ಸೀತಾರಾಮ ಸೀರಿಯಲ್ ಸೀತಾ ಅಂದರೆ ನಟಿ ವೈಷ್ಣವಿ ಗೌಡ ಅವರು ಸ್ನೇಹಿತೆಯರ ಜೊತೆಗಿರುವ ಹಳೆಯ ಫೋಟೋ ವೈರಲ್ ಆಗಿದೆ. ಇದನ್ನು ನೋಡಿದ್ರೆ ಏನನಿಸುತ್ತದೆ?
ಹಲವಾರು ಕಿರುತೆರೆ ಮತ್ತು ಹಿರಿತೆರೆ ತಾರೆಯರು ಅದರಲ್ಲಿಯೂ ಹೆಚ್ಚಾಗಿ ನಟಿಯರ ಹಳೆಯ ಚಿತ್ರಗಳನ್ನು ನೋಡಿದಾಗ, ಇವರೇ ಅವರು ಹೌದಾ ಎಂದು ಅಚ್ಚರಿಯಿಂದ ನೋಡುವಷ್ಟು ಬದಲಾವಣೆ ಕಾಣಿಸುತ್ತಿರುತ್ತದೆ. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಮುದ್ದು ಮುದ್ದಾಗಿ, ಚೆನ್ನಾಗಿದ್ದರೆ ದೊಡ್ಡವರಾಗುತ್ತಿದ್ದಂತೆಯೇ ಆ ಸೌಂದರ್ಯ, ಮುಗ್ಧತೆ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ನಟಿಯರ ವಿಷಯದಲ್ಲಿ ಹಾಗಲ್ಲ, ಬರು ಬರುತ್ತಾ, ಕೈಯಲ್ಲಿ ದುಡ್ಡು ಸೇರುತ್ತಿದ್ದಂತೆಯೇ ದೇಹದ ಬೇಕಾದ ಭಾಗಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ, ಬ್ರಹ್ಮ ಕೊಟ್ಟ ಮೂಲ ಸ್ವರೂಪವನ್ನೇ ತಿದ್ದಿ ತೀಡಿ ಬಿಡುತ್ತಾರೆ. ಇನ್ನು ಕೆಲವು ನಟಿಯರು ಮೇಕಪ್, ಅದೂ, ಇದೂ, ಡಯೆಟ್ ಇವುಗಳ ಮೊರೆ ಹೋಗಿ ಸುಂದರಿಯಂತೆ ಕಾಣುವುದು ಇದೆ.
ಅದೇ ರೀತಿ ಈಗ ಸೀತಾರಾಮ ಸೀರಿಯಲ್ ವೈಷ್ಣವಿ ಗೌಡ, ನಟಿ ಅಮೂಲ್ಯ ಸೇರಿದಂತೆ ಅವರ ಬಾಲ್ಯದ ಸ್ನೇಹಿತೆಯರ ಫೋಟೋ ವೈರಲ್ ಆಗಿದೆ. ಹಿಂದೆ ಈ ನಾಲ್ವರು ಸ್ನೇಹಿತೆಯರು ಹೇಗಿದ್ದರು, ಈಗ ಹೇಗಿದ್ದಾರೆ ಎನ್ನುವುದು ಫೋಟೋದಲ್ಲಿ ನೋಡಿದರೆನೇ ತಿಳಿದುಬಿಡುತ್ತದೆ. ಇದಕ್ಕೆ ಹೆಚ್ಚಿನ ವಿವರಗಳ ಅಗತ್ಯವೇನೂ ಇಲ್ಲ. ಆದರೆ ಇದರಲ್ಲಿ ಹೈಲೈಟ್ ಆಗ್ತಿರೋದು ನಟಿ ವೈಷ್ಣವಿ ಗೌಡ. ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.
ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ? ತೂಕ ಇಳಿಸೋ ಟಿಪ್ಸ್ ಕೊಡುತ್ತಲೇ ಮನದ ಮಾತು ತೆರೆದಿಟ್ಟ 'ಸೀತಾ'
ಈ ಫೋಟೋ ನೋಡಿದಾಗ, ಹೇಗಿದ್ದ ವೈಷ್ಣವಿ ಅವರು, ಕೈಯಲ್ಲಿ ದುಡ್ಡು ಸೇರುತ್ತಲೇ ಈಗ ಹೇಗೆ ಕಾಣಿಸುತ್ತಿದ್ದಾರೆ ಎನ್ನುವುದು ರಿವೀಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಲೇ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ವೈಷ್ಣವಿ ಅವರು ಪ್ರಚಾರದಲ್ಲಿ ಇರುವ ಕಾರಣ, ಅವರ ಬಗ್ಗೆ ಸಹಜವಾಗಿ ಹೆಚ್ಚಿನ ಡಿಸ್‌ಕಷನ್ ಆಗುತ್ತಿದೆ. ಮೊನ್ನೆಯಷ್ಟೇ ವೈಷ್ಣವಿ ಅವರು, ಬಾಲಿವುಡ್‌ಗೆ ಹೋಗುವ ಕನಸನ್ನು ತೆರೆದಿಟ್ಟಿದ್ದರು. ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಇದಾಗಲೇ ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದಾರೆ. ಅದರಂತೆಯೇ ತಮಗೂ ಆ ಆಸೆ ಇದೆ ಎನ್ನುವುದನ್ನು ಹೇಳಿದ್ದರು.
ತಮ್ಮ ಕಾರ್ಯವನ್ನು ಸಿದ್ಧಿಸಿಕೊಳ್ಳಬೇಕು ಎಂದರೆ ಅದಕ್ಕಿರುವ ಹಲವು ವಿಧಾನಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋ ಶೇರ್ ಮಾಡಿರುವ ನಟಿ, ಅದರ ಬಗ್ಗೆ ಹೇಳುತ್ತಲೇ ಬಾಲಿವುಡ್ ಕನಸನ್ನು ತೆರೆದಿಟ್ಟಿದ್ದಾರೆ. 'ನೀವು ಬಾಲಿವುಡ್‌ಗೆ ಹೋಗಬಹುದಲ್ವಾ ಎನ್ನುವ ಪ್ರಶ್ನೆ ಮಾಡುತ್ತಾರೆ. ಆದರೆ ಆ ಮನಸ್ಸು ನನಗೂ ಇದೆ. ಅಲ್ಲಿಯೂ ನಟಿಯಾಗುವ ಆಸೆ ಇದೆ. ಆದರೆ ಅದು ಅಷ್ಟು ಸುಲಭವಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಮ್ಮ ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದೇ ಆಗುವುದು. ಆದರೆ ಕೆಲವು ವಿಧಾನಗಳ ಮೂಲಕ ನನ್ನ ಆಸೆಯನ್ನು ನೆರವೇರಿಸಿಕೊಳ್ಳುತ್ತಿದ್ದೇನೆ' ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.
ಸ್ನೇಹಿತೆ ಎತ್ತಿದ ರಭಸಕ್ಕೆ ಕಾಣಬಾರದ್ದೆಲ್ಲಾ ಕಂಡೋಯ್ತು! ವೈರಲ್ ವಿಡಿಯೋ ಝೂಮ್ ಮಾಡಿ ಮಾಡಿ ನೋಡ್ತಿರೋ ನೆಟ್ಟಿಗರು!