ಜೈಲು ಸೇರಿದ ಸುನಂದಾ: ಸಹಾಯ ಮಾಡಲು ಬಂದ ಗಂಡನನ್ನೇ ಧಿಕ್ಕರಿಸಿ ಕಕ್ಕಾಬಿಕ್ಕಿಯಾಗಿಸಿದ ಭಾಗ್ಯ!

By Suchethana D  |  First Published Dec 12, 2024, 3:41 PM IST

ಶ್ರೇಷ್ಠಾಳನ್ನು ಸಾಯಿಸಲು ಹೋದ ಕಾರಣ ಸುನಂದಾ ಜೈಲು ಸೇರಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ಬಂದ ತಾಂಡವ್‌ನನ್ನು ಧಿಕ್ಕರಿಸಿದ್ದಾಳೆ ಭಾಗ್ಯ. ಮುಂದೇನು?
 


ಒಂದು ಕಡೆ ಮಗಳ ಬಾಳು ಹಾಳಾಗಿರುವ ನೋವು, ಇನ್ನೊಂದು ಕಡೆ ಅಕ್ಕ ಪಕ್ಕದವರ ಕುಹಕ ಮಾತುಗಳು, ಮತ್ತೊಂದು ಕಡೆ ಅಳಿಯನ ಲವರ್‍‌ ಶ್ರೇಷ್ಠಾಳ ಕಿರುಕುಳು... ಇವೆಲ್ಲವುಗಳಿಂದ ಭಾಗ್ಯಳ ಅಮ್ಮ ಸುಸ್ತಾಗಿ ಹೋಗಿದ್ದಾಳೆ.ಶ್ರೇಷ್ಠಾಳೋ ತಾನು ಗೆದ್ದು ಬೀಗಿದೆ ಎನ್ನುವ ಖುಷಿಯಲ್ಲಿದ್ದಾಳೆ. ಆದರೆ ಸುಮ್ಮನೇ ಇರದೇ ಭಾಗ್ಯಳ ತವರಿಗೆ ಹೋಗಿ ಕಿರಿಕ್‌ ಮಾಡುತ್ತಿದ್ದಾಳೆ. ಇದಾಗಲೇ ಕುಸುಮಾ, ಭಾಗ್ಯ, ಭಾಗ್ಯಳ ಅಮ್ಮ ಸುನಂದಾ ಅವರಿಂದ ಹಲವು ಬಾರಿ ಕಪಾಳಮೋಕ್ಷ ಮಾಡಿಸಿಕೊಂಡರೂ ಆಕೆಗೆ ಬುದ್ಧಿ ಬಂದಿಲ್ಲ. ಭಾಗ್ಯಳ ಬದುಕನ್ನು ಇನ್ನಷ್ಟು ಛಿದ್ರ ಮಾಡುವುದೇ ಅವಳಿಗೆ ಇರುವ ಗುರಿಯಾಗಿದೆ. ಅದೇ ಇನ್ನೊಂದೆಡೆ, ಅಕ್ಕ ಪಕ್ಕದ ಮನೆಯವರ ಕುಹಕದ ಮಾತುಗಳು. ಹೆಣ್ಣೊಬ್ಬಳು ಎಷ್ಟೇ ಮುಂದೆ ಬಂದರೂ, ಗಂಡ ಎಂಥದ್ದೇ ಕ್ರೂರಿಯಾಗಿದ್ದರೂ ಅದು ಲೆಕ್ಕಕ್ಕೆ ಬರುವುದೇ ಇಲ್ಲ. ಗಂಡನೇ ದೇವರು, ಆತನೇ ಸರ್ವಸ್ವ, ಏನೇ ಆದರೂ ಅವನ ಜೊತೆ ಬಾಳಬೇಕು ಎನ್ನುವ ಕ್ರೂರ ಮನಸ್ಥಿತಿಯಿಂದ ಸಮಾಜ ಹೇಗೆ ಹೊರಕ್ಕೆ ಬಂದಿಲ್ಲ ಎನ್ನುವುದನ್ನು ಇದಾಗಲೇ ಈ ಸೀರಿಯಲ್‌ ಮೂಲಕ ತೋರಿಸಲಾಗಿದೆ. ಒಂದು ಹೆಣ್ಣು, ಆಕೆಯ ಕುಟುಂಬದವರು ದುಃಖದಲ್ಲಿ ಇರುವಾಗ ಅವರನ್ನು ಇನ್ನಷ್ಟು ಹೇಗೆ ನೋಯಿಸಬೇಕು ಎಂದು ಅಕ್ಕ ಪಕ್ಕದ ಮಹಿಳೆಯರೇ ಹೇಗೆ ಮುಂದೆ ಬರುತ್ತಾರೆ ಎನ್ನುವುದು ಕೂಡ ಈ ಭಾಗ್ಯಲಕ್ಷ್ಮಿಯಲ್ಲಿ ತೋರಿಸಲಾಗಿದೆ. 

