ಚಿರತೆ ಬಣ್ಣದ ಬೋಲ್ಡ್ ಮೊನೊಕಿನಿಯಲ್ಲಿ ಶಮಾ ಸಿಕಂದರ್, ಇವತ್ತಿಗೆ ಸಾಕು ಎಂದ ಫ್ಯಾನ್ಸ್!

First Published Oct 31, 2023, 6:26 PM IST

ಇತ್ತೀಚೆಗೆಷ್ಟೇ ಮಳೆಯಲ್ಲಿ ಸೊಂಟಬಳುಕಿಸಿ ಸದ್ದು ಮಾಡಿದ್ದ ನಟಿ ಶಮಾ ಸಿಕಂದರ್ ಇದೀಗ ಚಿರತೆ ಬಣ್ಣದ ಮೊನೊಕಿನಿಯಲ್ಲಿ ವೈರಲ್ ಆಗಿದ್ದಾರೆ. ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಶಮಾಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದಾರೆ.
 

ಶಾರ್ಟ್ ಫಿಲ್ಮ್ ಸೀರಿಸಿ, ಕಿರುತೆರೆಗಳಲ್ಲಿ ಕಾಣಿಸಿಕೊಳ್ಳುವ ನಟಿ ಶಮಾ ಸಿಕಂದರ್ ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಬೋಲ್ಡ್ ಅವತಾರಗಳನ್ನು ಪೋಸ್ಟ್ ಮಾಡುತ್ತಾ ಪ್ರತಿ ದಿನ ಸಂಚಲನ ಸೃಷ್ಟಿಸುತ್ತಿದ್ದಾರೆ.
 

ಇದೀಗ ಶಮಾ ಸಿಕಂದರ್ ಚಿರತೆ ಬಣ್ಣದ ಮೊನೊಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಮಾ ಸಿಕಂದರ್ ಸೆಕ್ಸಿ ಅವತಾರಕ್ಕೆ ಅಭಿಮಾಗಳು ಪಿಧಾ ಆಗಿದ್ದಾರೆ. ಇವತ್ತಿಗೆ ಸಾಕು, ಇನ್ನೇನಿದ್ದರೂ ನಾಳೆ ಹೊಸ ಫೋಟೋ ಹಂಚಿಕೊಳ್ಳಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
 

Latest Videos


ಇತ್ತೀಚೆಗೆ ಶಮಾ ತುಂತುರ ಮಳೆಯಲ್ಲಿ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದರು. ಸೇರೆಯುಟ್ಟು ಸೊಂಟಬಳುಕಿಸಿದ್ದ ಶಮಾ ವಿಡಿಯೋ ಭಾರಿ ವೈರಲ್ ಆಗಿತ್ತು.
 

ಮಳೆಗಾಲ ಅಂತ್ಯಗೊಳ್ಳುವ ಮೊದಲು ಮಾನ್ಸುನ್ ರೀಲ್ ಎಂದು ಪೋಸ್ಟ್ ಹಾಕಿದ್ದ ಶಮಾಗೆ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದರು. ಸೀರೆಯಲ್ಲಿ ಶಮಾ ಸೌಂದರ್ಯಕ್ಕೆ ಮಾರು ಹೋಗಿದ್ದರು.

ಬಿಕಿನಿ ಡ್ರೆಸ್‌ನಲ್ಲಿ ಪದೇ ಪದೇ ಕಾಣಿಸಿಕೊಂಡು ಬೆಂಬಲಿಗರ ಮನತಣಿಸಿರುವ ಶಮಾ, ಕೆಲ ಜಾಹೀರಾತು, ಎಂಡೋರ್ಸ್‌ಮೆಂಟ್‌ಗಳಲ್ಲೂ ಸಕ್ರಿಯರಾಗಿದ್ದಾರೆ.
 

ಹೇ ಮೇರಿ ಲೈಫ್ ಹೇ ಸೀರಿಯಲ್ ಮೂಲಕ ಶಮಾ ಸಿಕಂದರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದು ಶಮಾ ಮೊದಲ ಸೀರಿಯಲ್ ಅನ್ನೋದು ಮತ್ತೂ ವಿಶೇಷ.
 

2021ರಲ್ಲಿ ಶಮಾ ಸಿಕಂದರ್ ಅಮೆರಿಕದ ಜೇಮ್ಸ್ ಮಿಲಿರಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತಿ ಜೊತೆಗಿನ ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
 

ನಟನೆಯಿಂದ ದೂರ ಉಳಿದಿರುವ ಶಮಾ, ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಪ್ರತಿ ದಿನ ಹಾಟ್ ಫೋಟೋ ವಿಡಿಯೋಗಳನ್ನು ಹಂಚಿಕೊಂಡು ಸಂಚಲನ ಸೃಷ್ಟಿಸುತ್ತಿದ್ದಾರೆ.

click me!