ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್‌ ಕುರಿತು ಬಾಲಿವುಡ್‌ ನಟಿ ಹೇಳಿದ್ದೇನು?

By Suchethana D  |  First Published Dec 12, 2024, 1:06 PM IST

ಕೆಜಿಎಫ್‌-3 ಬಿಡುಗಡೆಗೆ ಯಶ್‌ ಅಭಿಮಾನಿಗಳು ಕಾಯುತ್ತಿರುವ ಬೆನ್ನಲ್ಲೇ ಶೂಟಿಂಗ್‌ ಸೆಟ್‌ನಲ್ಲಿ ಅವರ ಸ್ವಭಾವ, ನಡವಳಿಕೆ ಬಗ್ಗೆ ನಟಿ ರವೀನಾ ಟಂಡನ್‌ ಹೇಳಿದ್ದೇನು? 
 


ಸ್ಯಾಂಡಲ್​ವುಡ್​ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಿತ್ರವೆಂದರೆ ಅದು ಕೆಜಿಎಫ್​ ಮತ್ತು ಕೆಜಿಎಫ್​-2. ಇದೀಗ ಯಶ್​ ಅಭಿಮಾನಿಗಳು ಕೆಜಿಎಫ್​-3 ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್​ ಚಾಪ್ಟರ್​ 1 ವಿಶ್ವಾದ್ಯಂತ 250 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, 2022ರಲ್ಲಿ ಬಿಡುಗಡೆಯಾದ ಚಾಪ್ಟರ್​-2 1500 ಕೋಟಿ ರೂಪಾಯಿ ಗಳಿಸಿದೆ.  ಎರಡು ವರ್ಷಗಳ ಅಂತರದಲ್ಲಿ ಚಾಪ್ಟರ್​-2 ಬಂದಿದೆ. ಆದ್ದರಿಂದ ಇದಾಗಲೇ ಮತ್ತೆರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಚಾಪ್ಟರ್​-3 ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಅಷ್ಟಕ್ಕೂ ಕೆಜಿಎಫ್-3 ಸಿನಿಮಾದ ಘೋಷಣೆ ಬಹಳ ಹಿಂದೆಯೇ ನಡೆದಿದೆ.  ಸಿಂಪಲ್ ಪೂಜೆಯೊಂದಿಗೆ ಸ್ಕ್ರಿಪ್ಟ್ ಕೆಲಸ ಕೂಡ ಶುರು ಆಗಿದೆ.  2025 ರಲ್ಲಿ ಇದರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆ ಇದ್ದರೂ, ದಿನಾಂಕವಿನ್ನೂ ಫಿಕ್ಸ್‌ ಆಗಲಿಲ್ಲ. 
 
ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ ನಟಿ ರವಿನಾ ಟಂಡನ್‌ ಅವರು ನಟ ಯಶ್‌ ಅವರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರು ನಡೆದುಕೊಂಡಿರುವ ರೀತಿಯನ್ನು ಹಾಡಿ, ಹೊಗಳಿರುವ ನಟಿ ರವೀನಾ, ಕನ್ನಡದ ಸೂಪರ್ ಸ್ಟಾರ್  ಒಬ್ಬರು ಹೀಗೆ ಇಷ್ಟು ಸಿಂಪಲ್‌ ಇರುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರು down to earth ನಟ ಆಗಿದ್ದಾರೆ. ತುಂಬಾ ಚೆನ್ನಾಗಿ ಶೂಟಿಂಗ್‌ನಲ್ಲಿ ಸಹಕಾರ ನೀಡಿದ್ರು ಎಂದಿದ್ದಾರೆ. ನಾನು ಹಿಂದಿಯಳು, ಅವರು ಕನ್ನಡಿಗರು.  ನಾನು ಕನ್ನಡದ ಸೂಪರ್ ಸ್ಟಾರ್ ಎಂಬೆಲ್ಲಾ ನಡವಳಿಕೆ ಅವರಲ್ಲಿ ಇರಲೇ ಇಲ್ಲ. ಅವರು ಹೇಳುವ ಡೈಲಾಗ್‌ ನನಗೆ ಅರ್ಥ ಆಗುತ್ತಿರಲಿಲ್ಲ. ಪ್ರತಿಯೊಂದು ಡೈಲಾಗ್‌ ಅನ್ನು ನನಗೆ ತಿಳಿಸಿ ನನ್ನ ಭಾಷೆಯಲ್ಲಿಯೇ ವಿವರಣೆ ನೀಡುತ್ತಿದ್ದರು. ಒಬ್ಬ ಸೂಪರ್ ಸ್ಟಾರ್ ಇಷ್ಟೊಂದು ಉತ್ತಮ ನಡವಳಿಕೆ ಹೊಂದಿರುವುದು ತುಂಬಾ ಖುಷಿಯ ವಿಚಾರ ಎಂದು ನಟಿ ರವೀನಾ ಹೇಳಿದ್ದಾರೆ. 

