ಉಪೇಂದ್ರ UI ಚಿತ್ರಕ್ಕೆ U/A ಸರ್ಟಿಫಿಕೇಟ್.... ಅರ್ಥವಾದ್ರೆ ಈ ಕಥೆ ಜಗತ್ತೇ ಬದಲಾಗುತ್ತೆ!

Dec 12, 2024, 4:44 PM IST

ರಿಯಲ್ ಸ್ಟಾರ್ ಉಪೇಂದ್ರ​ ಫ್ಯಾನ್ಸ್​ ನೆಚ್ಚಿನ ದಿನ ಹತ್ತಿರ ಬರ್ತಿದೆ.. ಉಪ್ಪಿ ಲಾಂಗ್ ಗ್ಯಾಪ್ ಬಳಿಕ ಡೈರೆಕ್ಟರ್ ಮಾಡಿರೋ UI ಮೂವಿ ಇದೇ ಡಿ.20ಕ್ಕೆ ರಿಲೀಸ್ ಅಗಲಿದೆ.  ಸೆನ್ಸಾರ್​​ ಮಂಡಳಿಯಿಂದಲೂ ‘UI​​’ ಫಸ್ಟ್​ ರ್ಯಾಂಕ್​ನಲ್ಲಿ ಪಾಸ್​ ಆಗಿದೆ. ಕರ್ನಾಟಕದಲ್ಲಿ ಥಿಯೇಟರ್​​ ಲಿಸ್ಟ್​ ರೆಡಿಯಾಗಿದೆ. ಎಲ್ಲೆಲ್ಲೂ UI​​​ದೇ ಕ್ರೇಜ್​​..ಇನ್​ ಏನಿದ್ರೂ ಪವರ್​ಫುಲ್​​​ ‘ಉಪ್ಪಿ​​’ದೇ ಆರ್ಭಟ. ಈ ಸಿನಿಮಾದ ಟ್ರೋಲ್ ಸಾಂಗ್ ಬಹಳ ಸದ್ದು ಮಾಡಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಆಗಿದ್ದ ವಿಚಾರಗಳನ್ನೆಲ್ಲಾ ಈ ಹಾಡಿನಲ್ಲಿ ಬಿಚ್ಚಿಡಲಾಗಿತ್ತು. ಆದರೆ ಸೆನ್ಸಾರ್ ಬಳಿಕ ಈ ಸಾಂಗ್ ಚಿತ್ರದಲ್ಲಿ ಇರುತ್ತಾ..? ಎನ್ನುವ ಅನುಮಾನ ಹಲವರನ್ನ ಕಾಡ್ತಾ ಇದೆ. ಚಿತ್ರದ ರನ್ಟೈಮ್ 2 ಗಂಟೆ 10 ನಿಮಿಷ ಎನ್ನಲಾಗ್ತಿದ್ದು. ಸಿನಿಮಾ ಬಹಳ ಎಂಗೇಜಿಂಗ್ ಆಗಿ ಇರುವ ಸಾಧ್ಯತೆಯಿದೆ.