ಈ 5 ಕೆಲಸ ಮಾಡಿದ್ರೆ ಲೈಂಗಿಕ ಜೀವನ ಬೊಂಬಾಟ್ ಆಗಿರುತ್ತೆ

First Published | Jul 20, 2023, 1:26 PM IST

ವೈವಾಹಿಕ ಜೀವನ ರೊಮ್ಯಾಂಟಿಕ್ ಆಗಿರಬೇಕು ಅಂದ್ರೆ ಅಲ್ಲಿ ಸೆಕ್ಸ್ ತುಂಬಾ ಇಂಪಾರ್ಟಂಟ್ ಆಗಿರುತ್ತೆ. ಲೈಂಗಿಕ ಜೀವನವು ಉತ್ತಮವಾಗಿದ್ದರೆ, ಅನೇಕ ಸಮಸ್ಯೆಗಳು ಸಹ ನಿವಾರಣೆಯಾಗುತ್ತೆ. ಹಾಗಿದ್ರೆ ಸೆಕ್ಸ್ ಲೈಫ್ ಚೆನ್ನಾಗಿರಲು ಏನು ಮಾಡಬೇಕು?. 
 

ಯಾರೂ ಏನೇ ಹೇಳಲಿ, ಬಿಡಲಿ ಆದರೆ ಸೆಕ್ಸ್ ಲೈಫ್ (sex life) ಚೆನ್ನಾಗಿದ್ದರೆ ಮಾತ್ರ ವೈವಾಹಿಕ ಜೀವನ ಸುಂದರವಾಗಿರೋದು ಅನ್ನೋದು ಮಾತ್ರ ಸುಳ್ಳಲ್ಲ. ಅನೇಕ ಸಲ ಏನಾಗುತ್ತೆ ಅಂದ್ರೆ, ಸಂಗಾತಿ ಸರಿಯಾಗಿ ಬೆಂಬಲ ಕೊಡದೇ ಇದ್ರೆ, ಸೆಕ್ಸ್ ಲೈಫ್ ಎಂಜಾಯ್ ಮಾಡೋದಿಕ್ಕೆ ಸಾಧ್ಯವಾಗೋದಿಲ್ಲ. ಹೀಗೆ ಆಗ್ತಿದ್ರೆ ನಾವು ಕೆಲವೊಮ್ಮೆ ನಮ್ಮನ್ನು, ನಮ್ಮ ಸಂಗಾತಿಯನ್ನು ಧೂಷಿಸುತ್ತೇವೆ. ನೀವು ಸಹ ಸೆಕ್ಸ್ ಲೈಫ್ ಚೆನ್ನಾಗಿರಬೇಕು ಎಂದು ಬಯಸಿದ್ರೆ ಈ ಐದು ಕೆಲಸ ಮಾಡಲು ಮರೆಯಬೇಡಿ. 
 

ನಿಮ್ಮ ಲೈಂಗಿಕ ಜೀವನ ಸುಂದರವಾಗಿರಬೇಕೆಂದು ನೀವು ಬಯಸಿದ್ರೆ ಇವುಗಳನ್ನು ಮಾಡಿ 
ನಿಮ್ಮ ಲೈಂಗಿಕ ಅನುಭವ ಮತ್ತು ಲೈಂಗಿಕ ಜೀವನವನ್ನು ಸುಧಾರಿಸಬಹುದಾದ ಕೆಲವು ಸರಳ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನ ಫಾಲೋ ಮಾಡಿದ್ರೆ, ಸೆಕ್ಸ್ ಲೈಫ್ ನಿಜವಾಗ್ಲೂ ಚೆನ್ನಾಗಿರುತ್ತೆ.

Latest Videos


ವರ್ಕೌಟ್ ಮಾಡಿ (workout)
ಇದು ವಿಚಿತ್ರವಾಗಿ ತೋರಬಹುದು, ಆದರೆ ಇದು 100% ಸತ್ಯ. ದೇಹವನ್ನು ಸದೃಢವಾಗಿಡುವುದು ಲೈಂಗಿಕ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೃತ್ಯ, ಯೋಗ, ವಾಕಿಂಗ್, ಸಲಾಡ್ ತಿನ್ನುವುದು, ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಸ್ವಲ್ಪ ಹೆಚ್ಚು ನಿದ್ರೆ ಮಾಡುವುದು ಇವೆಲ್ಲವೂ ದೇಹಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ. ಜೊತೆಗೆ ಇದು ಲೈಂಗಿಕ ಬಯಕೆಯನ್ನು (Sexual desire) ಹೆಚ್ಚಿಸುತ್ತದೆ. 

ಲೈಂಗಿಕ ಕ್ರಿಯೆಯ ಸಮಯದಲ್ಲಿ, ದೇಹಕ್ಕೆ ಸಾಕಷ್ಟು ಶಕ್ತಿ ಬೇಕು. ಕಾರ್ಡಿಯೋ ವರ್ಕೌಟ್ (cardio workout) ಮಾಡೋದ್ರಿಂದ ನಿಮ್ಮ ಹೃದಯ ಆಕ್ಟೀವ್ ಆಗಿರುತ್ತೆ. ಈ ಕಾರಣದಿಂದಾಗಿ, ಜನನಾಂಗಗಳಲ್ಲಿ ಮತ್ತು ದೇಹದಾದ್ಯಂತ ರಕ್ತ ಪರಿಚಲನೆ (Blood Circulation) ಸಹ ಉತ್ತಮವಾಗಿರುತ್ತದೆ. ಇದು ಲೈಂಗಿಕಾಸಕ್ತಿಯನ್ನು (Sexual Deire) ಹೆಚ್ಚಿಸುತ್ತೆ. ಆರ್ಗಸಂ ಹೆಚ್ಚಿಸಲು ಸಹ ಸಹಾಯ ಮಾಡುತ್ತೆ.

