ವಿದೇಶಿಗರಿಗೂ ಅಣ್ಣಮ್ಮದೇವಿಯ ಡಾನ್ಸ್​ ಹೇಳಿಕೊಟ್ಟ ಡಾ.ಬ್ರೊ: ಕತ್ತೆ ಕಿರುಬವನ್ನೂ ಬಿಟ್ಟಿಲ್ಲ ಗಗನ್​!

By Suchethana D  |  First Published Nov 18, 2024, 10:48 PM IST

ವಿದೇಶಿಗರಿಗೂ ಅಣ್ಣಮ್ಮದೇವಿಯ ಡಾನ್ಸ್​ ಹೇಳಿಕೊಟ್ಟ ಡಾ.ಬ್ರೊ ಭೇಷ್​ ಎನ್ನಿಸಿಕೊಂಡಿದ್ದಾರೆ. ಅಲ್ಲಿರುವ ಕತ್ತೆ ಕಿರುಬವನ್ನೂ ಮಾತನಾಡಿದ್ದಾರೆ. ಇದರ ವಿಡಿಯೋ ಶೇರ್​ ಮಾಡಿದ್ದಾರೆ. 
 


ಡಾ.ಬ್ರೋ ಎಂದೇ ಖ್ಯಾತಿ ಪಡೆದಿರೋ ಗಗನ್​ ಯಾವ ದೇಶನೇ ಸುತ್ತಾಡ್ಲಿ... ಅಲ್ಲಿ ಕನ್ನಡಕ್ಕೇ ಹೆಚ್ಚು ಮಹತ್ವ ಕೊಡೋದು. ಅಲ್ಲಿಯ ಭಾಷೆಗಳನ್ನು ತಾವು ಕಲಿಯದಿದ್ರೂ ಆ ದೇಶದ ವಾಸಿಗಳಿಗೆ ಕನ್ನಡ ಅಂತೂ ಕಲಿಸಿ ಬರ್ತಾರೆ. ಇದೇ ಕಾರಣಕ್ಕೆ ಗಗನ್​ ಕನ್ನಡದ ಪ್ರತಿಯೊಬ್ಬ ಮನೆಯ ಅಚ್ಚುಮೆಚ್ಚಿನ ಸ್ಟಾರ್​ ಆಗಿದ್ದಾರೆ. ದೇಶ-ವಿದೇಶಗಳನ್ನು ಸುತ್ತುತ್ತಲೇ ಮನೆ ಮಾತಾಗಿರೋ  ಗಗನ್​   ನೈಜೇರಿಯಾಕ್ಕೆ ಭೇಟಿ ಕೊಟ್ಟಿದ್ದು, ಇದಾಗಲೇ ಹಲವಾರು ವಿಡಿಯೋಗಳನ್ನು ಶೇರ್​ ಮಾಡಿದ್ದಾರೆ. ಈ ಹಿಂದಿನ ವಿಡಿಯೋಗಳಲ್ಲಿ, ಅಲ್ಲಿರುವ  ವಿಚಿತ್ರ ಜನರ ಪರಿಚಯ ಮಾಡಿಸಿದ್ದರು. ಚರಂಡಿ ಮೇಲೆಯೇ ಜನರು ಹೇಗೆ ಬದುಕುತ್ತಿದ್ದಾರೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು. ಅದರಲ್ಲಿಯೂ ವಿಶೇಷವಾಗಿ ನೈಜೇರಿಯಾ ಮಕ್ಕಳಿಗೆ ಕನ್ನಡ ಕಲಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ರಾಷ್ಟ್ರಭಾಷೆ ಕನ್ನಡ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದವರು ಡಾ.ಬ್ರೋ ಅರ್ಥಾತ್​ ಗಗನ್​. ಅ,ಆ,ಇ, ಈ ಎಂದು ಮಕ್ಕಳ ಬಾಯಲ್ಲಿ ಸ್ಪಷ್ಟವಾಗಿ ಹೇಳಿಸಿ ಅಬ್ಬಬ್ಬಾ ಹೀಗೂ ಸಾಧ್ಯನಾ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ಮತ್ತಷ್ಟು ಕುತೂಹಲದೊಂದಿಗೆ ನೈಜೇರಿಯಾದ ಆದಿವಾಸಿಗಳ ಪರಿಚಯ ಮಾಡಿಸಿದ್ದಾರೆ ಇವರು.

