ಕಾವೇರಿಗೆ ಒಲಿದ 'ಜನ ಮೆಚ್ಚಿದ ಮಂಥರೆ' ಪಟ್ಟ..' ಫ್ಯಾನ್ಸ್‌ ಹೇಳ್ತಿದ್ದಾರೆ.. ವಜ್ರೇಶ್ವರಿಗೆ ಬರ್ಬೇಕಿತ್ತು!

Published : Sep 20, 2024, 11:02 PM IST
ಕಾವೇರಿಗೆ ಒಲಿದ 'ಜನ ಮೆಚ್ಚಿದ ಮಂಥರೆ' ಪಟ್ಟ..' ಫ್ಯಾನ್ಸ್‌ ಹೇಳ್ತಿದ್ದಾರೆ.. ವಜ್ರೇಶ್ವರಿಗೆ ಬರ್ಬೇಕಿತ್ತು!

ಸಾರಾಂಶ

ಕನ್ನಡ ಕಿರುತೆರೆ ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಅತ್ತೆ ಹಾಗೂ ವೈಷ್ಣವ್ ನ ಮುದ್ದಿನ ಅಮ್ಮ ಕಾವೇರಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸುಷ್ಮಾ ನಾಣಯ್ಯಗೆ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಸಿಕ್ಕಿದೆ.

ಕನ್ನಡ ಕಿರುತೆರೆ ಕಲರ್ಸ್ ಕನ್ನಡ ವಾಹಿನಿಯು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ ಬಹುಮಾನ ನೀಡಿ ಪ್ರತಿವರ್ಷ ಗೌರವಿಸಲಾಗುತ್ತದೆ. ಆ ಕಾರ್ಯಕ್ರಮಕ್ಕೆ ವಾಹಿನಿ ನೀಡಿರುವ ಹೆಸರೇ ಅನುಬಂಧ ಅವಾರ್ಡ್ಸ್. ಅಂತೆಯೇ ಈ ಬಾರಿಯ ಅನುಬಂಧ ಅವಾರ್ಡ್ಸ್ 2024 ಸಮಾರಂಭವು ಅದ್ದೂರಿಯಾಗಿ ನಡೆದಿದೆ. ಜನ ಮೆಚ್ಚಿದ ಹಾಗೂ ಮನೆ ಮನ ಮೆಚ್ಚಿದ ಪ್ರತಿಭಾವಂತ ಕಲಾವಿದರನ್ನು ವೇದಿಕೆಗೆ ಕರೆದು ಗೌರವಿಸಿ, ಸಂಭ್ರಮಿಸಲಾಗಿದೆ. ಹಾಗಂತ, ಇದು ಪ್ರಶಸ್ತಿ ಮಾತ್ರ ನೀಡುವ ಕಾರ್ಯಕ್ರಮವಲ್ಲ. ಎಲ್ಲರೂ ಒಟ್ಟಾಗಿ ಸಂಭ್ರಮಿಸುವ ವೇದಿಕೆ. ಅಲ್ಲಿ ತಮಾಷೆ, ಡ್ಯಾನ್ಸ್, ಭಾವುಕ ಕ್ಷಣ ಎಲ್ಲವೂ ಇರುತ್ತದೆ. 

ಕಲರ್ಸ್ ಕನ್ನಡ ಪಾಲಿಗೆ ಅನುಬಂಧ ಒಂದು ಸಂಭ್ರಮವೇ ಸರಿ. ಅಂದಹಾಗೆ, ವಿವಿಧ ಕ್ಷೇತ್ರಗಳ ಗಣ್ಯರು, ಕಲರ್ಸ್ ಕನ್ನಡ ವಾಹಿನಿಯ ಕಲಾವಿದರು, ಚಿತ್ರ ನಟ-ನಟಿಯರು ಕೂಡ ಆಗಮಿಸುತ್ತಾರೆ. ಇವರಿಂದ ಆರ್ಹರಾದವರಿಗೆ ಪ್ರಶಸ್ತಿಯನ್ನು ಕೊಡಿಸಲಾಗುತ್ತದೆ. ಅಂತೆಯೇ ಈ ಸಾಲಿನ ಜನ ಮೆಚ್ಚಿದ ಮಂಥರೆ ಪಟ್ಟ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕಾವೇರಿಗೆ ಒಲಿದಿದೆ. ಹೌದು! ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಅತ್ತೆ ಹಾಗೂ ವೈಷ್ಣವ್‌ನ ಮುದ್ದಿನ ಅಮ್ಮ ಕಾವೇರಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸುಷ್ಮಾ ನಾಣಯ್ಯಗೆ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯನ್ನು ನಟಿ ಭಾವನಾ ರಾಮಣ್ಣ ಅವರು ಸುಷ್ಮಾ ನಾಣಯ್ಯರಿಗೆ ನೀಡಿದ್ದಾರೆ. 
 