ನಿಮ್ಮನ್ನು ನೀವು ತೃಪ್ತಿಪಡಿಸಿ 
ನೀವು ನಿಮ್ಮನ್ನು ಪ್ರೀತಿಸದಿದ್ದರೆ, ಬೇರೆಯವರು ಏಕೆ ಪ್ರೀತಿಸುತ್ತಾರೆ? ಅಲ್ವಾ? ಅದಕ್ಕಾಗಿಯೇ ನಿಯಮಿತವಾಗಿ ಹಸ್ತಮೈಥುನ (masturbation) ಮಾಡಿ. ನೀವು ಏನನ್ನು ಇಷ್ಟಪಡುತ್ತೀರಿ ಮತ್ತು ಯಾವುದನ್ನು ಇಷ್ಟಪಡುವುದಿಲ್ಲ ಅನ್ನೊದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತೆ. ಹಸ್ತಮೈಥುನದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಆದರೆ ಇದರಿಂದ ಯಾವುದೇ ಹಾನಿ ಆಗೋದಿಲ್ಲ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಇದು ನಿಮ್ಮೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತೆ..

ಒಬ್ಬರಿಗೊಬ್ಬರು ಕಲಿಸಿ (teach each other)
ಸೆಕ್ಸ್ ಅನ್ನೋದನ್ನು ವ್ಯವಹಾರದ ಹಾಗೆ ನೋಡಬೇಡಿ. ಪರಸ್ಪರ ಸೂಕ್ಷ್ಮ ಕ್ಷಣಗಳನ್ನು ಎಂಜಾಯ್ ಮಾಡಿ. ನಿಮಗೆ ಏನು ಇಷ್ಟ ಎಂದು ನಿಮ್ಮ ಸಂಗಾತಿಗೆ ತಿಳಿಸಿ. ಅವರಿಗೆ ಎಲ್ಲವೂ ತಿಳಿದಿದೆ, ಅವರೇ ಎಲ್ಲಾ ಮಾಡ್ತಾರೆ ಅನ್ನೋದು ತಪ್ಪು. ನೀವಿಬ್ಬರೂ ವಿಭಿನ್ನ ವ್ಯಕ್ತಿಗಳು, ಆದ್ದರಿಂದ ನಿಮ್ಮ ಇಷ್ಟಗಳು ಮತ್ತು ಇಷ್ಟಪಡದಿರೋದು ವಿಭಿನ್ನವಾಗಿರುತ್ತವೆ. ನಿಮಗೆ ಏನು ಇಷ್ಟ ಅನ್ನೋದನ್ನು ಹೇಳದೇ ಇದ್ದರೆ, ಅವರಿಗೆ ಆ ಬಗ್ಗೆ ತಿಳಿಯೋದಾದರೂ ಹೇಗೆ? ಹಾಗಾಗಿ ಪರಸ್ಪರ ಒಬ್ಬರಿಗೊಬ್ಬರು ಕಲಿಸಬೇಕು. 

ವಜೈನಾ ಬಗ್ಗೆ ಕಾಳಜಿ ವಹಿಸಿ (vagina health)
ಉತ್ತಮ ಲೈಂಗಿಕತೆಗಾಗಿ ಜನನಾಂಗಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಯೋನಿಯಲ್ಲಿ ಶುಷ್ಕ, ತುರಿಕೆ ಅಥವಾ ಕೆಟ್ಟ ವಾಸನೆ ಇದ್ದರೆ, ಅದು ನಿಮ್ಮಿಬ್ಬರ ಲೈಂಗಿಕ ಅನುಭವವನ್ನು ಹಾಳುಮಾಡುತ್ತೆ. ಅದಕ್ಕಾಗಿಯೇ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಇದರೊಂದಿಗೆ, ಲ್ಯೂಬ್ರಿಕೇಶನ್ ಸಹ ಬಹಳ ಮುಖ್ಯ. 
 

ಸೆಕ್ಸ್ ಫ್ಯಾಂಟಸಿ (sex fantasy)
ಪ್ರತಿಯೊಬ್ಬರ ಹೃದಯದಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಅನೇಕ ಕಲ್ಪನೆಗಳಿವೆ. ಅದರ ಬಗ್ಗೆ ನಿಮ್ಮ ಸಂಗಾತಿ ಜೊತೆ ಮಾತುಕತೆ ನಡೆಸಿ. ಇಬ್ಬರೂ ಒಪ್ಪಿದರೆ, ಯಾವುದೂ ತಪ್ಪು ಅಥವಾ ಸರಿ ಅಲ್ಲ ಅರ್ಥ ಮಾಡಿಕೊಂಡರೆ, ನೀವು ಬಯಸಿದಂತೆ ಸೆಕ್ಸ್ ನ್ನು ಎಂಜಾಯ್ ಮಾಡಬಹುದು. ಸೆಕ್ಸ್ ಫ್ಯಾಂಟಸಿ ನಿಮಗೆ ಹೊಸತನದ ಅನುಭವ ನೀಡುತ್ತೆ, ಜೊತೆಗೆ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಾಧ್ಯವಾಗುತ್ತೆ. 

click me!