ಇದೀಗ ಅವರು ಅಲ್ಲಿಯ ಆದಿವಾಸಿ ಜನರಿಗೆ ಅಣ್ಣಮ್ಮ ದೇವಿಯ ಡಾನ್ಸ್​ ಹೇಗೆ ಮಾಡುವುದು ಎಂದು ಹೇಳಿಕೊಟ್ಟಿದ್ದಾರೆ! ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಅಣ್ಣಮ್ಮ ದೇವಿಯ ಜಾತ್ರೆ ನೆರವೇರುತ್ತದೆ. ಇದಕ್ಕೆ ವಿಶೇಷವಾಗಿ ಡಾನ್ಸ್​ ಮಾಡುವುದೂ ಉಂಟು. ಅದನ್ನು ಅವರು ನೈಜೇರಿಯಾದ ಆದಿವಾಸಿಗಳಿಗೆ ಕಲಿಸಿ ಕೊಟ್ಟಿದ್ದಾರೆ. ಆದಿವಾಸಿಗಳು ತಮ್ಮ ವಿಶಿಷ್ಟ ಕಲೆ, ಸಂಪ್ರದಾಯ, ನೃತ್ಯ ಶೈಲಿಗಳಿಂದಲೇ ಚಿರಪರಿಚಿತರಾದವರು. ಅಂಥವರಿಗೆ ಹೋಗಿ ಡಾ. ಬ್ರೋ ಈಗ ಅಣ್ಣಮ್ಮ ದೇವಿಯ ಡಾನ್ಸ್ ಹೇಳಿಕೊಟ್ಟಿದ್ದಾರೆ. ಅದನ್ನು ಅವರು ಚಾಚೂ ತಪ್ಪದೇ ಮಾಡಿದ್ದಾರೆ. ಇದನ್ನು ನೋಡುತ್ತಿದ್ದಂತೆಯೇ ಅಲ್ಲಿದ್ದ ಕತ್ತೆ ಕಿರುಬ ಗುರ್​ ಎನ್ನುವ ವಿಡಿಯೋ ಶೇರ್​ ಮಾಡಿದ್ದಾರೆ ಡಾ. ಬ್ರೋ.

Latest Videos

undefined

ವಿವಾದಗಳ ನಡುವೆಯೇ ಎಮರ್ಜೆನ್ಸಿಗೆ ಕೊನೆಗೂ ಬಿಡುಗಡೆಯ ಭಾಗ್ಯ: ಕಂಗನಾ ಕೈಹಿಡಿಯತ್ತಾ 2025?

ಇದೇ ವೇಳೆ ಕತ್ತೆ ಕಿರುಬ ಸೇರಿದಂತೆ ಭಯಾನಕ ಕಾಡು ಪ್ರಾಣಿಗಳ ಹಾಗೂ ವಿಷ ಸರ್ಪಗಳ ಜೊತೆ ನೈಜೇರಿಯಾದ ಮಕ್ಕಳೂ ಸೇರಿದಂತೆ ದೊಡ್ಡವರು ಹೇಗೆ ಪರಿಚಿತರಾಗಿದ್ದಾರೆ. ಕಾಡು ಪ್ರಾಣಿಗಳನ್ನು ಇಲ್ಲಿಯ ಜನರು ಹೇಗೆ ಪ್ರೀತಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಕತ್ತೆ ಕಿರುಬದ ಬಾಯಲ್ಲಿ ಸಲೀಸಾಗಿ ಜನರು ಕೈ ಹಾಕುತ್ತಾರೆ. ಆದರೆ ಅಪ್ಪಿ ತಪ್ಪಿ ಆ ಸಮಯದಲ್ಲಿ ಕತ್ತೆ ಕಿರುಬ ಬಾಯಿ ಮುಚ್ಚಿದರೆ ಅಂದರೆ ಅದರ ಒಂದೇ ಒಂದು ಹಲ್ಲು ಕೈಗೆ ತಾಗಿದರೂ ಮೈ ಪೂರ್ತಿ ಕೊಳೆತು ಹೋಗುತ್ತದೆ. ಇದರ ಹೊರತಾಗಿಯೂ ಅಲ್ಲಿಯ ಜನರು ಹೇಗೆ ಪ್ರಾಣಿಗಳ ಜೊತೆ ಪ್ರೀತಿಯಿಂದ ಇದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. 

