ನಗುನಗುತ್ತಾ ಹಾಸ್ಯ ಚಕ್ರವರ್ತಿಯ ಹುಟ್ಟು ಹಬ್ಬವನ್ನು ಆಚರಿಸೋಣ!

First Published | Jul 24, 2020, 10:54 AM IST

ಟಿ.ಆರ್.ನರಸಿಂಹರಾಜು ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿರುವ ಹೆಸರು.ಒಂದು ಕಾಲದ ಕನ್ನಡ ಚಿತ್ರರಂಗದ ಹಾಸ್ಯ ಲೋಕವನ್ನೇ ಆಳಿದ ಚಕ್ರವರ್ತಿ ಇವರು.ಇಂದಿನ ಪೀಳಿಗೆಯ ಎಲ್ಲಾ ಹಾಸ್ಯ ನಟ - ನಟಿಯರಿಗೆ ಸ್ಪೂರ್ತಿಯಾಗಿ ಕನ್ನಡ ಚಾರ್ಲಿ ಚಾಪ್ಲಿನ್ ಎಂದೇ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಇಂತಹ ಅಪರೂಪದ ವ್ಯಕ್ತಿತ್ವದ ಹುಟ್ಟು ಹಬ್ಬದ ದಿನವಾದ ಇಂದು ಗೌರವದಿಂದ ಸ್ಮರಿಸೋಣ ... 
 

ತುಮಕೂರು ಜಿಲ್ಲೆಯ ತಿಪಟೂರಿನ ಪೋಲೀಸ್‌ ಇಲಾಖೆಯ ನೌಕರರಾಗಿದ್ದ ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗೆ ಜುಲೈ 24, 1926 ರಂದು ನರಸಿಂಹರಾಜು ಅವರು ಜನಿಸಿದರು.
undefined
ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು.ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸುಲಭವಾಗಿತ್ತು ಹಾಗಾಗಿ ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ನಗೆಹೊನಲು ಹರಿಸುತ್ತಿದ್ದರು.
undefined
Tap to resize

ರಾಜ್‌ಕುಮಾರ್ ಅವರೊಂದಿಗೆ `ಬೇಡರ ಕಣ್ಣಪ್ಪ` ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದು ತಮ್ಮ ವಿಭಿನ್ನವಾದ ವಿಶೇಷ ಹಾಸ್ಯಪ್ರಜ್ಞೆಯಿಂದ ಜನರಿಗೆ ಮನಸ್ಸಿಗೆ ಹತ್ತಿರವಾಗಿದ್ದರು.
undefined
“ಅಂದಿನ ದಿನದಲ್ಲಿ ನಿರ್ಮಾಪಕ ,ನಿರ್ದೇಶಕರು ಚಲನಚಿತ್ರಗಳಿಗೆ ಮೊದಲು ನರಸಿಂಹರಾಜು ಅವರ ದಿನಗಳನ್ನು ಗುರುತುಪಡಿಸಿಕೊಂಡು ನಂತರ ಉಳಿದ ಕಲಾವಿದರನ್ನು ಸಂಪರ್ಕಿಸುತ್ತಿದ್ದರಂತೆ ಇದನ್ನು ಖುದ್ದು ಡಾ.ರಾಜ್ ಕುಮಾರ್ ಅವರೇ ಸಂದರ್ಶನವೊಂದರಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.
undefined
ತೆನಾಲಿ ರಾಮಕೃಷ್ಣ ,ವಿಶ್ವಾಮಿತ್ರ , ನಕ್ಷತ್ರಿಕ ಹೀಗೆ ಹಲವಾರು ಪಾತ್ರಗಳಿಗೆ ಇವರು ಜೀವ ತುಂಬವ ಪರಿಗೆ ಮನಸೋಲದವರೇ ಇಲ್ಲ. ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕಲಾಸೇವೆಗೆ ತನ್ನನ್ನು ಅರ್ಪಿಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.
undefined
‘ಪ್ರೊಫೆಸರ್ ಹುಚ್ಚೂರಾಯ' ಇದು ತಾವೇ ನಿರ್ಮಿಸಿ ಅಪರೂಪದ ಪಾತ್ರದಲ್ಲಿ ನಟಿಸಿ ನೋಡುಗರನ್ನು ನಗಿಸುತ್ತಲೇ ಅಳಿಸಿದ ಸಿನಿಮಾ.
undefined
“ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ” ಎಂಬುದು ನರಸಿಂಹ ರಾಜು ಅವರ ಮೇಲೆ ಚಿತ್ರಿತವಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ನರಸಿಂಹರಾಜು.
undefined
ತಮ್ಮ 56ನೇ ವಯಸ್ಸಿನಲ್ಲಿ 1979ರ ಜುಲೈ 20ರಂದು ಎಂದಿನಂತೆ ರಾತ್ರಿ ಉಪಾಹಾರ ಸೇವಿಸಿ ಮಲಗಿದ್ದ ನರಸಿಂಹರಾಜು ಅವರು ಮುಂಜಾನೆ 4.30 ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
undefined
ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ ಕೆಲವು ವರ್ಷಗಳ ವಿರಾಮ ತೆಗೆದುಕೊಂಡಿದ್ದು ಇದೀಗ ಕಿರುತೆರೆಯಲ್ಲಿ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
undefined
ಎಷ್ಟೋ ಜನ ಕಲಾವಿದರಿಗೆ ಆದರ್ಶರಾಗಿರುವ ಇವರಿಗೆ ಶ್ರೇಷ್ಟ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಸ್ಪೂರ್ತಿಯಾಗಿದ್ದರು ಎನ್ನುವುದು ವಿಶೇಷ.
undefined

Latest Videos

click me!