ಧ್ರುವ ಸರ್ಜಾ ಮಗನ ಮೊದಲ ಬರ್ತಡೇ ಸೆಲೆಬ್ರೇಷನ್; Cow boy ಥೀಮ್‌ ಸೆಟ್‌ ಹೇಗಿದೆ ನೋಡಿ!

Published : Sep 21, 2024, 10:41 AM IST

ಮಗನ ಫಸ್ಟ್‌ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿದ ಆಕ್ಷನ್ ಪ್ರಿನ್ಸ್.....ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್...

PREV
18
ಧ್ರುವ ಸರ್ಜಾ ಮಗನ ಮೊದಲ ಬರ್ತಡೇ ಸೆಲೆಬ್ರೇಷನ್; Cow boy ಥೀಮ್‌ ಸೆಟ್‌ ಹೇಗಿದೆ ನೋಡಿ!

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಮುದ್ದಿನ ಮಗ ಹಯಗ್ರೀವನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 

28

ಮಗ ಹಯಗ್ರೀವನಿಗೆ ಖುಷಿ ಕೊಡುವ ರೀತಿಯಲ್ಲಿ Cow boy ಥೀಮ್‌ನಲ್ಲಿ ಸೆಟ್‌ ಹಾಕಿಸಿ ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ. ಹುಲ್ಲು, ಗೊಂಬೆಗಳಿಂದ ಸೆಟ್ ಅಲಂಕಾರ ಮಾಡಲಾಗಿದೆ.

38

ವೈಟ್ ಆಂಡ್ ಬ್ರೌನ್ ಕಾಂಬಿನೇಷನ್‌ ಲುಕ್‌ನಲ್ಲಿ ಹಯಗ್ರೀವ ಮಿಂಚಿದ್ದರೆ, ಪಿಂಕ್ ಬಣ್ಣ ಫ್ರಾಕ್‌ನಲ್ಲಿ ಪುತ್ರಿ ರುದ್ರಾಕ್ಷಿ ಕಾಣಿಸಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ. 

48

ಹಯಗ್ರೀವನ ಫಸ್ಟ್‌ ಬರ್ತಡೇಯಲ್ಲಿ ನಟಿ ಮೇಘನಾ ರಾಜ್‌ ಕೂಡ ಭಾಗಿಯಾಗಿದ್ದರು. ಹಯಗ್ರೀವನ ಕೈಗೆ ದೊಡ್ಡ ಗಿಫ್ಟ್‌ ಬಾಕ್ಸ್‌ನ ಕೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

58

'ಮಗ ಹುಟ್ಟಿದ ಕೂಡಲೇ ನಾನು ಮೊದಲು ನನ್ನ ಅಣ್ಣ ಚಿರು ನಂಬರ್‌ಗೆ ಫೋನ್ ಮಾಡಿದೆ. ಆಮೇಲೆ ಅವನು ದೈಹಿಕವಾಗಿ ಇಲ್ಲ ಅನ್ನೋದು ನೆನಪಾಗಿ ಅರ್ಜುನ್ ಸರ್ಜಾ ಮಾಮಗೆ ಕಾಲ್ ಮಾಡಿದೆ' ಎಂದು ಈ ಹಿಂದೆ ಧ್ರುವ ಹೇಳಿದ ಮಾತುಗಳು ವೈರಲ್ ಆಗುತ್ತಿದೆ.

68

ಧ್ರುವ ಸರ್ಜಾ ತಮ್ಮ ಇಬ್ಬರೂ ಮಕ್ಕಳ ನಾಮಕರಣವನ್ನು ಚಿರು ಸಮಾಧಿ ಇರುವ ತೋಟದ ಮನೆಯಲ್ಲಿ ಅದ್ಧೂರಿಯಾಗಿ ಮಾಡಿದ್ದರು. ಮಗಳಿಗೆ ರುದ್ರಾಕ್ಷಿ ಎಂದು, ಮಗನನ್ನು ಹಯಗ್ರೀವ ಎಂದು ಹೆಸರಿಟ್ಟರು. 

78

 'ನಾನು ಕಳೆದ ಮೂರು ವರ್ಷದಿಂದ ಅಣ್ಣನ ಸಮಾಧಿ ಬಳಿಯೇ ಮಲಗುತ್ತಿದ್ದೇನೆ. ನಾನು ಮಲಗಿರುವ ವಿಡಿಯೋವನ್ನು ಅರ್ಧಕ್ಕೆ ಎಡಿಟ್ ಮಾಡಿ ಈಗ ವೈರಲ್ ಮಾಡಿದ್ದಾರೆ' ಎಂದು ಧ್ರುವ ಹೇಳಿದ್ದರು.

88

'ಅಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಅಂತ ಮನೆಯಲ್ಲಿ ಹೇಳಿದ್ರೆ ಅಪ್ಪ ಅಮ್ಮ ಬೇಸರ ಮಾಡಿಕೊಳ್ಳುತ್ತಾರೆ ಹೀಗಾಗಿ ನಾನು ಹೇಳೋದಿಲ್ಲ' ಎಂದಿದ್ದಾರೆ ಧ್ರುವ. 

Read more Photos on
click me!

Recommended Stories