ಆಗ್ರಾದಲ್ಲಿರುವ ತಾಜ್ ಮಹಲ್ ನಿಸ್ಸಂದೇಹವಾಗಿ ಆಗ್ರಾದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಅತ್ಯಂತ ಜನಪ್ರಿಯ ಸ್ಮಾರಕಗಳಲ್ಲಿ ಒಂದಾಗಿದೆ. ಈ UNESCO ವಿಶ್ವ ಪರಂಪರೆಯ ತಾಣವನ್ನು 2023ರಲ್ಲಿ 4.5 ಮಿಲಿಯನ್ ದೇಶೀಯ ಪ್ರವಾಸಿಗರು ಭೇಟಿ ಮಾಡಿದ್ದಾರೆ. ಆದಾಗ್ಯೂ, ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದ ಈ ಸ್ಮಾರಕ ಈಗ ತನ್ನ ತವರಲ್ಲೇ ಜೋರಾದ ಸ್ಪರ್ಧೆ ಎದುರಿಸುತ್ತಿದೆ.