ನಾಗಾರ್ಜುನ ಅವರು ಹೊಸ ಸೊಸೆ ಶೋಭಿತಾ ಧೂಳಿಪಾಲ ಅವರನ್ನು ಆಕಸ್ಮಿಕವಾಗಿ ಮಾಜಿ ಸೊಸೆ ಸಮಂತಾ ಎಂದು ಕರೆದರು ಎಂಬ ಗಾಸಿಪ್ ಹರಿದಾಡುತ್ತಿದೆ. ಈ ಘಟನೆಯಿಂದ ಶೋಭಿತಾ ಕೋಪಗೊಂಡಿದ್ದಾರೆ ಎನ್ನಲಾಗಿದೆ.
ಅಕ್ಕಿನೇನಿ ನಾಗಾರ್ಜುನ ತಮ್ಮ ಮಾಜಿ ಸೊಸೆ ಸಮಂತಾ ಜೊತೆ ಮಗಳಂತಹ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಸಮಂತಾ ಕೂಡ ನಾಗಾರ್ಜುನರನ್ನು ಪ್ರೀತಿಯಿಂದ ಮಾವಯ್ಯ ಎಂದೇ ಕರೆಯುತ್ತಿದ್ದರು. ಅಲ್ಲದೇ ಹಲವು ಕಾರ್ಯಕ್ರಮಗಳಲ್ಲೂ ಈ ಮಾವ ಸೊಸೆ ಜೊತೆಯಾಗೇ ಭಾಗವಹಿಸುತ್ತಿದ್ದರೂ, ಅಲ್ಲದೇ ಸಮಂತಾ ತಮ್ಮ ಮಾವನ ಬಗ್ಗೆ ಯಾವಾಗಲೂ ಅಭಿಮಾನದ ಮಾತುಗಳನ್ನೇ ಆಡುತ್ತಿದ್ದರು. ಆದರೆ ನಾಗಚೈತನ್ಯ ಜೊತೆ ಸಂಬಂಧ ಹದಗೆಟ್ಟ ಕಾರಣಕ್ಕೆ ಸಮಂತಾ ವಿಚ್ಚೇದನ ಪಡೆದು ಆ ಕುಟುಂಬದ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಹೊರಬಂದಿದ್ದರು. ಆದರೆ ಮಾವ ನಾಗಾರ್ಜುನಗೆ ಮಾತ್ರ ತಮ್ಮ ಮುದ್ದಿನ ಸೊಸೆಯ ಗುಂಗು ಇನ್ನೂ ಇದೆ. ಹೀಗಾಗಿ ಅವರು ತಮ್ಮ ಹೊಸ ಸೊಸೆ ಶೋಭಿತಾ ಧೂಳಿಪಾಲ ಅವರನ್ನು ಬಾಯ್ತಪ್ಪಿ ಸಮಂತಾ ಎಂದು ಕರೆದರು. ಇದರಿಂದ ಹೊಸ ಸೊಸೆ ಕೋಪಗೊಂಡರು ಎಂಬಂತಾಹ ಗಾಸಿಪೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಗಚೈತನ್ಯ ಅವರು ಶೋಭಿತಾ ಧೂಳಿಪಾಲ ಜೊತೆ ಡಿಸೆಂಬರ್ 4 ರಂದು ಹಸೆಮಣೆ ಏರಿದ್ದರು. ಮದುವೆಯ ನಂತರ ನವ ಜೋಡಿ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದರ ಮಧ್ಯೆ ಈ ಸುದ್ದಿಯೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಶೋಭಿತಾ ಅವರು ಮದುವೆಯ ನಂತರ ಮಾಡುವ ಮೊದಲ ಸಿಹಿ ತಿನಿಸಾದ ಪೆಹ್ಲಿ ರಾಸೋಯಿ ಮಾಡಿ ತನ್ನ ಮಾವ ಹಾಗೂ ಗಂಡನಿಗೆ ನೀಡುವ ವೇಳೆ ನಾಗಾರ್ಜುನ ಅವರು ಬಾಯ್ತಪ್ಪಿ ನಾಗಾಚೈತನ್ಯ ಅವರ ಮೊದಲ ಪತ್ನಿ ಸಮಂತಾ ಅವರ ಹೆಸರಿನಿಂದ ಶೋಭಿತಾ ಅವರನ್ನು ಕೂಗಿದರಂತೆ ಇದರಿಂದ ಶೋಭಿತಾ ಸಿಟ್ಟುಗೊಂಡರು ಎಂದು ಹೇಳುತ್ತಿರುವ ವೀಡಿಯೋವೊಂದು ವೈರಲ್ ಆಗ್ತಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇಲ್ಲ,
