ನಂದ ಲವ್ಸ್‌ ನಂದಿತಾ ಅಲ್ಲ.. ಇದು ನಿತ್ಯಾನಂದ ಕ್ರಿಯೇಟ್ಸ್‌ ನಿತ್ಯಾನಂದಿತಾ!

By Santosh Naik  |  First Published Nov 15, 2024, 7:26 PM IST

ನಿತ್ಯಾನಂದ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ನಿತ್ಯಾನಂದಿತಾಳನ್ನು ಪರಿಚಯಿಸಿದ್ದಾರೆ. ವಿಡಿಯೋದಲ್ಲಿ ನಿತ್ಯಾನಂದಿತಾ ತನ್ನನ್ನು ನಿತ್ಯಾನಂದನ ಮಗಳು, ಆತನ ಘರ್ಜನೆ ಎಂದು ಬಣ್ಣಿಸಿಕೊಂಡಿದ್ದಾರೆ. ಈ ಸಂಬಂಧದ ನಿಖರ ಸ್ವರೂಪ ತಿಳಿದಿಲ್ಲ, ಜನರು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.


ಮಾಡೋದೇಲ್ಲಾ ಅನಾಚಾರ ಮಾಡಿ ಜೀವನದಲ್ಲಿ ನೆಮ್ಮದಿಯಾಗಿ ಇರೋದು ನಿತ್ಯಾನಂದ ಒಬ್ಬನೇ ಇರಬೇಕು. ಈಗ ನಿತ್ಯಾನಂದ ತಮ್ಮ ಬದುಕಿನಿ ನಿತ್ಯಾನಂದಿತಾಳನ್ನು ಜನರಿಗೆ ಪರಿಚಯಿಸಿದ್ದಾರೆ. ಈ ಬಗ್ಗೆ ಸ್ವತಃ ನಿತ್ಯಾನಂದ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಆತ ನಿತ್ಯಾನಂದ & ನಾನು ಆತನ ನಿತ್ಯಾನಂದಿತಾ ಎಂದು ರೀಲ್ಸ್‌ ಹಂಚಿಕೊಳ್ಳಲಾಗಿದ್ದು, ನಿತ್ಯಾನಂದಿತಾ ಜೊತೆಗಿನ ತಮ್ಮ ಆತ್ಮೀಯತೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಅನ್ನು ನೋಡಿದವರು ಕೂಡ ತಲೆ ಕೆರೆದುಕೊಳ್ಳಲು ಆರಂಭಿಸಿದ್ದಾರೆ. ಅಷ್ಟಕ್ಕೂ ಈ ನಿತ್ಯಾನಂದಿತಾ ಯಾರು? ನಿತ್ಯಾನಂದನ ಗರ್ಲ್‌ಫ್ರೆಂಡೇ? ನಿತ್ಯಾನಂದನ ಮಡದಿಯೇ? ಆತ್ಮೀಯ ಭಕ್ತಳೇ? ಎಂದು ತಲೆಕೆಡಿಸಿಕೊಂಡಿದ್ದಾರೆ. ಅದರೊಂದಿಗೆ ವಿಡಿಯೋದಲ್ಲಿ ಇರುವ ಸಾಲುಗಳು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಇರುವ ಗ್ರಾಫಿಕ್‌ಗಳನ್ನು ನೋಡಿದರೆ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದು ಸೂಚಿಸುತ್ತದೆಯಾದರೂ ಈ ಬಗ್ಗೆ ಅಧಿಕೃತವಾಗಿಯೇನು ಬರೆದಿಲ್ಲ. ಇದಕ್ಕೆ ಬಂದಿರುವ ಕಾಮೆಂಟ್‌ಗಳು ಕೂಡ ಬಹಳ ಮಜವಾಗಿವೆ.

