ಭಾರತೀಯ ರೈಲ್ವೆ 19 ರೈಲುಗಳಲ್ಲಿ ರಿಸರ್ವೇಷನ್ ಇಲ್ಲದೇ ಪ್ರಯಾಣಿಸುವ ಸೌಲಭ್ಯ ಒದಗಿಸಿದೆ. ಈ ರೈಲುಗಳು ಇಂದಿನಿಂದಲೇ ಸಂಚಾರ ಆರಂಭಿಸಿದ್ದು, ಪ್ರಯಾಣಿಕರು ಸಾಮಾನ್ಯ ಟಿಕೆಟ್‌ನೊಂದಿಗೆ ಪ್ರಯಾಣಿಸಬಹುದು. ಐಆರ್‌ಸಿಟಿಸಿ ಮೂಲಕ ಟಿಕೆಟ್ ಖರೀದಿಸಬಹುದು ಮತ್ತು ಇ-ಕ್ಯಾಟರಿಂಗ್ ಸೇವೆಯೂ ಲಭ್ಯವಿದೆ.
ನವದೆಹಲಿ: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ 19 ರೈಲುಗಳಲ್ಲಿ ಯಾವುದೇ ರಿಸರ್ವೇಷನ್ ಇಲ್ಲದೇ ಸಾಮಾನ್ಯ ಟಿಕೆಟ್‌ನೊಂದಿಗೆ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿದೆ. ಈ ಎಲ್ಲಾ 19 ರೈಲುಗಳು ಇಂದಿನಿಂದಲೇ ತಮ್ಮ ಸಂಚಾರ ಆರಂಭಿಸಿವೆ. ಪ್ರಯಾಣಿಕರ ಅನುಕೂಲ ಮತ್ತು ರೈಲು ಜಾಲ ವಿಸ್ತರಣೆಗಾಗಿ ಈ 19 ಸ್ಪೆಷಲ್ ಟ್ರೈನ್‌ಗಳು ಸಂಚರಿಸಲಿವೆ. ಈ 19 ರೈಲುಗಳ ಪ್ರಯಾಣಿಕರ ಸಂಖ್ಯೆ ಶೀಘ್ರದಲ್ಲಿಯೇ ಏರಿಕೆಯಾಗುವ ಸಾಧ್ಯತೆಗಳಿವೆ. ಇದರ ಜೊತೆ 19 ರೈಲುಗಳಿಂದ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ ಚಲಿಸಲಿವೆ 19 ವಿಶೇಷ ರೈಲುಗಳು?
ದೆಹಲಿ-ಮುಂಬೈ ಎಕ್ಸ್‌ಪ್ರೆಸ್, ಹೌರಾ-ಹೊಸದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್, ಚೆನ್ನೈ-ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್, ಮುಂಬೈ-ಅಹಮದಾಬಾದ್ ತೇಜಸ್ ಎಕ್ಸ್‌ಪ್ರೆಸ್, ಕೋಲ್ಕತ್ತಾ-ಪಾಟ್ನಾ ಜನ ಶತಾಬ್ದಿ ಎಕ್ಸ್‌ಪ್ರೆಸ್, ನವದೆಹಲಿ-ಲಖನೌ ತೇಜಸ್ ಎಕ್ಸ್‌ಪ್ರೆಸ್, ಸಿಕಂದರಾಬಾದ್-ವಿಶಾಖಪಟ್ಟಣ ಗರೀಬ್ ರಥ ಎಕ್ಸ್‌ಪ್ರೆಸ್, ಮುಂಬೈ-ಪುಣೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ , ಚೆನ್ನೈ-ಕೊಯಮತ್ತೂರು ಶತಾಬ್ದಿ ಎಕ್ಸ್‌ಪ್ರೆಸ್, ನವದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್
ಹೌರಾ-ರಾಂಚಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಬೆಂಗಳೂರು-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್, ಮುಂಬೈ-ಗೋವಾ ತೇಜಸ್ ಎಕ್ಸ್‌ಪ್ರೆಸ್, ಅಮೃತಸರ-ನವದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್, ಹೈದರಾಬಾದ್-ತಿರುಪತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಜೈಪುರ-ದೆಹಲಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್, ಚೆನ್ನೈ-ಮಧುರೈ ತೇಜಸ್ ಎಕ್ಸ್‌ಪ್ರೆಸ್, ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್, ಮುಂಬೈ-ನಾಸಿಕ್ ಎಕ್ಸ್‌ಪ್ರೆಸ್.
