
ಲಕ್ಷ್ಮೀ ನಿವಾಸ ಸೀರಿಯಲ್ ಈ ವಾರವೂ ಕನ್ನಡ ಸೀರಿಯಲ್‌ಗಳಲ್ಲೇ ನಂಬರ್ ಒನ್ ಸ್ಥಾನದಲ್ಲೇ ಇದೆ. ಇದಕ್ಕೆ ಕಾರಣ ಈ ಸೀರಿಯಲ್ ಕಥೆ. ಸಾಮಾನ್ಯ ಜನರ ಬದುಕಿಗೆ ಹತ್ತಿರ ಇರೋ ಕಥಾವಸ್ತು ಈ ಸೀರಿಯಲ್‌ದು. ಅದಕ್ಕೆ ಜನ ತಮ್ಮ ಲೈಫಿಗೆ ಕನೆಕ್ಟ್ ಮಾಡ್ಕೊಂಡು ಈ ಸೀರಿಯಲ್ ನೋಡ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಹಲವಾರು ಮುಖ್ಯ ಪಾತ್ರಗಳಿವೆ. ಅದರಲ್ಲೊಂದು ಜಯಂತ್ ಪಾತ್ರ. ಶುರುವಿನಲ್ಲಿ ಅಪ್ಪಟ ಅಪರಂಜಿಯಂತಿದ್ದ ಈ ಪಾತ್ರ ಕ್ರಮೇಣ ಗ್ರೇ ಶೇಡ್ ಪಡ್ಕೊಳ್ತಾ ಹೋಯ್ತು. ಶುರುವಿಗೆ ಈತನ ಅಂದ ಚೆಂದಕ್ಕೆ, ಬೆಣ್ಣೆಯಿಂದ ಕೂದಲು ತೆಗೆದಷ್ಟು ನಯವಾದ ಮಾತಿಗೆ ನಾಯಕಿ ಜಾಹ್ನವಿ ಮಾತ್ರ ಅಲ್ಲ ಈ ಸೀರಿಯಲ್ ವೀಕ್ಷಿಸೋ ಅನೇಕ ಹುಡುಗೀರು ಬಿದ್ದೋಗಿದ್ದರು. ಆದರೆ ಕ್ರಮೇಣ ಈ ಪಾತ್ರದ ನೆಗೆಟಿವ್ ಗಳು, ಕ್ರೌರ್ಯ ಗೊತ್ತಾಗ್ತಿದ್ದ ಹಾಗೆ ಹೆದರಿಕೊಳ್ಳಲು ಶುರು ಮಾಡ್ತಾರೆ. ಈ ಪಾತ್ರವನ್ನು ಭಯದಿಂದಲೇ ನೋಡಲು ಶುರು ಮಾಡ್ತಾರೆ. ಅದಕ್ಕೆ ಕಾರಣ ಈ ಪಾತ್ರ ಆ ಲೆವೆಲ್‌ಗೆ ಜನರ ಮೇಲೆ ಇಂಪ್ಯಾಕ್ಟ್ ಮಾಡಿರೋದು. ಆದರೆ ಈ ರೇಂಜಿಗೆ ಜನರಲ್ಲಿ ಭಯ, ಸಿಟ್ಟು ತರಿಸಿದ ಪಾತ್ರ ಇದೀಗ ಏಕಾಏಕಿ ತನ್ನ ಬಗ್ಗೆ 'ಅಯ್ಯೋ ಪಾಪ' ಅಂತ ಅನಿಸೋ ಹಾಗೆ ಮಾಡೋದಂದ್ರೆ ಏನ್ ಕಡಿಮೆನಾ? ಅಷ್ಟಕ್ಕೂ ಏನಾಯ್ತು ಕಥೆ ಅಂದರೆ ಅದೊಂದು ಇಂಟರೆಸ್ಟಿಂಗ್ ಸಂಗತಿ.
