ʼಪುಷ್ಪ 2ʼ ಸಿನಿಮಾದ ಹಾಡಿನಲ್ಲಿ ಕಾಂತಾರದ ಕ್ಲೈಮ್ಯಾಕ್ಸ್‌ ಕಾಪಿ! ಏನಂತಿದಾರೆ ಜನ?

By Bhavani Bhat  |  First Published Dec 12, 2024, 5:02 PM IST

ಪುಷ್ಪ- 2 ಸಿನಿಮಾ ಬಾಕ್ಸಾಫೀಸ್‌ ಗಳಿಕೆಯಲ್ಲಿ ಸದ್ದು ಮಾಡ್ತಾ ಇರುವಂತೆ, ಸಲ್ಲದ ಕಾರಣಗಳಿಗಾಗಿಯೂ ಸದ್ದು ಮಾಡ್ತಿದೆ. ಪುಷ್ಪ-2 ಸಿನಿಮಾದ ಒಂದು ಸೀರಿಯಸ್‌ ಡ್ಯಾನ್ಸ್‌ ಸೀನ್‌ ನೋಡಿ ಜನ ಪಕಪಕಾ ಅಂತ ನಕ್ಕುಬಿಟ್ಟಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ. 
 


ಪುಷ್ಪ-2 ಅಲ್ಲು ಅರ್ಜುನ್‌ನನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಇನ್ನಷ್ಟು ಗಟ್ಟಿಗೊಳಿಸಿದ ಸಿನಿಮಾ. ಅದೀಗ ಹತ್ತತ್ತಿರ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗ್ತಿದೆ. ವಿಷಯ ಅದಲ್ಲ, ಸೋಶಿಯಲ್‌ ಮೀಡಿಯಾದಲ್ಲಿ ಜನ ಈ ಸಿನಿಮಾದ ಒಂದೊಂದೇ ಹುಳುಕುಗಳನ್ನು ಎತ್ತಿ ತೆಗೆಯೋಕೆ ಶುರು ಮಾಡಿದಾರೆ. ಅದರಲ್ಲಿ ಮುಖ್ಯವಾದುದು, ಪುಷ್ಪ-2 ಒಂದು ಡ್ಯಾನ್ಸ್‌ ಸೀನ್‌ ಮಕ್ಕೀ ಕಾ ಮಕ್ಕೀ ಕಾಂತಾರದ ಕ್ಲೈಮ್ಯಾಕ್ಸ್‌ ಅಂತನ್ನೊಂದು.

ಈ ಸೀನ್‌ನ ವಿಡಿಯೋ ನೋಡಿದರೆ ನಿಮಗೇ ಅದು ಅರ್ಥವಾಗದೇ ಇರದು. ಇದರಲ್ಲಿ ಹೀರೋ ಅಲ್ಲು ಅರ್ಜುನ್‌ ಗಂಗಮ್ಮ ತಲ್ಲಿ ಜಾತ್ರ ಎಂಬ ಡ್ಯಾನ್ಸ್‌ ಸೀಕ್ವೆನ್ಸ್‌ನಲ್ಲಿ ಬೆಂಕಿ ಕೊಂಡದಲ್ಲಿ ಕುಣಿಯುವ ಒಂದು ದೃಶ್ಯವಿದೆ. ಇದು ಥೇಟಾನುಥೇಟ್‌ ಕಾಂತಾರದ ಸೀನ್‌ನಂತಿದೆ. ಅದರಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಶಿವನ ಮೇಲೆ ಪಂಜುರ್ಲಿಯ ಕೃಪೆಯಿಂದ ಗುಳಿಗ ದೈವದ ಆವೇಶವಾಗುತ್ತದೆ. ಮುಖವೆಲ್ಲಾ ರಕ್ತ- ಕೆಸರುಮಯವಾಗಿ ಚಿತ್ರವಿಚಿತ್ರವಾಗಿ ಕಾಣಿಸುತ್ತದೆ. ಆವೇಶದಿಂದ ಶಿವ ಕುಣಿದಾಡುತ್ತ ಶತ್ರುಗಳನ್ನು ಸದೆಬಡಿಯುತ್ತಾನೆ. ಅದೇ ಥರ ನೆಲದಲ್ಲಿ ಹೊರಳಾಡುತ್ತಾನೆ. ಅದೇ ಥರ ಚೀತ್ಕಾರ, ಹೂಂಕಾರ, ನೋಟ.