ಇದನ್ನೂ ಓದಿ: ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಒಂದು ಐಡಿ ಬಳಸಿ ಎಷ್ಟು ರೈಲ್ವೆ ಟಿಕೆಟ್ ಮಾಡಬಹುದು?
ಸ್ಪೆಷಲ್ ರೈಲುಗಳ ಟಿಕೆಟ್ ಖರೀದಿ
ಈ ಸ್ಪೆಷಲ್ ರೈಲುಗಳ ಸಂಚಾರವನ್ನು ಐಆರ್‌ಸಿಟಿಸಿ (Indian Railway Catering and Tourism Corporation) ಆರಂಭಿಸಿದೆ. ಈ ರೈಲುಗಳಲ್ಲಿ ಯಾವುದೇ ಕಾಯ್ದಿರಿಸಿದ ಆಸನಗಳು ಇರಲ್ಲ. ನಿಲ್ದಾಣಕ್ಕೆ ತೆರಳಿ ನೇರವಾಗಿ ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಬಹುದು. ಕೌಂಟರ್ ಸಾಲಿನಲ್ಲಿ ನಿಂತುಕೊಳ್ಳಲು ಸಮಯ ಇಲ್ಲದಿದ್ದರೆ ಯುಟಿಎಸ್ (ಅನ್‌ರಿಸರ್ವಡ್ ಟಿಕೆಟಿಂಗ್ ಸಿಸ್ಟಮ್) ಮೊಬೈಲ್ ಆಪ್ ಮೂಲಕ ಟಿಕೆಟ್ ಖರೀದಿಸಬಹುದು. ಸಮೀಪದ ಜನಸೇವಾ ಕೇಂದ್ರಕ್ಕೆ ತೆರಳಿ ರೈಲು ಟಿಕೆಟ್ ಖರೀದಿಸುವ ಆಯ್ಕೆಯನ್ನು ಸಹ ಪ್ರಯಾಣಿಕರಿಗೆ ನೀಡಲಾಗಿದೆ.
ಯಾವೆಲ್ಲಾ ಸೌಲಭ್ಯಗಳು ಸಿಗಲಿವೆ?
ಐಆರ್‌ಸಿಟಿಸಿಯ ಅನ್‌ರಿಸರ್ವಡ್ ರೈಲುಗಳಲ್ಲಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳು ಸಿಗಲಿವೆ. ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೇವೆಯೂ ಸಿಗಲಿದ್ದು, ಆನ್‌ಲೈನ್ ಮೂಲಕ ತಮ್ಮಿಷ್ಟದ ಆಹಾರವನ್ನು ಪ್ರಯಾಣಿಕರು ಆರ್ಡರ್ ಮಾಡಿಕೊಳ್ಳಬಹುದು. ಪ್ರಯಾಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯು ರೈಲ್ ಕನೆಕ್ಟ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಪ್ರಯಾಣಿಕರು ತಮ್ಮ ಆಯ್ಕೆಯ ಸೀಟುಗಳನ್ನು ಪಡೆಯದಿದ್ದರೆ ಅವರು ಪರ್ಯಾಯ ರೈಲುಗಳನ್ನು ಆಯ್ಕೆ ಮಾಡಬಹುದು.
ಇದನ್ನೂ ಓದಿ: 45+ ವರ್ಷ ಮಹಿಳೆಯರಿಗೆ, 58+ ವರ್ಷ ಪುರುಷರಿಗೆ ಭಾರತೀಯ ರೈಲ್ವೆಯಿಂದ ವಿಶೇಷ ಸೌಲಭ್ಯಗಳು