ಗಡಿನಾಡು ಕಾಸರಗೋಡಲ್ಲಿ ಕನ್ನಡದಲ್ಲೇ ಔಷಧ ಚೀಟಿ ನೀಡಿದ ದಂತವೈದ್ಯ!

By Kannadaprabha News  |  First Published Sep 21, 2024, 10:45 AM IST

ಕರ್ನಾಟಕದಲ್ಲಿ ಕನ್ನಡದಲ್ಲಿ ವೈದ್ಯರು ಔಷಧ ಚೀಟಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿರುವುದು ಇನ್ನೂ ಕಟ್ಟುನಿಟ್ಟು ಜಾರಿಯಾಗುವ ಮೊದಲೇ ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಕನ್ನಡಿಗ ವೈದ್ಯರೊಬ್ಬರು ಕನ್ನಡದಲ್ಲೇ ಔಷಧ ಚೀಟಿ ನೀಡುವ ಮೂಲಕ ಕನ್ನಡಪ್ರೇಮ ಮೆರೆದಿದ್ದಾರೆ.


ಮಂಗಳೂರು (ಸೆ.21): ಕರ್ನಾಟಕದಲ್ಲಿ ಕನ್ನಡದಲ್ಲಿ ವೈದ್ಯರು ಔಷಧ ಚೀಟಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿರುವುದು ಇನ್ನೂ ಕಟ್ಟುನಿಟ್ಟು ಜಾರಿಯಾಗುವ ಮೊದಲೇ ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಕನ್ನಡಿಗ ವೈದ್ಯರೊಬ್ಬರು ಕನ್ನಡದಲ್ಲೇ ಔಷಧ ಚೀಟಿ ನೀಡುವ ಮೂಲಕ ಕನ್ನಡಪ್ರೇಮ ಮೆರೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸುರಕ್ಷಾ ದಂತ ಚಿಕಿತ್ಸಾಲಯದ ಡಾ.ಮುರಳೀಮೋಹನ ಚೂಂತೂರು(Dr Murali Mohan Choontoor) ಅವರೇ ಕನ್ನಡಪ್ರೇಮ ಮೆರೆದವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ಮಂಗಳೂರು ಭೇಟಿ ವೇಳೆ, ವೈದ್ಯರು ಕೂಡ ಔಷಧ ಚೀಟಿಯನ್ನು ಜನರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಬರೆಯುವಂತೆ ಸೂಚಿಸಲಾಗಿದೆ ಎಂದಿದ್ದರು. ಇದಕ್ಕೆ ರಾಜ್ಯದಲ್ಲಿ ವೈದ್ಯರೊಬ್ಬರು ಕನ್ನಡದಲ್ಲೇ ಔಷಧ ಚೀಟಿ ಬರೆಯುವ ಮೂಲಕ ಮೊದಲ ಸ್ಪಂದನ ನೀಡಿದ್ದರು.

Latest Videos

undefined

ಕನ್ನಡದಲ್ಲೇ ಔಷಧಿ ಚೀಟಿ ಬರೆಯುತ್ತಾರೆ ಹೊಸದುರ್ಗದ ಡಾ.ಸಂಜಯ್; ವೈದ್ಯರ ಕನ್ನಡ ಪ್ರೇಮಕ್ಕೆ ಮೆಚ್ಚುಗೆ

ಅದಾದ ಬಳಿಕ ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಹೊರಡಿಸಿ, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿ ಬಳಿಕ ಸಾಧಕ ಬಾಧಕ ನೋಡಿಕೊಂಡು ಅನುಷ್ಠಾನಕ್ಕೆ ತರವಲಾಗುವುದು ಎಂದಿದ್ದರು. ಈಗ ಗಡಿನಾಡಿನ ಕನ್ನಡಿಗ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿರುವುದನ್ನು ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

click me!