ಇದೇ ವೇಳೆ, ನೈಜೇರಿಯಾದ ಜಾದೂಗಾರರೊಬ್ಬನ್ನು ಭೇಟಿಯಾಗಿದ್ದಾರೆ ಡಾ.ಬ್ರೋ. ಈ ಜಾದೂಗಾರ ಚಾಕುವಿನಿಂದ ಡಾ.ಬ್ರೋಗೆ ಇರಿದಿದ್ದಾನೆ, ಬ್ಲೇಡ್​ನಿಂದ ಕೊಯ್ದಿದ್ದಾನೆ. ಆದರೆ ಏನೂ ಆಗಲಿಲ್ಲ.  ಆದರೆ ಕುತೂಹಲದ ವಿಷಯ ಎಂದರೆ, ಅದೇ ಚಾಕು ಮತ್ತು ಬ್ಲೇಡ್​ನಿಂದ ಬೇರೆ ಕಡೆ ಕತ್ತರಿಸಿದಾಗ ಅದು ಕತ್ತರಿಸಿ ಹೋಗಿದೆ. ಇಂಥ ಭಯಾನಕ ಹಾಗೂ ಹಾಸ್ಯಮಯ ಸನ್ನಿವೇಶವನ್ನು ವಿಡಿಯೋದಲ್ಲಿ ತೋರಿಸಿದ್ದಾರೆ ಗಗನ್​. ಈ ಹಿಂದಿನ ವಿಡಿಯೋದಲ್ಲಿ ಅವರು, ಎಲ್ಲಕ್ಕಿಂತಲೂ ವಿಚಿತ್ರ ಎನಿಸಿರೋ ನೈಜೇರಿಯಾದ ಟ್ರೈನ್​ ಮಾರ್ಕೆಟ್​ ತೋರಿಸಿದ್ರು. ಟ್ರೇನ್​ ಮಾರ್ಕೆಟ್​ ಅಂದ್ರೆ ಪ್ರತಿನಿತ್ಯವೂ ಹಳಿಗಳ ಮೇಲೆಯೇ ಇಲ್ಲಿ ಸಂತೆ ನಡೆಯುತ್ತದೆ. ಅದ್ಯಾವ ಪರಿಯ ಸಂತೆ ಎಂದ್ರೆ ನೂರಾರು ಮಂದಿ ಈ ಸಂತೆಗೆ ಬರ್ತಾರೆ. ಅಲ್ಲಿಯೇ ಗಾಡಿಗಳೂ ಓಡಾಡ್ತಾ ಇರುತ್ತವೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ರೈಲು ಬರುವಾಗ ಬಾಗಿಲು ಹಾಕುವುದು, ಐದು ನಿಮಿಷ ಅತ್ತಿತ್ತ ಕಡೆ ವಾಹನ ಸವಾರರು ಕಾಯುವುದು... ಎಲ್ಲವೂ ಮಾಮೂಲಿ. ಇದು ಇಲ್ಲದ ಕಡೆ ಎಷ್ಟೋ ಬಾರಿ ಅಪಘಾತಗಳೂ ಆಗಿರುವುದು ಉಂಟು.  

ಆದರೆ ಇಲ್ಲಿ, ಹಳಿಗಳ ಮೇಲೆ ಪ್ರತಿನಿತ್ಯ ಸಂತೆ ನಡೆಯುತ್ತೆ. ದೂರದಿಂದ ಟ್ರೈನ್​ ಬರುವ ಶಬ್ದ ಆಗುತ್ತಲೇ ಸೆಕೆಂಡ್​ ಒಳಗೆಯೇ ಸಂತೆ ಗಾಯಬ್​ ಆಗುತ್ತೆ. ಮಾರುವವರು, ಕೊಳ್ಳುವವರು ಎಲ್ಲರೂ ಎಸ್ಕೇಪ್​  ಆಗುತ್ತಾರೆ. ಅಲ್ಲಿ ಏನೂ ಇಲ್ಲವೇನೋ ಎನ್ನುವಂತೆ  ಕಾಣಿಸುತ್ತದೆ. ರೈಲು ಅತ್ತ ಹೋದ ಮೇಲೆ ಮತ್ತೆ ರಪರಪ ಎಂದು ಎಲ್ಲರೂ ಮುತ್ತಿಗೆ ಹಾಕುತ್ತಾರೆ. ಪುನಃ ರೈಲು ಬಂದರೆ ಹೋಗುತ್ತಾರೆ. ಈ ರೈಲಿನ ಮುಂಭಾಗ ಸೇರಿದಂತೆ ಎಲ್ಲೆಂದರಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವುದು ನೋಡಿದರೆ, ಅಬ್ಬಬ್ಬಾ ಹೀಗೂ ಒಂದು ದೇಶ ಇರುತ್ತಾ ಎಂದು ಹುಬ್ಬೇರಿಸುವುದು ಗ್ಯಾರೆಂಟಿ. ಇವೆಲ್ಲಾ ಕುತೂಹಲದ ವಿಷಯವನ್ನು ಡಾ.ಬ್ರೋ ಹೇಳಿದ್ದು. ಅದರ ವಿಡಿಯೋ ಲಿಂಕ್​ ಈ ಕೆಳಗೆ ಇದೆ. 

ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದ್ವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ...

click me!