ಸೊಸೆಯ ಹಾಟ್ ಎಂದು ಕರೆದು ಟ್ರೋಲ್ ಆದ ನಾಗಾರ್ಜುನ
ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದ್ವೆಯ ನಂತರ ನಾಗಾರ್ಜುನ ಅವರು ಸೊಸೆ ಶೋಭಿತಾ ಅವರ ಬಗ್ಗೆಈ ಹಿಂದೆ ಮಾಡಿದ್ದ ಕಾಮೆಂಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ನಾಗಾರ್ಜುನ ಟ್ರೋಲ್‌ಗೆ ಒಳಗಾದರು. ನಾಗಾರ್ಜುನ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸೊಸೆಯನ್ನು ಹೊಗಳುವ ಭರದಲ್ಲಿ ಆಕೆ ಬಹಳ ಚಂದದ ಬಹಳ ಆಕರ್ಷಣೀಯ ಹುಡುಗಿ, ನಾನು ಈ ವಿಚಾರವನ್ನು ಹೇಳಬಾರದು ಎಂದು ಹೇಳುತ್ತಲೇ ಆಕೆ ಸೋ ಹಾಟ್ ಎಂದು ಹೇಳಿದ್ದರು. ಈ ವೀಡಿಯೋ ಮದುವೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ನೆಟ್ಟಿಗರು ನಾಗಾರ್ಜುನ ಅವರನ್ನು ಟ್ರೋಲ್ ಮಾಡಿದ್ದರು. ಸೊಸೆಯನ್ನು ಯಾರಾದರೂ ಹಾಟ್ ಎಂದು ಹೇಳುತ್ತಾರೆಯೇ, ನಾಗಾರ್ಜುನ ಅವರಿಗೆ ಸಂಬಂಧದ ಲಿಮಿಟ್‌ಗಳ ಬಗ್ಗೆ ತಿಳಿದಿಲ್ಲ ಎಂದೆಲ್ಲ ಜನ ಟೀಕೆ ಮಾಡಿದ್ದರು. ಅಲ್ಲದೇ ಮೊದಲ ಸೊಸೆ ಸಮಂತಾ ಇವರಿಂದ ಗ್ರೇಟ್ ಎಸ್ಕೇಪ್ ಆದರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ಟೀಕೆಗೆ ತುಪ್ಪ ಸುರಿಯುವಂತೆ ನಾಗಾರ್ಜುನ ಅವರು ತಮ್ಮ ಮಗ ಸೊಸೆಯ ಮದ್ವೆ ನಂತರ ಶ್ರೀಶೈಲ ದೇಗುಲಕ್ಕೆ ಜೊತೆಗೆ ಭೇಟಿ ನೀಡಿದ್ದು ಈ ವೇಳೆ ಅಲ್ಲಿ ದೇವರ ಆರತಿ ತೆಗೆದುಕೊಳ್ಳುವ ವೇಳೆ ಅಗತ್ಯವಿಲ್ಲದಿದ್ದರೂ ಮಗ ಪಕ್ಕದಲ್ಲೇ ಇದ್ದರೂ ಸೊಸೆಯ ಕೂದಲು ಸರಿ ಮಾಡಿದ್ದು, ಇನ್ನಷ್ಟು ಟ್ರೋಲ್‌ಗೆ ಕಾರಣವಾಯ್ತು, ಮಗನಿಗಿಂತ ತಂದೆಯೇ ಹೆಚ್ಚು ಖುಷಿಯಾಗಿರುವಂತೆ ಕಾಣುತ್ತಿದೆ ಎಂದು ಕೆಲವರು ಟ್ರೋಲ್ ಮಾಡಿದ್ದರು.