ಇದನ್ನೆಲ್ಲಾ ಕೇಳಿ ಕೇಳಿ ಸುನಂದಾ ರೋಸಿ ಹೋಗಿದ್ದಾಳೆ. ಚಾಕು ಹಿಡಿದು ಮನೆಯಿಂದ ನಡೆದಿದ್ದಾಳು. ಸುನಂದಾ ಎಲ್ಲಿ ಹೋದಳು ಎಂದು ಮನೆಯವರೆಲ್ಲರೂ ಹುಡುಕಾಡಿದ್ದಾರೆ. ಮನೆಯಲ್ಲಿಯೇ ಫೋನ್‌ ಬಿಟ್ಟು ಹೋಗಿರುವ ಸುನಂದಾ ಎಲ್ಲಿ ಹೋದಳು ಎನ್ನುವುದು ತಿಳಿಯುತ್ತಿಲ್ಲ. ಅದರೆ ಸುನಂದಾ ನೇರವಾಗಿ ಹೋಗಿರುವುದು ಶ್ರೇಷ್ಠಾ ಇದ್ದಲ್ಲಿ. ಅವಳಿಗೆ ಎಚ್ಚರಿಕೆ ಕೊಟ್ಟು ಮಗಳ ಬಾಳಿನಲ್ಲಿ ಆಟವಾಡಬೇಡ ಎಂದು ಹೇಳಲು ಹೋಗಿದ್ದಾಳೆ. ಆದರೆ ಶ್ರೇಷ್ಠಾ ಕೇಳಬೇಕಲ್ಲ. ಸುನಂದಾಳನ್ನು ಮತ್ತಷ್ಟು ಉರಿಸಿದ್ದಾಳೆ. ಮೊದಲೇ ಚಾಕು ಹಿಡಿದು ಬಂದ ಸುನಂದಾ ಕೆಟ್ಟ ಕೋಪದಲ್ಲಿ ಶ್ರೇಷ್ಠಾಳನ್ನು ಸಾಯಿಸಲು ಹೋಗಿದ್ದಳು. ಆದರೆ ಸಾಯಿಸಿ ಇರಲಿಲ್ಲ. ಆದರೆ ಕೊಲೆ ಪ್ರಯತ್ನದ ಆರೋಪದ ಮೇಲೆ ಆಕೆಯನ್ನು ಜೈಲಿಗೆ ತಳ್ಳಲಾಗಿದೆ. 

Tap to resize

Latest Videos

ಮನೆಯವರನ್ನು ವಿರೋಧಿಸಿ ಮದ್ವೆಯಾದ್ವಿ: ಆದ್ರೆ ಕೊನೆಗೆ ಸಾಯುವ ಹಂತಕ್ಕೆ ಬಂದೆ... ಕಿರಿಕಿ ಕೀರ್ತಿ ಓಪನ್‌ ಮಾತು...

