉಡುಪನ್ನು ಮರೆತಿದ್ದರೂ ಮೇಕಪ್ ಮಾಡಿಕೊಳ್ಳುವುದನ್ನು ಮರೆಯಲಿಲ್ಲ ಎಂದು ನೆಟಿಜನ್ ಒಬ್ಬರು ಬರೆದಿದ್ದಾರೆ. ಈ ಹುಡುಗಿಗೆ ಪೂರ್ತಿ ಹುಚ್ಚು, ಏನೋ ಹೇಳುತ್ತಾಳೆ, ಏನೋ ಧರಿಸುತ್ತಾಳೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ

ಬಿಗ್ ಬಾಸ್ OTT ಸಹಾಯದಿಂದ ಮರಳಿದ ಉರ್ಫಿ ಜಾವೇದ್,  ಪದೇ ಪದೇ ಸುದ್ದಿಯಾಗುವುದು ಅವರ ನಟನೆಯಿಂದಲ್ಲ ಆದರೆ ಅವರ ವಿಚಿತ್ರ ಬಟ್ಟೆಗಳಿಂದಾಗಿ. ಬೋಲ್ಡ್  ವಿಲಕ್ಷಣ ಬಟ್ಟೆಗಳನ್ನು ಧರಿಸುವ ಉರ್ಫಿ ತನ್ನ ಫ್ಯಾಶನ್ ಸೆನ್ಸ್‌ಗಾಗಿ ಪದೇ ಪದೇ ಅವಹೇಳನಕಾರಿ ಹೇಳಿಕೆಗಳಿಗೆ ಬಲಿಯಾಗಿದ್ದಾರೆ. ಆದರೆ, ಉರ್ಫಿ ಇವುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಏಕೆಂದರೆ ಟ್ರೋಲ್ ಆಗುವುದು ಮಾಮೂಲು. 

Latest Videos

click me!