ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ!

By Sathish Kumar KH  |  First Published Nov 16, 2024, 1:11 PM IST

ಬೆಂಗಳೂರಿನಲ್ಲಿ ಹೊಸ ಮೊಬೈಲ್ ಕೊಡಿಸಲು ನಿರಾಕರಿಸಿದ ತಂದೆಯೊಬ್ಬ 14 ವರ್ಷದ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಮಗ ಮೊಬೈಲ್ ರಿಪೇರಿ ಮಾಡಿಸಲು ಹಠ ಹಿಡಿದಿದ್ದಕ್ಕೆ ಕೋಪಗೊಂಡ ತಂದೆ ಹಲ್ಲೆ ನಡೆಸಿದ್ದಾನೆ.


ಬೆಂಗಳೂರು (ನ.16): ಅಪ್ಪಾ.. ಅಪ್ಪ.. ನಂಗೆ ನೀನು ಹೊಸ ಮೊಬೈಲ್ ಕೊಡಿಸಪ್ಪಾ.. ಇಲ್ಲ, ಮನೆಯಲ್ಲಿರುವ ಹಳೆಯ ಮೊಬೈಲ್ ಅನ್ನೇ ರಿಪೇರಿ ಮಾಡಿಉ ಅಪ್ಪಾ.. ಎಂದು ಕೇಳಿದ 14 ವರ್ಷದ ಮಗನನ್ನು ನಿಷ್ಕರುಣಿ ತಂದೆ, ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ವೇಳೆ ಈ ದುರ್ಘಟನೆ ನಡೆದಿದೆ. ತೇಜಸ್ (14) ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಮಗ ಆಗಿದ್ದಾನೆ. ಮಗನನ್ನೇ ಕೊಂದ ಆರೋಪಿ ರವಿಕುಮಾರ್ ಆಗಿದ್ದಾನೆ. ಇಲ್ಲಿ ತಂದೆಯೇ ತನ್ನ ಮಗನನ್ನು ಹೊಡೆದು ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ. ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದೆ. ಮಗನನ್ನೇ ಹೊಡೆದು ಕೊಲೆ ಮಾಡಿದ ಘಟನೆಗೆ ಕಾರಣ ಕೇಳಿದರೆ, ಇಷ್ಟು ಸಣ್ಣ ವಿಚಾರಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಅಗತ್ಯವಿತ್ತಾ ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ, ಇಲ್ಲಿ ಮಗನ ಜೀವ ತೆಗೆದಿದ್ದು ಸಣ್ಣ ವಿಚಾರ ಮಾತ್ರವಲ್ಲ ಮದ್ಯ ಸೇವನೆ ಅಮಲಿನಲ್ಲಿ, ಕೋಪದ ಕೈಗೆ ಬುದ್ಧಿ ಕೊಟ್ಟು ಮನಸೋ ಇಚ್ಛೆ ಹಲ್ಲೆ ಮಾಡಿದ್ದರಿಂದಲೇ ಇಲ್ಲಿ ಮಗನ ಪ್ರಾಣಪಕ್ಷಿ ಹಾರಿ ಹೋಗಿದೆ.

Tap to resize

Latest Videos

undefined

ಮಗನ ಕೊಲೆ ಕಾರಣವಾಯ್ತು ಮೊಬೈಲ್: ಆರೋಪಿ ರವಿ ಕುಮಾರ್ ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಾ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದನು. ಆದರೆ, ಅಪ್ಪನಿಗೆ ಪ್ರತಿನಿತ್ಯ ಒಂದೊಂದೇ ಬೇಡಿಕೆ ಇಡುತ್ತಿದ್ದ ಮಗನಿಂದ ಅಪ್ಪನಿಗೆ ಬೇಸರ ಉಂಟಾಗುತ್ತಿತ್ತು. ಆದರೆ, ಇತ್ತೀಚೆಗೆ ಅಪ್ಪಾ.. ನನ್ನ ಎಲ್ಲ ಫ್ರೆಂಡ್ಸ್ ಬಳಿ ಮೊಬೈಲ್ ಇದೆ. ನೀನು ನನಗೆ ಹೊಸ ಫೋನ್ ಕೊಡಿಸು ಎಂದಿದ್ದಾನೆ. ನಿನಗೆ ಹೊಸ ಫೋನ್ ಕೊಡಿಸಲು ಆಗದಿದ್ದರೆ, ಮನೆಯಲ್ಲಿ ಒಂದು ಹಳೆಯ ಫೋನ್ ಇದೆಯಲ್ಲ ಅದನ್ನಾದರೂ ರಿಪೇರಿ ಮಾಡಿಸಿ ಕೊಡು ಎಂದು ಕೇಳಿದ್ದಾನೆ. ಅಪ್ಪ ಇದಕ್ಕೆ ಸೊಪ್ಪು ಹಾಕದಿದ್ದಾಗ, ಮೊಬೈಲ್ ರಿಪೇರಿ ಮಾಡಿಸು ಅಂತ ಮಗ ತೇಜಸ್ ಹಠ ಮಾಡಲು ಆರಂಭಿಸಿದ್ದಾನೆ.