ಈ ಕಾರ್ಯಕ್ರಮದಲ್ಲಿ ಸುಷ್ಮಾ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವಾಗ್ಲೂ ಸೀರೆಯಲ್ಲೇ ಕಾಣಿಸಿಕೊಳ್ಳುವ ಕಾವೇರಿ, ಅನುಬಂಧ ಅವಾರ್ಡ್ಸ್‌ಗೆ ವಿಭಿನ್ನವಾಗಿ ತಯಾರಾಗಿದ್ದರು. ಸುಷ್ಮಾ ನಾಣಯ್ಯ ಡಾರ್ಕ್ ಬ್ಲೂ ಬಣ್ಣದ ಸ್ಟ್ರಾಪ್ ಬ್ಲೌಸ್ ಜೊತೆಗೆ, ನೀಲಿ ಬಣ್ಣದ ಲಂಗ ಕೂಡ ಧರಿಸಿದ್ದರು. ಇದರ ಜೊತೆಗೆ ತಮ್ಮ ಗುಂಗುರು ಕೂದಲನ್ನು ಲೂಸ್ ಬಿಟ್ಟಿದ್ದು, ಕುತ್ತಿಗೆಗೆ ಪರ್ಲ್ ಸರ ಹಾಗೂ ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದು, ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಕಾವೇರಿಯದ್ದು ನೆಗೆಟಿವ್ ಶೇಡ್ ಪಾತ್ರ. ಧಾರವಾಹಿ ವಿಲನ್ ಅಂದ್ರೆ ಅದು ಕಾವೇರಿ. ಮಗನ ಮೇಲಿನ ಅತಿಯಾದ ಪ್ರೀತಿ, ಮೋಹ ಆಕೆಯಿಂದ ಏನೆಲ್ಲಾ ಕೆಟ್ಟ ಕೆಲಸ ಮಾಡಿಸುತ್ತೆ. 

ರಾತ್ರಿಯೆಲ್ಲಾ ಹೀರೋಯಿನ್‌ಗೆ ಟಾರ್ಚರ್ ಕೊಟ್ಟ ಡೈರೆಕ್ಟರ್: ಆಫರ್ ಬೇಡ ಎಂದ ಜೆನಿಲಿಯಾಗೆ ಅಲ್ಲು ಅರ್ಜುನ್ ಹೇಳಿದ್ದೇನು?

ಮಗನ ಪ್ರೀತಿ ತನಗಷ್ಟೇ ಸಿಗಬೇಕು, ಆತನ ಪ್ರೇಮಿ ಹಾಗೂ ಹೆಂಡ್ತಿಗೂ ಸೇರಬಾರದು ಎನ್ನುವ ವಿಚಿತ್ರ ಮನಸ್ಥಿತಿಯ ಮಹಿಳೆ ಕಾವೇರಿ. ಇದೇ ಕಾವೇರಿ ಇದೀಗ ಅನುಬಂಧ ಅವಾರ್ಡ್ಸ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವೇರಿಯನ್ನು ಈ ಗೆಟಪ್‌ನಲ್ಲಿ ನೋಡಿ ಲಕ್ಷ್ಮೀ ಬಾರಮ್ಮ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಸುಷ್ಮಾ ನಾಣಯ್ಯ ಅವರಿಗೆ ಹೊಗಳಿಕೆ ಜೊತೆಗೆ ತೆಗಳಿದ್ದಾರೆ. ಇನ್ನು ಕಾವೇರಿ ಪಾತ್ರದಲ್ಲಿ ನಟಿಸೋ ಸುಷ್ಮಾ ನಾಣಯ್ಯ ವಯಸ್ಸು ಎಷ್ಟು ಗೊತ್ತಾ? ಕೇವಲ 35 ಅಷ್ಟೇ, 4 ವರ್ಷದ ಮಗುವಿನ ಅಮ್ಮ, ಇವರಿಗೂ ಮಗನ ಪಾತ್ರ ಮಾಡೋ ವೈಷ್ಣವ್ ಗೂ 4 ವರ್ಷಗಳ ಅಂತರ ಇರಬಹುದು ಅಷ್ಟೇ. ಒಟ್ಟಿನಲ್ಲಿ ಸುಷ್ಮಾ ನಾಣಯ್ಯರಿಗೆ ಜನ ಮೆಚ್ಚಿದ ಮಂಥರೆ ಪಟ್ಟ ಸಿಕ್ಕಿದ್ದು ಅವರ ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?