ಮನೆಯವರಿಗೆ ವಿಷಯ ತಿಳಿದು ಗಾಬರಿಯಾಗಿದ್ದಾರೆ. ಇದನ್ನೇ ಮುಂದು ಮಾಡಿಕೊಂಡು ತಾಂಡವ್‌ ಒಂದು ಷರತ್ತಿಗೆ ಒಪ್ಪುವುದಾದರೆ ಸುನಂದಳನ್ನು ಬಿಡಿಸುವುದಾಗಿ ಹೇಳಿದ್ದಾಳೆ. ತನ್ನ ಮಾತನ್ನು ಭಾಗ್ಯ ಕೇಳುತ್ತಾಳೆ ಎಂದೇ ಆತ ಅಂದುಕೊಂಡಿದ್ದ. ಆದರೆ ಕೆಂಡಾಮಂಡಲ ಆಗಿರುವ ಭಾಗ್ಯಳಿಗೆ ಪತಿಯ ಕುತಂತ್ರ ಬುದ್ಧಿ ಗೊತ್ತಲ್ಲ, ಅದಕ್ಕಾಗಿಯೇ ನಿಮ್ಮ ಸಹಾಯವೂ ಬೇಡ, ಷರತ್ತೂ ಬೇಡ. ಯಾವುದೇ ಷರತ್ತು ಇಲ್ಲದೇ ಅಮ್ಮನನ್ನು ಹೇಗೆ ಬಿಡಿಸಿಕೊಂಡು ಬರಬೇಕು ಎನ್ನುವುದು ಚೆನ್ನಾಗಿ ಗೊತ್ತು ಎಂದು ಹೇಳಿ ಉಗಿದು ಕಳಿಸಿದ್ದಾಳೆ. ಇದನ್ನು ಕೇಳಿ ತಾಂಡವ್‌ ಮತ್ತು ಶ್ರೇಷ್ಠಾಳಿಗೆ ಶಾಕ್‌ ಆಗಿದೆ. ನೆಟ್ಟಿಗರಿಗಂತೂ ಈ ಪ್ರೊಮೋ ನೋಡಿ ಖುಷಿಯೋ ಖುಷಿ.

undefined

ಈಗ ಸುನಂದಾಳನ್ನು ಬಿಡಿಸಿಕೊಂಡು ಬರುವ ಹೊಣೆ ಭಾಗ್ಯಳ ಮೇಲಿದೆ. ಮುಂದೇನಾಗತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಅತ್ತ ಪತ್ನಿ ಮನೆ ಬಿಟ್ಟು ಹೋದರೂ , ಅತ್ತ ಸಂತೋಷ ಆಗಿರುವ ಬದಲು ತಾಂಡವ್‌ ಕೊತ ಕೊತ ಕುದಿಯುತ್ತಿದ್ದಾನೆ. ಮಕ್ಕಳನ್ನುಹೇಗಾದರೂ ವಾಪಸ್‌ ಕರೆತರುವ ಪಣ ತೊಟ್ಟಿದ್ದಾನೆ. ಇನ್ನು ಶ್ರೇಷ್ಠಾಳೋ ತಾನು ಗೆದ್ದು ಬೀಗಿದೆ ಎನ್ನುವ ಖುಷಿಯಲ್ಲಿದ್ದಾಳೆ. ಆದರೆ ಸುಮ್ಮನೇ ಇರದೇ ಭಾಗ್ಯಳ ತವರಿಗೆ ಹೋಗಿ ಕಿರಿಕ್‌ ಮಾಡುತ್ತಿದ್ದಾಳೆ. ಇದಾಗಲೇ ಕುಸುಮಾ, ಭಾಗ್ಯ, ಭಾಗ್ಯಳ ಅಮ್ಮ ಸುನಂದಾ ಅವರಿಂದ ಹಲವು ಬಾರಿ ಕಪಾಳಮೋಕ್ಷ ಮಾಡಿಸಿಕೊಂಡರೂ ಆಕೆಗೆ ಬುದ್ಧಿ ಬಂದಿಲ್ಲ. ಭಾಗ್ಯಳ ಬದುಕನ್ನು ಇನ್ನಷ್ಟು ಛಿದ್ರ ಮಾಡುವುದೇ ಅವಳಿಗೆ ಇರುವ ಗುರಿಯಾಗಿದೆ. ಮುಂದೇನಾಗುತ್ತದೆಯೋ ನೋಡಬೇಕಿದೆ. 

ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್‌ ಕುರಿತು ಬಾಲಿವುಡ್‌ ನಟಿ ಹೇಳಿದ್ದೇನು?

click me!