ಆರಂಭದಿಂದಲೇ ಈ ಸೀರಿಯಲ್‌ನಲ್ಲಿ ತೋರಿಸಿದಂತೆ ಜಯಂತ್ ಅನಾಥವಾಗಿ ಬೆಳೆದ ಹುಡುಗ. ಹಾಗೆ ನೋಡಿದರೆ ಜಯಂತ್ ಮತ್ತು ಜಾಹ್ನವಿಯ ಮನೆಯಲ್ಲಿ ಮನೆ ಮಗನ ಹಾಗಿರುವ ವೆಂಕಿ ಒಂದೇ ಅನಾಥಾಶ್ರಮದಲ್ಲಿ ಬೆಳೆದವರು. ಆದರೆ ಜಯಂತ್ ಪಾಸ್ಟ್ ಲೈಫ್‌ನಲ್ಲಿ ಏನೋ ಒಂದು ನಡೆದಿದೆ. ಅದು ಬೇರೆಯವರಿಗೆ ಗೊತ್ತಾದರೆ ಅಂತ ಅವನು ಹೆದರುತ್ತಿದ್ದಾನೆ. ಪ್ರತಿ ಬಾರಿ ಜಾಹ್ನವಿ ಫೋನ್‌ನಲ್ಲಿ ಮಾತನಾಡುವಾಗಲೂ, ಅವಳು ನನ್ನ ಬಗ್ಗೆ ಹೇಳಬಹುದು ಅಂತ ಜಯಂತ್‌ಗೆ ಭಯ ಶುರುವಾಗಿದೆ. ಜಾಹ್ನವಿಯನ್ನು ಅವನು ತವರು ಮನೆಗೆ ಕೂಡ ಕಳಿಸಿಕೊಡೋದಿಲ್ಲ, ತಂದೆ-ತಾಯಿ ಜೊತೆ ಅವಳು ಮಾತನಾಡುತ್ತಿದ್ದರೂ ಕೂಡ ಅದನ್ನು ಅವನು ಕದ್ದು ಕೇಳಿಸಿಕೊಳ್ಳುತ್ತಾನೆ.
ಜಯಂತ್ ಇಷ್ಟು ಸತಾಯಿಸಿದ್ರೂ, ಚಿನ್ನುಮರಿಗೇನೂ ಗೊತ್ತಾಗ್ತಿಲ್ಲ, ಪೆದ್ದು ಎಂದ ಲಕ್ಷ್ಮೀ ನಿವಾಸ ಫ್ಯಾನ್ಸ್!
ಈ ಹಿಂದಿನ ಎಪಿಸೋಡ್‌ಗಳಲ್ಲಿ ಬಂದಂತೆ ಜಾಹ್ನವಿ ಎಲ್ಲರ ಮುಂದೆ ಹಾಡಿದರೂ ಕೂಡ ಅದು ಅವನಿಗೆ ಸಹಿಸಲು ಆಗೋದಿಲ್ಲ. ಆಫೀಸ್‌ನವರು ನೀಡಿದ ಪಾರ್ಟಿಯಲ್ಲಿ ಜಾಹ್ನವಿ ಹಾಡಿದಳು ಎನ್ನುವ ಕಾರಣಕ್ಕೆ ಇಡೀ ರಾತ್ರಿ ಅವನು ಜಾಹ್ನವಿಯನ್ನು ಹಾಡುವಂತೆ ಮಾಡಿದನು. ಇದರಿಂದ ಅವಳ ಗಂಟಲು ಹಾಳಾಗೋಯ್ತು. ನನ್ನ ಗಂಡ ನನ್ನನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದಾನೆ ಅಂತ ಜಾಹ್ನವಿಗೆ ಗೊತ್ತಿದೆ, ಆದರೆ ಅದು ಮಾನಸಿಕ ಸಮಸ್ಯೆ ಎನ್ನೋದು ಇನ್ನೂ ಅವಳ ಅರಿವಿಗೆ ಬಂದಿಲ್ಲ.