ಮನೆಯವರನ್ನು ವಿರೋಧಿಸಿ ಮದ್ವೆಯಾದ್ವಿ: ಆದ್ರೆ ಕೊನೆಗೆ ಸಾಯುವ ಹಂತಕ್ಕೆ ಬಂದೆ... ಕಿರಿಕಿ ಕೀರ್ತಿ ಓಪನ್‌ ಮಾತು...
 
  ಅಂದಹಾಗೆ ರವೀನಾ,  ಕೆಜಿಎಫ್​-2ನಲ್ಲಿಯೂ ನಟಿಸಿದ್ದರು. ಅವರಿಗೆ  ಕೆಜಿಎಫ್​-3 ಕುರಿತು  ಈ ಹಿಂದೆ ಪ್ರಶ್ನೆ ಕೇಳಲಾಗಿತ್ತು. ಅಷ್ಟಕ್ಕೂ ಕೆಜಿಎಫ್​ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್​ ಮಂದಿಗೂ ಹುಚ್ಚೆಬ್ಬಿಸಿದೆ. ಇದೇ ಕಾರಣಕ್ಕೆ ಈ ಚಿತ್ರಕ್ಕಾಗಿ ಅವರೂ ಕಾತರದಿಂದ ಕಾಯುತ್ತಿದ್ದಾರೆ. ರವೀನಾ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಕೆಜಿಎಫ್​-3 ಯಾವಾಗ ಎಂದು ಹೇಳಬಹುದಾ ಎನ್ನುವ ಪ್ರಶ್ನೆಗೆ ನಟಿ, ಇಲ್ಲ, ಈಗಲೇ ಏನೂ ಹೇಳುವುದಿಲ್ಲ ಎನ್ನುತ್ತಲೇ ಅಲ್ಲಿಂದ ತೆರಳಿದ್ದರು. ಆದ್ದರಿಂದ ಸಿನಿಮಾದ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟಿದೆ. 

Tap to resize

Latest Videos

ಕಳೆದ ಅಕ್ಟೋಬರ್‍‌ನಲ್ಲಿ ನಡೆದಿದ್ದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ನಿರ್ಮಾಪಕ ವಿಜಯ್​ ಕಿರಗಂದೂರು ಪ್ರಶಸ್ತಿ ಸ್ವೀಕರಿಸಲು ಬಂದಾಗಲೂ ಇವೆರಡು ಚಿತ್ರಗಳ ಬಗ್ಗೆ ಮಾತನಾಡಿದ್ದರು.  ‘ಕೆಜಿಎಫ್​ 3’ ಹಾಗೂ ಕಾಂತಾರ ಪ್ರೀಕ್ವೆಲ್‌ ಚಿತ್ರದ ಬಿಡುಗಡೆ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದ್ದರು.  ಕೆಜಿಎಫ್‌ 3 ಚಿತ್ರದ ಬಗ್ಗೆ ಇನ್ನು 4-5 ತಿಂಗಳಲ್ಲಿ ಖಂಡಿತ ಅಪ್‌ಡೇಟ್‌ ಕೊಡುತ್ತೇವೆ, ಚಿತ್ರದ ಬಗ್ಗೆ ನಾವು ಚರ್ಚೆ ಮಾಡುತ್ತಲೇ ಇದ್ದೇವೆ ಎಂದಿದ್ದರು. ಜೊತೆಗೆ ಕಾಂತಾರ ಪ್ರೀಕ್ವೆಲ್‌ ಬಗ್ಗೆಯೂ ಮಾತನಾಡಿದ್ದ ಅವರು, ಸಿನಿಮಾ ಚಿತ್ರೀಕರಣ ಬಹಳ ಚೆನ್ನಾಗಿ ನಡೆಯುತ್ತಿದೆ. ರಿಷಬ್‌ ಶೆಟ್ಟಿ ಹಾಗೂ ತಂಡ ಕುಂದಾಪುರದಲ್ಲಿದ್ದುಕೊಂಡು ಬಹಳ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ಮುಂದಿನ ಆಗಸ್ಟ್‌ನಲ್ಲಿ ನೀವು ಕಾಂತಾರ 2 ನಿರೀಕ್ಷೆ ಮಾಡಬಹುದು ಎಂದು ಹೇಳಿದ್ದರು. 

ರಾಗಿ ಹಿಟ್ಟು ಕೊಟ್ಟು ನನ್ನನ್ನು ಖರೀದಿಸಿದ್ರು... 'ಥಟ್‌ ಅಂತ ಹೇಳಿ' ಖ್ಯಾತಿಯ ಸೋಮೇಶ್ವರ್ ಮಾತು ಕೇಳಿ!

click me!