ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿನಿಯರು ಸಾವು: ಪ್ರವಾಸಿಗರಿಗೆ ಪ್ರವೇಶ ನಿಷಿದ್ಧ

By Girish Goudar  |  First Published Dec 12, 2024, 6:13 PM IST

ಉತ್ತರಕನ್ನಡ ಜಿಲ್ಲಾಡಳಿತದ ನಿರ್ಧಾರಕ್ಕೆ ಜನರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮುರುಡೇಶ್ವರ ಬೀಚ್‌ನಲ್ಲಿ ಅವಘಡಗಳು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಪ್ರವಾಸಿಗರು ಬೀಚ್‌ಗೆ ಬರದಂತೆ ನಿರ್ಬಂಧಿಸೋದು ತಪ್ಪು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾರವಾರ(ಡಿ.12): ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕೋಲಾರದ ವಿದ್ಯಾರ್ಥಿನಿಯರು ಸಾವಿಗೀಡಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಬೀಚ್‌ಗೆ ಪ್ರವಾಸಿಗರನ್ನು ಬಿಡದಂತೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ಉತ್ತರಕನ್ನಡ ಜಿಲ್ಲಾಡಳಿತದ ನಿರ್ಧಾರಕ್ಕೆ ಜನರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮುರುಡೇಶ್ವರ ಬೀಚ್‌ನಲ್ಲಿ ಅವಘಡಗಳು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಪ್ರವಾಸಿಗರು ಬೀಚ್‌ಗೆ ಬರದಂತೆ ನಿರ್ಬಂಧಿಸೋದು ತಪ್ಪು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಉತ್ತರಕನ್ನಡ: ಪ್ರವಾಸಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿನಿ ಸಮುದ್ರದಲ್ಲಿ ಮುಳುಗಿ ಸಾವು, ಮೂವರು ನಾಪತ್ತೆ!

ಪ್ರವಾಸಿಗರನ್ನು ನಿರ್ಬಂಧಿಸಿದರೆ ಸಣ್ಣ ಪುಟ್ಟ ಅಂಗಡಿ ಮಾಡಿ ಜೀವನ ಮಾಡೋ ಬಡವರಿಗೆ ದೊಡ್ಡ ಏಟು ಬೀಳಲಿದೆ. ಅವಘಡ ನಡೆಯದಂತೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳನ್ನು ಬೀಚ್‌ಗೆ ಕರೆದುಕೊಂಡು ಬಂದಾಗ ಅವಘಡ ನಡೆದಲ್ಲಿ ಶಿಕ್ಷಕರನ್ನೇ ಹೊಣೆಯನ್ನಾಗಿಸಬೇಕು. ಇದರಿಂದ ವಿದ್ಯಾರ್ಥಿಗಳನ್ನು ಕರೆ ತಂದಾಗ ಶಿಕ್ಷಕರು ನಿರ್ಲಕ್ಷ್ಯ ವಹಿಸೋದು ತಪ್ಪುತ್ತೆ ಎಂದಿದ್ದಾರೆ. 

undefined

ಬೀಚ್‌ಗಳಲ್ಲಿ ಸುರಕ್ಷಿತ ಪ್ರದೇಶದವರೆಗೆ ಗುರುತಿಸಿ ಅಲ್ಲಿಯವರೆಗೆ ಮಾತ್ರ ಪ್ರವಾಸಿಗರನ್ನು ಬಿಡಬೇಕು. ಹೆಚ್ಚಿನ ಜೀವ ರಕ್ಷಕ ಸಿಬ್ಬಂದಿ, ಪೊಲೀಸರನ್ನು ನಿಯೋಜಿಸಬೇಕು. ಜೀವ ರಕ್ಷಕ ಉಪಕರಣಗಳನ್ನು ಪೂರೈಸಬೇಕು ಎಂದು ಸ್ಥಳೀಯರಾದ ದೀಪಕ್ ಶೆಣೈ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿನಿಯರು ಸಾವು: ಶಿಕ್ಷಕರನ್ನ ವಶಕ್ಕೆ ಪಡೆದ ಪೊಲೀಸರು

ಕಾರವಾರ:  ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿನಿಯರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಶಿಕ್ಷಕರನ್ನು ಮುರುಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದರು. 
ಕೋಲಾರ ಜಿಲ್ಲೆಯ ಮುಳಬಾಗಿಲು ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರನ್ನು ಮುರುಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. 

ಮುಖ್ಯೋಪಾಧ್ಯಾಯರಾದ ಶಶಿಕಲಾ (40), ಶಿಕ್ಷಕರಾದ ಸುನೀಲ್ ಆರ್. (33), ಚೌಡಪ್ಪ ಎಸ್. (34), ವಿಶ್ವನಾಥ್ ಎಸ್. (27), ಶಾರದಮ್ಮ ಸಿ.ಎನ್.‌ (37), ನರೇಶ ಕೆ. (30) ವಿರುದ್ಧ ಪ್ರಕರಣ ದಾಖಲಾಗುತ್ತು. ಆರು ಜನ ಶಿಕ್ಷಕರನ್ನು ಸಂಜೆ ವೇಳೆ ವಶಕ್ಕೆ ಪಡೆದು ಪೊಲೀಸರು ತನಿಖೆಯನ್ನ ನಡೆಸಿದ್ದಾರೆ.  

ಮುರುಡೇಶ್ವರ ದುರಂತ: ಮೃತ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ

ನಿನ್ನೆ ಮುರುಡೇಶ್ವರ ಸಮುದ್ರದಲ್ಲಿ ನಡೆದ ದುರ್ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ನಿನ್ನೆ ವಿದ್ಯಾರ್ಥಿನಿ ಶ್ರಾವಂತಿ (15) ಮೃತದೇಹ ಸಿಕ್ಕಿದ್ರೆ, ಇಂದು ದೀಕ್ಷಾ, ಲಾವಣ್ಯ, ವಂದನಾ ಮೃತದೇಹ ಪತ್ತೆಯಾಗಿತ್ತು. ಯಶೋಧ, ಲಿಪಿಕಾ, ವೀಕ್ಷಣಾ ರಕ್ಷಣೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೋಲಾರ ಜಿಲ್ಲೆಯ ಮುಳುಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ರು. 19 ಬಾಲಕಿಯರು ಹಾಗೂ 27 ಬಾಲಕರು ಸೇರಿ ಒಟ್ಟು 46 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರಲಾಗಿತ್ತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಮೋನೋ ಟ್ರಾವೆಲ್ಸ್‌ನಲ್ಲಿ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆತಂದಿದ್ದರು.  ಆದರೆ, ನಿನ್ನೆ ನಡೆದ ದುರ್ಘಟನೆಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರ ನಿರ್ಲಕ್ಷ್ಯವೇ ಕಾರಣವೆಂದು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಆರು ಜನ ಶಿಕ್ಷಕರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ. 

click me!