ಬಯ್ಕೋತಾನೇ ಲಕ್ಷ್ಮಿ ಬಾರಮ್ಮ ನೋಡೋರ ಸಂಖ್ಯೆ ಹೆಚ್ಚಾಗಿದೆ, ಟಿಆರ್‌ಪಿಯಲ್ಲಿ ಬಿಗ್ ಬಾಸ್ ಹಿಂದಿಕ್ಕಿದ ಸೀರಿಯಲ್!

By Pavna Das  |  First Published Dec 12, 2024, 6:23 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಗ್ಗೆ ವೀಕ್ಷಕರು ಟ್ರೋಲ್ ಮಾಡುತ್ತಿದ್ದರೂ, ಬೈಯುತ್ತಿದ್ದರೂ ನೋಡೋರ ಸಂಖ್ಯೆ ಮಾತ್ರ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಟಿಆರ್‌ಪಿಯಲ್ಲೂ ಸಹ ಈ ಧಾರಾವಾಹಿ ನಂಬರ್ 1 ಸ್ಥಾನ ಪಡೆದಿದೆ. 


ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳು, ರಿಯಾಲಿಟಿ ಶೋಗಳು (reality shows)ಒಂದಕ್ಕಿಂತ ಒಂದನ್ನು ಮೀರಿಸುವಂತೆ ಅದ್ಭುತವಾದ ಕಂಟೆಂಟ್ ಗಳೊಂದಿಗೆ ಪ್ರಸಾರವಾಗುತ್ತಿದೆ. ಆದರೆ ಟಿಆರ್‌ಪಿ ನೋಡಿದ್ರೆ ಮಾತ್ರ ಯಾವುದನ್ನ ಜನ ಎಷ್ಟು ಇಷ್ಟ ಪಡ್ತಾರೆ, ಹೆಚ್ಚಾಗಿ ನೋಡ್ತಾರೆ ಅನ್ನೋದನ್ನು ತಿಳಿಯಬಹುದು. ಪ್ರತಿಯೊಂದು ಸೀರಿಯಲ್ ಹಾಗೂ ರಿಯಾಲಿಟಿ ಶೋಗಳ ಟಿಆರ್‌ಪಿ(TRP) ವಾರದಿಂದ ವಾರಕ್ಕೆ ಬದಲಾಗುತ್ತಲೇ ಇರುತ್ತೆ. ಕೆಲವು ಸೀರಿಯಲ್ ಗಳು ನಿರಂತರವಾಗಿ ಟಾಪ್ ಸ್ಥಾನ ಅಲಂಕರಿಸಿದ್ರೆ, ಇನ್ನೂ ಕೆಲವು ಸೀರಿಯಲ್ ಗಳ ಟಿಆರ್‌ಪಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಸಾಗುತ್ತೆ. ಇದೀಗ 2024ರ 49ನೇ ವಾರದ ಧಾರಾವಾಹಿ ಟಿಆರ್​ಪಿ ಹೊರ ಬಿದ್ದಿದ್ದು, ಅಚ್ಚರಿ ಎನ್ನುವಂತೆ, ಬಿಗ್ ಬಾಸ್ ನ್ನು ಮೀರಿ ಮತ್ತೊಂದು ಧಾರಾವಾಹಿ ಅತಿ ಹೆಚ್ಚು ಟಿಆರ್‌ಪಿ ಪಡೆದಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಸ್ಪರ್ಧಿಗಳ ಬಗ್ಗೆ ವೀಕ್ಷಕರು ಕಿಡಿ ಕಾರುತ್ತಿದ್ದರೂ ಸಹ ಟಿಆರ್‌ಪಿಯಲ್ಲಿ ವಾರದಲ್ಲೂ- ವೀಕೆಂಡ್ ಗಳಲ್ಲೂ ಈ ಶೋ ಒಳ್ಳೆಯ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ ಬಿಗ್ ಬಾಸ್ ಗೆ  8.4 ಟಿವಿಆರ್​ ಸಿಕ್ಕಿದೆ. ಶನಿವಾರ ನಗರ ಭಾಗದಲ್ಲಿ 9.5 ಟಿಆರ್​ಪಿ ಹಾಗೂ ಭಾನುವಾರ 10.8 ಟಿಆರ್​ಪಿ ಸಿಕ್ಕಿದೆ. ವಾರ ಕಳೆದಂತೆ ಟಿಆರ್​ಪಿ ಹೆಚ್ಚುತ್ತಲೇ ಇದೆ.