ಸದ್ಯ ಇದೀಗ ಲಿಫ್ಟ್ ಸೀನ್ ಬಂದಿದೆ. ಜಾಹ್ನವಿ ಕಾಲೇಜಿನಲ್ಲಿದ್ದಾಗ ತಾನು ಮತ್ತು ಇನ್ನೊಬ್ಬ ಹುಡುಗ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ ಕಥೆ ಹೇಳಿದ್ದಾಳೆ. ಇದನ್ನು ಕೇಳಿಸಿಕೊಂಡ ಜಯಂತ್ ಸೈಕೋ ಬುದ್ಧಿ ಜಾಗೃತವಾಗಿದೆ. ಮತ್ತೆ ಜಾಹ್ನವಿಯನ್ನ ಲಿಫ್ಟ್ ಹತ್ತಿಸಿ ಅದು ಆಫ್ ಆಗುವ ಹಾಗೆ ಮಾಡಿ ಅವಳ ಮನಸ್ಥಿತಿ ಅರಿಯಲು ಪ್ರಯತ್ನಿಸಿದ್ದಾನೆ. ಆದರೆ ಇದೆಲ್ಲ ಆಗಿ ಮನೆಗೆ ಬಂದಾಗ ಜಯಂತನಿಗೆ ಪದೇ ಪದೇ ತನ್ನ ಬಾಲ್ಯದ ಘಟನೆ ನೆನಪಾಗಿದೆ. ಅದರಲ್ಲಿ ಜಯಂತ್ ಮುಗ್ಧ ಬಾಲಕ. ನೆಲದ ಮೇಲೆ ಕತ್ತಲಲ್ಲಿ ಕೂತ ಅವನಿಗೆ ಯಾರೋ ಪಾಪಿ ಬೆಲ್ಟ್ ಎತ್ಕೊಂಡು ಬಾರಿಸುತ್ತಿದ್ದಾನೆ. ಪಾಪದ ಈ ಹುಡುಗ ಕಣ್ಣೀರು ಸುರಿಸುತ್ತಾ ಏಟು ತಿನ್ನುತ್ತಾ ನೋವಲ್ಲಿ ಒದ್ದಾಡುತ್ತಿದ್ದಾನೆ.
ದುಬೈಗೆ ಹಾರುತ್ತಿದ್ದಂತೆ ಬದಲಾದ 'ಲಕ್ಷ್ಮಿ ನಿವಾಸ' ಭಾವನಾ; ಫೋಟೋ ನೋಡಿ ವೀಕ್ಷಕರು ಶಾಕ್!
ಈ ಸೀನ್ ನೋಡಿದ ಮೇಲೆ ಈ ಸೀರಿಯಲ್ ವೀಕ್ಷಕರಿಗೆ ಜಯಂತ್ ಅಂದ್ರೆ ಅಯ್ಯೋ ಪಾಪ ಅನಿಸುತ್ತಿದೆ. ಬಾಲ್ಯದ ಕಹಿ ಘಟನೆಯಿಂದ ಆತ ಈ ರೀತಿ ಸೈಕೋ ಆಗಿ ಬದಲಾಗಿದ್ದಾನೆ ಅಂತ ಗೊತ್ತಾಗಿದೆ. ಈ ಸಮಸ್ಯೆ ಏನಾಗಿತ್ತು ಅಂತ ಕುತೂಹಲ ಇದೆ. ಜೊತೆಗೆ ಜಯಂತ್ ಬಗ್ಗೆ ಕರುಣೆ ಬಂದಿದೆ. ಸೋ ಈ ಒಂದು ಸೀನ್‌ನಿಂದಾಗಿ ಏಕ್‌ದಂ ಸೈಕೋ ಜಯಂತ, 'ಅಯ್ಯೋ ಪಾಪ ಜಯಂತ'ನಾಗಿ ಬದಲಾಗಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.