
ಪಾಪ್ ಕಾರ್ನ್ (Popcorn) ಯಾರಿಗೆ ಇಷ್ಟವಿಲ್ಲ. ಸಿನಿಮಾ ನೋಡುವಾಗ ಅದನ್ನು ತಿನ್ನುವ ಮಜವೇ ಬೇರೆ. ಇನ್ನು ಜೋಳವನ್ನು ಬೆಂಕಿಯಲ್ಲಿ ಸುಟ್ಟು ಅದಕ್ಕೆ ಖಾರ, ನಿಂಬು, ಉಪ್ಪು ಹಾಕಿ ತಿನ್ನುತ್ತಿದ್ರೆ ಆಹಾ, ಬಾಯಲ್ಲಿ ನೀರು ಬರುತ್ತೆ. ಕಾರ್ನ್ ಅಂದಾಗ ನಮ್ಮ ಕಣ್ಮುಂದೆ ಬರೋದು ಒಂದೇ ಬಣ್ಣ. ಆದ್ರೆ ಬಣ್ಣ ಬಣ್ಣದ ಹೊಳೆಯುವ ಮಣಿಗಳನ್ನು ಪೊಣಿಸಿದಂತೆ ಕಾಣುವ ಜೋಳವೂ ನಮ್ಮಲ್ಲಿದೆ. ಕೆಂಪು, ಕಪ್ಪು, ನೀಲಿ, ಗುಲಾಬಿ ಹೀಗೆ ನಾನಾ ಬಣ್ಣಗಳು ಒಂದೇ ಜೋಳದ ಕುಂಡಿಗೆಯಲ್ಲಿ ಹೊಳೆಯುತ್ತಿದ್ರೆ ಎತ್ತಿಟ್ಟುಕೊಳ್ಳುವ ಮನಸ್ಸಾಗುತ್ತೆ.
ಕೆಲವರು ಇದನ್ನು ನೋಡಿ ಫೋಟೋ ಎಡಿಟ್ ಅಂದ್ಕೊಳ್ಳೋದು ಇದೆ. ಆದ್ರೆ ನಿಜವಾಗ್ಲೂ ಸುಂದರ ಬಣ್ಣಗಳ ಕಾರ್ನ್, ನಿಸರ್ಗ (nature)ದ ಅಚ್ಚರಿಯಲ್ಲಿ ಒಂದು. ಮೂರು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಈ ಬಣ್ಣ ಬಣ್ಣದ ಕಾರ್ನ್ ಸದ್ದು ಮಾಡಿತ್ತು. ಈಗ್ಲೂ ಅದನ್ನು ಜನರು ಅಚ್ಚರಿಯಿಂದಲೇ ನೋಡ್ತಾರೆ. ಹೊಳೆಯುವ ಈ ಜೋಳ ರತ್ನಗಳಂತೆ ಮಿನುಗುತ್ತವೆ. ಇದನ್ನು ಗ್ಲಾಸ್ ಜೆಮ್ ಕಾರ್ನ್ (glass gem corn) ಎಂದು ಕರೆಯಲಾಗುತ್ತದೆ.
ಬೆಲ್ ಪೆಪ್ಪರ್ ಬರೀ ತರಕಾರಿಯಲ್ಲ, ಆರೋಗ್ಯ ಕಾಯುವ ಸೂಪರ್‌ಫುಡ್!
ಗ್ಲಾಸ್ ಜೆಮ್ ಕಾರ್ನನ್ನು ಇಂಡಿಯನ್, ಕ್ಯಾಲಿಕೊ ಎಂದೂ ಕರೆಯಲಾಗುತ್ತದೆ. ಉತ್ತರ ಅಮೆರಿಕಾದ ತಳಿ ಇದಾಗಿದೆ. ಇದು ಬಹುವರ್ಣದ ಫ್ಲಿಂಟ್ ಕಾರ್ನ್‌ನ ಒಂದು ವಿಧವಾಗಿದೆ. ಇದ್ರಲ್ಲಿ ಕಾರ್ನ್ ಗಾತ್ರ 3 ರಿಂದ 8 ಇಂಚುಗಳವರೆಗೆ ಇರುತ್ತದೆ. ಇದನ್ನು ಫ್ಲಿಂಟ್ ಕಾರ್ನ್ ಎಂದೂ ಕರೆಯಲಾಗುತ್ತದೆ. ನಾಟಿ ಮಾಡಿದ 110 ರಿಂದ 120 ದಿನಗಳ ನಂತರ ಈ ಜೋಳವನ್ನು ಕೊಯ್ಲು ಮಾಡಬಹುದು.