Tap to resize

Latest Videos

ಇನ್ನು ಅಚ್ಚರಿಯ ವಿಷ್ಯ ಅಂದ್ರೆ ಜನ ಸಿಕ್ಕಾಪಟ್ಟೆ ಬೈಯ್ಕೊಳ್ತಿದ್ದ, ಇದೆಂಥ ಸೀರಿಯಲ್, ಒಂದ್ಸಲ ಈ ಸೀರಿಯಲ್ ಮುಗಿಸಿ, ನೋಡೋದಕ್ಕೆ ಆಗ್ತಿಲ್ಲ ಎನ್ನುತ್ತಿದ್ದ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಈ ವಾರ ಭರ್ಜರಿ  ಟಿಆರ್​ಪಿ ಗಳಿಸಿದೆ. ಸದ್ಯ ಸೀರಿಯಲ್ ನಲ್ಲಿ ಮಹಾ ತಿರುವು ಸಿಕ್ಕಿದ್ದು, ವೈಷ್ಣವ್ ಗೆ ಅಮ್ಮ ಕಾವೇರಿ ಬಗ್ಗೆ ಎಲ್ಲಾ ರೀತಿಯ ಸತ್ಯ ಗೊತ್ತಾಗಿತ್ತು, ಆತನೇ ಬಂದು ಅಮ್ಮನ ವಿರುದ್ಧ ಸಾಕ್ಷಿ ನುಡಿದಿದ್ದರಿಂದ ಸದ್ಯ ಕಾವೇರಿ ಜೈಲು ಸೇರುತ್ತಿದ್ದಾಳೆ. ಈ ಕುತೂಹಲಕಾರಿ ಎಪಿಸೋಡ್ ಗಳನ್ನು ವೀಕ್ಷಕರು ಸಿಕ್ಕಾಪಟ್ಟೆ ಕಾತುರದಿಂದ ನೋಡುತ್ತಿದ್ದು, ಹಾಗಾಗಿ ಉಳಿದೆಲ್ಲಾ ಸೀರಿಯಲ್ ಹಾಗೂ ಬಿಗ್ ಬಾಸನ್ನು ಹಿಂದಿಕ್ಕಿ ಈ ವಾರ ಅತಿ ಹೆಚ್ಚಿನ ರೇಟಿಂಗ್ ಪಡೆಯುವ ಮೂಲಕ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ ಲಕ್ಷ್ಮೀ ಬಾರಮ್ಮ. 

ಇನ್ನು ಉಳಿದ ಸೀರಿಯಲ್ ಗಳ ಬಗ್ಗೆ ಹೇಳೋದಾದರೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ.  ಮೂರನೇ ಸ್ಥಾನದಲ್ಲಿ ‘‘ಪುಟ್ಟಕ್ಕನ ಮಕ್ಕಳು’ ಹಾಗೂ ‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಇದೆ. ಸತತವಾಗಿ ಅಗ್ರಸ್ಥಾನವನ್ನೇ ಕಾಯ್ದುಕೊಂಡಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್, ಇದೀಗ ಸ್ನೇಹಾ ಸಾವಿನ ನಂತರ ನೋಡುಗರ ಸಂಖ್ಯೆ ಕಡಿಮೆಯಾದಂತೆ ಕಾಣಿಸ್ತಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ, ಐದನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. 
 

click me!