ಅಷ್ಟಕ್ಕೂ ವಿಡಿಯೋದಲ್ಲಿ ಇರೋದು ಏನು ಅನ್ನೋದಾದರೆ, 'ನಾನು ಎಲ್ಲರಂತೆ ಸಾಮಾನ್ಯ ಇನ್ನೊಂದು ಹುಡುಗಿಯಾಗಿ ಇರ್ತಿದ್ದೆ. ಈ ಪ್ರಪಂಚದಲ್ಲಿ ಕಳೆದು ಹೋಗಿರುತ್ತದೆ. ಸಾಮಾನ್ಯ ಜನಜೀನವ ನಡೆಸಿರುತ್ತಿದ್ದೆ. ಆದರೆ, ನಂತರ... ಈ ಕಣ್ಣುಗಳು, ಈ ನಗು, ಈತನ ಕರುಣೆ. ಅವರು ಅವರ ರೂಪವನ್ನು ಪಡೆದುಕೊಂಡಾಗ ನಾನು ಯಾವ ಮನೆಗೆ ಸೇರಬೇಕೋ ಅಲ್ಲಿಗೆ ಕರೆಸಿಕೊಂಡರು. ಅವರೊಂದಿಗಿದ್ದಾಗಲೇ ನಾನು ಪ್ರೀತಿಯಿಂದ ಎದ್ದಿದ್ದೇನೆ. ಜೀವಮಾನದ ಸಂಬಂಧಗಳ ರೂಪವಾಗಿದ್ದೇನೆ.ಸಮಾಜದ ಮಿತಿಗಳನ್ನು ದಾಟಿದ್ದೇನೆ. ಎಲ್ಲಿಯವರೆಗೆ ಎಂದರೆ, ನಿಮ್ಮ ಜಡ್ಡುಗಟ್ಟಿದ ಮೆದಳು ಯೋಚಿಸದೇ ಇರುವಷ್ಟು. ಇದು ಪವಿತ್ರ. ಆತ ಸಿಂಹವಾದರೆ, ನಾನು ಆತನ ಘರ್ಜನೆ. ಆತ ದೇವರು. ನಾನು ಆತನ ಮಗಳು. ಆತ ನಿತ್ಯಾನಂದ, ನಾನಿ ಆತನ ನಿತ್ಯಾನಂದಿತಾ..' ಎಂದು ನಿತ್ಯಾನಂದಿತಾ ಹೇಳುವ ರೀತಿಯಲ್ಲೇ ವಿಡಿಯೋ ಪ್ರಸ್ತುತಪಡಿಸಲಾಗಿದ್ದು, ಇಬ್ಬರೂ ಜೊತೆಯಲ್ಲೇ ಇರುವ ಹಲವಾರು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ನಂದ ಲವ್ಸ್‌ ನಂದಿತಾ..' 'ಜಿಟಿಎ6 ಬರುವ ಮುನ್ನವೇ ನಿತ್ಯಾನಂದ ಲವ್‌ ಸ್ಟೋರಿ ಬಂದುಬಿಟ್ಟಿದೆ', 'ಹಾಗಾದರೆ ರಾಜಮಾತಾ ಶಿವರಂಜಿನಿ ಕಥೆಏನು?' ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಇಡೀ ವಿಡಿಯೋ ನೋಡಿದೆ, ಈಕೆ ನಿಮ್ಮ ಮಗಳೋ ಅಥವಾ ಪತ್ನಿಯೋ ಅನ್ನೋದೇ ಅರ್ಥವಾಗಿಲ್ಲ ಎಂದು ಬರೆದಿದ್ದಾರೆ.

Tap to resize

Latest Videos

undefined

ದೇವರಿಗೆ ತಾನು ದೇವರು ಎಂದು ತೋರಿಸಿಕೊಳ್ಳಲು ಇನ್ಸ್‌ಟಾಗ್ರಾಮ್‌ ರೀಲ್ಸ್‌ನ ಅಗತ್ಯವಿಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದು ಮತ್ತೊಬ್ಬರು ಬರೆದಿದ್ದಾರೆ. ಒಂದೇ ಹುಡುಗಿ ಮಗಳಾಗಿಯೂ ಪತ್ನಿಯಾಗಿಯೂ ಇರೋಕೆ ಹೇಗೆ ಸಾಧ್ಯ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. 

Pregnancy Job Scam: ಶ್ರೀಮಂತ ಮಹಿಳೆಯರನ್ನ ಗರ್ಭಿಣಿ ಮಾಡಿದ್ರೆ 50 ಲಕ್ಷ ರೂಪಾಯಿ ಆಫರ್‌!

'ಈ ರೀಲ್‌ ನೋಡಿದ ಬಳಿಕ ಅರ್ಥವಾಗಿದ್ದೇನೆಂದರೆ, ನಿತ್ಯಾನಂದನ ಗುರುಕುಲದಲ್ಲಿ ಇಂಗ್ಲೀಷ್‌ ಕಲಿಸೋದಿಲ್ಲ ಅನ್ನೋದು' ಎಂದು ಮತ್ತೊಬ್ಬರು ಬರೆದಿದ್ದರೆ, ಕೊನೆಗೂ ಜಿವಿ ಪ್ರಕಾಶ್‌ ಮ್ಯೂಸಿಕ್‌ ಕೈಲಾಸದವರೆಗೂ ತಲುಪಿದ್ದು ಕೇಳಿ ಖುಷಿಯಾಯಿತು ಎಂದು ಬರೆದಿದ್ದಾರೆ. 'ಕೊನೆಗೂ ಸ್ವಾಮಿ ಸುಂದರವಾದ ಹುಡುಗಿಯನ್ನ ಪಟಾಯಿಸಿದ್ದಾರೆ' ಎಂದು ಮತ್ತೊಬ್ಬರು ಬರೆದಿದ್ದಾರೆ.

ಬೆಂಗಳೂರು ಯುವತಿ ಗುಟ್ಟಾಗಿ ಮದುವೆಯಾದ 54 ವರ್ಷದ ಸ್ವಾಮೀಜಿ, ತಮಿಳುನಾಡು ಮಠದಿಂದ ಕಿಕ್‌ಔಟ್‌

 

 

 

click me!