ಇದನ್ನೂ ಓದಿ: ಡಬಲ್ ಮರ್ಡರರ್ ಸುರೇಶ್‌ಗೂ, ದುನಿಯಾ ವಿಜಿಯ್‌ಗೂ ಸಂಬಂಧವೇ ಇಲ್ಲ; ಆದ್ರೂ ಬೇಲ್ ಕೊಟ್ಟಿದ್ಯಾಕೆ?

ಕಾರ್ಪೆಂಟರ್ ಕೆಲಸದಿಂದ ತನಗೆ ಬರುವ ಸ್ವಲ್ಪ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿರುವಾಗ ಇನ್ನು ಮಗನ ಇಷ್ಟಗಳನ್ನು ಈಡೇರಿಸಲು ಅಪ್ಪನಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ, ರವಿಕುಮಾರ್ ಕೆಲಸ ಮುಗಿಸಿ ಮನೆಗೆ ಬರುವಾಗ ಕುಡಿದು ಬಂದು ಮಗನನ್ನು ಬೈಯುತ್ತಿದ್ದನು. ನಿನ್ನೆ ರಾತ್ರಿಯೂ ಕೂಡ ಮದ್ಯ ಸೇವಿಸಿ ಬಂದ ರವಿಕುಮಾರ್ ತನ್ನ ಮಗನಿಗೆ ಬೈಯಲು ಆರಂಭಿಸಿದ್ದಾನೆ. ನೀನು ಸರಿಯಾಗಿ ಓದಲ್ಲ, ಶಾಲೆಗೆ ಹೋಗಲ್ಲ, ಕೆಟ್ಟವರ ಸಹವಾಸ ಮಾಡ್ತೀಯಾ ಅಂತಾ ಗಲಾಟೆ ತೆಗೆದಿದ್ದಾರೆ. ಜೊತೆಗೆ, ನೀನು ಕೆಟ್ಟವರ ಸಂಘ ಮಾಡ್ತೀಯಾ, ಮೊಬೈಲ್ ಕೇಳ್ತೀಯಾ ಅಂತ ಮಗನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಆದರೆ, ಹೀಗೆ ಮಗನ ಮೇಲೆ ಹಲ್ಲೆ ಮಾಡುವಾಗ ಆತನನ್ನು ಬ್ಯಾಟ್‌ನಿಂದ ಥಳಿಸಿ ಗೋಡೆಗೆ ತಳ್ಳಿದ್ದಾನೆ. ಆದರೆ, ಅಪ್ರಾಪ್ತ ಮಗ ತೇಜಸ್ ಅಪ್ಪ ದೂಡಿದ ರಭಸಕ್ಕೆ ಗೋಡೆಗೆ ಹೋಗಿ ತಲೆ ಹೊಡೆದುಕೊಂಡು ಅಲ್ಲಿಯೇ ರಕ್ತಸ್ರಾವ ಉಂಟಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ತಕ್ಷಣ ಮನೆಯವರು ಕೂಡಲೇ ಆತನನ್ನು ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗ ತೇಜಸ್ ಸಾವಿಗೀಡಾಗಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ರವಿಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ 11: ಧನರಾಜ್‌ನನ್ನು ಜೈಲಿಗೆ ಕಳಿಸಿದ ಮೋಕ್ಷಿತಾ ವಿರುದ್ಧ ತಿರುಗಿಬಿದ್ದ ವೀಕ್ಷಕರು

click me!