Tap to resize

Latest Videos

ಪುಷ್ಪದಲ್ಲೂ ಹೀರೋ ಮೇಲೆ ದೈವದ ಆವೇಶವಾದಂತಿದೆ. ಇದರಲ್ಲೂ ವಿಚಿತ್ರವಾಗಿ ಮುಖಕ್ಕೆ ಬಣ್ಣದ ಮೇಕಪ್‌ ಮಾಡಲಾಗಿದೆ. ಮುಖವನ್ನು ಹಾಗೂ ಕಣ್ಣುಗಳನ್ನು ಕಾಂತಾರದ ಶಿವನ ರೀತಿಯಲ್ಲೇ ಹೊರಳಿಸಿದ್ದಾನೆ. ಅದೇ ರೀತಿಯ ಹೂಮಾಲೆ ಧರಿಸಿಕೊಂಡಿದ್ದಾನೆ. ಮೈ ನಡುಗಿಸುವಿಕೆ ಎಲ್ಲ ಹಾಗೆಹಾಗೇ. ಇದನ್ನು ನೋಡಿ ಕನ್ನಡಿಗರು "ಯಬ್ಬೋ ಯಾವ ರೀತಿ ನಕಲು ಮಾಡಿದ್ದೀಯಲ್ಲಪ್ಪಾ ಶಿವನೇ" ಎಂದು ಪುಷ್ಪ ಹೀರೋ ಹಾಗೋ ಡೈರೆಕ್ಟರ್‌ ಅನ್ನು ಟ್ರೋಲ್‌ ಮಾಡಿದ್ದಾರೆ. 

ಇದೇ ಥರ ಇನ್ನೊಂದು ಡ್ಯಾನ್ಸನ್ನೂ ಪುಷ್ಪದಲ್ಲಿ ನಕಲು ಮಾಡಲಾಗಿದೆ ಎಂದು ಟ್ರೋಲ್‌ ಆಗಿದೆ. ಅದು ʼಪೀಲಿಂಗ್ಸ್‌ʼ ಎಂಬ ಸಾಂಗು. ಈ ಹಾಡಿನ ಮೊದಲಿನ ಪಲ್ಲವಿ ಅಥವಾ ಆರಂಭದ ಭಾಗ ಕನ್ನಡದ ಅಣ್ಣಮ್ಮ ಭಕ್ತಿಗೀತೆಯೊಂದನ್ನು ಹೋಲುತ್ತದೆ. ಅಣ್ಣಮ್ಮ ಭಕ್ತಿಗೀತೆಯೋಂದು "ಅಣ್ಣಮ್ಮ ದೇವಿಯ ಗುಡಿಗೆ ಬನ್ನಿ ಮಡಿಯಾ ಉಟ್ಕೊಂಡು" ಎಂದು ಶುರುವಾಗುತ್ತದೆ. ಇದು ತುಂಬ ಹಳೆಯದಾಗಿದ್ದು, ಅಣ್ಣಮ್ಮ ಭಕ್ತರಿಗೆಲ್ಲ ಇದರ ಬಗ್ಗೆ ಗೊತ್ತು. ಹೀಗಾಗಿ, ಅಣ್ಣಮ್ಮ ಭಕ್ತಿಗೀತೆಯನ್ನೂ ಪುಷ್ಪದಲ್ಲಿ ಕದಿಯಲಾಗಿದೆ ಅಂತಲೂ ಟ್ರೋಲ್‌ ಮಾಡಲಾಗ್ತಿದೆ. 

ರಜನಿಕಾಂತ್: ನೀನು ಹೀಗೆ ಬಂದ್ರೆ ಚಪ್ಪಲಿಯಲ್ಲಿ ಹೊಡಿತೀನಿ ಅಂದಿದ್ರು ನಂಗೆ!

ಪುಷ್ಪ-2 ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಬರೆದಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವು ದಿನಗಳ ಹಿಂದೆ ನಡೆದ ಪುಷ್ಪ-2 ಪ್ರೀಮಿಯರ್ ದುರಂತ ಘಟನೆಯೊಂದನ್ನು ಸೃಷ್ಟಿಸಿದೆ. ಡಿಸೆಂಬರ್ 4 ರಂದು ನಡೆದ ಈ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಈ ಪ್ರಕರಣದಲ್ಲಿ ಹಲವರು ದೂರು ನೀಡಿದ್ದಲ್ಲದೆ, ಪೊಲೀಸರು ಅಲ್ಲು ಅರ್ಜುನ್ ತಂಡ ಮತ್ತು ಸಂಧ್ಯಾ ಥಿಯೇಟರ್ ಮಾಲೀಕರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಪ್ರೇಕ್ಷಕರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಸಂಧ್ಯಾ ಥಿಯೇಟರ್ ಮತ್ತು ಥಿಯೇಟರ್‌ಗೆ ಬರುತ್ತಿರುವ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದ ಅಲ್ಲು ಅರ್ಜುನ್ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಧ್ಯಾ ಥಿಯೇಟರ್ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ನಾಥೂರಾಮ್ ಗೋಡ್ಸೆ ಜೀವನಾಧಾರಿತ ಸಿನಿಮಾಗೆ ಗೋಡ್ಸೆ ಪಾತ್ರಕ್ಕೆ ರಿಷಭ್ ಶೆಟ್ಟಿಯೇ ಸೂಕ್ತ ವ್ಯಕ್ತಿ!


 

click me!