ಗ್ಲಾಸ್ ಜೆಮ್ ಕಾರ್ನ್ ಇತಿಹಾಸ : ಗ್ಲಾಸ್ ಜೆಮ್ ಕಾರ್ನ್ ಕಥೆಯು 1980ರ ನಂಟನ್ನು ಹೊಂದಿದೆ. ಆಗ್ಲೇ ಗ್ಲಾಸ್ ಜೆಮ್ ಕಾರ್ನ್ ಬೆಳೆಯಲಾಗುತ್ತಿತ್ತು ಎನ್ನಲಾಗುತ್ತದೆ. ಇದು ಓಕ್ಲಹೋಮಾದ ಕಾರ್ಲ್ ಬಾರ್ನ್ಸ್ ಎಂಬ ರೈತನೊಂದಿಗೆ ಪ್ರಾರಂಭವಾಗುತ್ತದೆ. 2016 ರಲ್ಲಿ ನಿಧನರಾದ ಬಾರ್ನ್ಸ್, ಹಳೆಯ ಜೋಳದ ಪ್ರಭೇದಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಆದ್ರೆ ಅದನ್ನು ಸರಿಯಾಗಿ ಯಾವ ವರ್ಷದಿಂದ ಅವರು ಬೆಳೆಯಲು ಶುರು ಮಾಡಿದ್ದರು ಎಂಬ ಬಗ್ಗೆ ದಾಖಲೆ ಇಲ್ಲ. ಬಾರ್ನ್ಸ್, ತಾನು ಹೋದ ದೇಶದಲ್ಲಿ ಜನರಿಗೆ ಈ ಪುರಾತನ ಜೋಳದ ಬೀಜಗಳನ್ನು ವಿನಿಮಯ ಮಾಡಲು ಶುರು ಮಾಡಿದ್ದರು. ಇದೇ ವೇಳೆ ಬಾರ್ನ್ಸ್ ವಿಶೇಷವಾಗಿ ಬಣ್ಣದ ಕಾರ್ನ್ ಬೀಜಗಳನ್ನು ಸಂಗ್ರಹಿಸಲು, ಉಳಿಸಲು ಮತ್ತು ಮರು ನೆಡುವ ಕೆಲಸವನ್ನೂ ಮಾಡ್ತಿದ್ದರು.
ಚೋಲೆ ಕುಲ್ಚಾ ಮಾರಿ ಕೋಟ್ಯಾಧಿಪತಿಯಾದವನಿಗೆ ಕೂರಲೂ ಟೈಂ ಇಲ್ಲ!
2005 ರಲ್ಲಿ, ಬಾರ್ನ್ಸ್ ಸ್ಯಾಂಟೆ ಫೆ ಬಳಿ ಜೋಳದ ದೊಡ್ಡ ಪ್ಲಾಟ್ ಶುರು ಮಾಡಿದ್ರು. ವರ್ಣಮಯ ಜೋಳವನ್ನು ಸಾಂಪ್ರದಾಯಿಕ ತಳಿಗಳೊಂದಿಗೆ ಬೆರೆಸಿದಾಗ ಅದು ಹೊಸ ತಳಿಗಳನ್ನು ಸೃಷ್ಟಿಸಿತು. ಕೆಲ ವರ್ಷಗಳಲ್ಲಿ ಬಾರ್ನ್ಸ್ ಕೃಷಿಯಿಂದ ನಿವೃತ್ತಿ ಹೊಂದಿದ್ರೂ, ತನ್ನ ಬಳಿ ಇದ್ದ ಈ ಭಿನ್ನ ಬೀಜವನ್ನು ಶಿಷ್ಯ ಗ್ರೆಗ್ ಸ್ಕೋನ್‌ಗೆ ನೀಡಿದರು. ಅವರು ಬಿಲ್ ಮೆಕ್‌ಡಾರ್ಮನ್ ಜೊತೆಗೆ 2008 ರಲ್ಲಿ ಆ ಬೀಜಗಳನ್ನು ಹಂಚಿಕೊಂಡರು. 2008ರಲ್ಲಿ ಭಾರತಕ್ಕೆ ಈ ಬೀಜದ ಪ್ರವೇಶವಾಯ್ತು.
ಗ್ಲಾಸ್ ಜೆಮ್ ಕಾರ್ನ್ ರುಚಿ ಹೇಗಿರುತ್ತದೆ? : ಸಿಹಿ ಕಾರ್ನ್‌ಗಿಂತ ಇದರ ರುಚಿ ಭಿನ್ನವಾಗಿರುತ್ತದೆ. ಇದನ್ನು ಕಾರ್ನ್ ರೀತಿ ತಿನ್ನಲು ಸಾಧ್ಯವಿಲ್ಲ ಒಣಗಿಸಿ, ಹಿಟ್ಟು ಮಾಡಿ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಪಿಷ್ಟ ಹೆಚ್ಚಿರುತ್ತದೆ. ಪಾಪ್‌ಕಾರ್ನ್ ತಯಾರಿಸಲೂ ಇದನ್ನು ಬಳಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.