ಗಂಡ ಹಾಕುವ ಕಾಚದ ಮೇಲೂ ತನ್ನದೇ ಫೋಟೋ ಪ್ರಿಂಟ್ ಹಾಕಿಸಿ ಕೊಟ್ಟ ಹೆಂಡತಿ!

By Sathish Kumar KH  |  First Published Nov 16, 2024, 5:16 PM IST

ಕರ್ನಾಟಕ ಮೂಲದ ದಂಪತಿಯ ಪೈಕಿ ಹೆಂಡತಿ ತನ್ನ ಗಂಡನ ಒಳ ಉಡುಪಿನ ಮೇಲೆ ತನ್ನ ಫೋಟೋ ಪ್ರಿಂಟ್ ಮಾಡಿಸಿ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ರೀತಿಯ ಉಡುಗೊರೆಗಳು ಈಗ ಟ್ರೆಂಡಿಂಗ್ ಆಗುತ್ತಿವೆ.


ಬೆಂಗಳೂರು (ನ.16): ಸಾಮಾನ್ಯವಾಗಿ ಪ್ಯಾಂಟ್‌ನೊಳಗೆ ಅಥವಾ ಲುಂಗಿಯೊಳಗೆ ಹಾಕುಕೊಳ್ಳುವ ಚಡ್ಡಿಯನ್ನು ಯಾರಿಗೂ ತೋರಿಸುವುದಿಲ್ಲ. ಅದರ ಬಗ್ಗೆ ಒಳ್ಲೆಯ ಗುಣಮಟ್ಟದ್ದು ಇರಬೇಕು ಎಂದು ನೋಡುತ್ತಾರೇ ಹೊರತು ಅದರ ಬಣ್ಣ, ಅಥವಾ ಯಾವಾವ ಚಿತ್ರವಿದೆ ಎಂದು ನೋಡುವುದಿಲ್ಲ. ಆದರೆ, ಇಲ್ಲೊಬ್ಬ ಹೆಂಡತಿ ತನ್ನ ಗಂಡ ಹಾಕುವ ಕಾಚದ ಮೇಲೆ ತನ್ನ ಫೋಟೋವನ್ನು ಪ್ರಿಂಟ್ ಹಾಕಿಸಿ ಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಗಂಡ ಹೆಂಡತಿ ಸಂಸಾರ ಎನ್ನುವುದೇ ನಾಲ್ಕು ಗೋಡೆಯ ನಡುವೆ ನಡೆಯುವ ಗುಟ್ಟು ಎಂದು ಹೇಳುತ್ತಾರೆ. ಆದರೆ, ಇದೀಗ ಗಂಡ ಹೆಂಡತಿ ಸಂಬಂಧ ಹಾಗೂ ಅವರ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಜಾಗಗಳ ಮಿತಿಯೇ ಇಲ್ಲ. ಎಲ್ಲೆಂದರ ಸಾರ್ವಜನಿಕ ಸ್ಥಳದಲ್ಲಿ ಮುತ್ತಿಡುವುದು, ತಬ್ಬಿಕೊಳ್ಳುವುದು ಹಾಗೂ ಇನ್ನೂ ಕೆಲ ಅಶ್ಲೀಗಳನ್ನು ಸೃಷ್ಟಿ ಮಾಡುವ ಘಟನೆಗಳೂ ನಡೆದಿವೆ. ಇನ್ನು ಕೆಲವರು ಸಮಾಜಕ್ಕೆ ಒಗ್ಗಿಕೊಳ್ಳುವಂತಹ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಆದರೆ, ಇಬ್ಬರ ಮನಸ್ಥಿಯನ್ನೂ ಯಾರೊಬ್ಬರೂ ಇಲ್ಲಿ ತಪ್ಪಿ ಎಂದಾಗಲೀ ಅಥವಾ ಸರಿ ಎಂದಾಗಲೀ ಹೇಳುವುದಿಲ್ಲ. ದಂಪತಿ ಅಥವಾ ಜೋಡಿಯ ದೃಶ್ಯವನ್ನು ನೋಡಿದ ಅಲ್ಲಿದ್ದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಆ ಘಟನೆಯನ್ನು ಸರಿ, ತಪ್ಪು ಎಂದು ನಿರ್ಣಯಿಸಬಹುದು.

Tap to resize

Latest Videos

undefined

ಇಟಲಿಯಲ್ಲಿ ವಾಸವಿರುವ ಕನ್ನಡದ ದಂಪತಿ ಮೋನಾ ಚೌವ್ಹಾಣ್ ಮತ್ತು ಸುಹಾಸ್ ಯಾದವ್ ಅವರು ರಸ್ತೆಯಲ್ಲಿ ನಿಂತು ತಾವು ಧರಿಸುವ ಒಳ ಉಡುಪಿನ ಪ್ರದರ್ಶನ ಮಾಡಿದ್ದಾರೆ. ಇಲ್ಲಿ ಹೆಂಡತಿ ತನ್ನ ಗಂಡನಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಮಾದರಿಯಲ್ಲಿ ಮಂಡಿಯೂರಿ ಗಂಡನಿಗೆ ಒಂದು ಗಿಫ್ಟ್ ಕೊಡುತ್ತಾಳೆ. ಅದನ್ನು ತೆರೆದು ನೋಡುವ ಗಂಡನಿಗೆ ಮೆತ್ತನೆಯ ಒಂದು ಬಟ್ಟೆ ಮಾದರಿಯ ವಸ್ತು ಸಿಗುತ್ತದೆ. ಅದನ್ನು ಪೂರ್ಣವಾಗಿ ಬಿಚ್ಚಿ ನೋಡಿದರೆ, ಆತ ಧರಿಸುವ ಅಳತೆಯ ಒಳ ಉಡುಪು ಆಗಿರುತ್ತದೆ. ಆದರೆ, ಈ ಒಳ ಉಡುಪಿನ ಮೇಲೆ ಗಿಫ್ಟ್ ಕೊಟ್ಟ ಹೆಂಡತಿಯ ಫೊಟೋ ಇರುವುದು ಕಂಡುಬರುತ್ತದೆ. ಆಗ ಗಂಡನಿಗೆ ಸ್ವಲ್ಪ ಕಸಿವಿಸಿಯಾದರೂ ಆತನ ಹೆಂಡತಿ ಮನಸ್ಥಿತಿ ಹಾಗೂ ಆತ್ಮೀಯತೆ ಇರುವುದೇ ಹೀಗೆಂದು ಮನವರಿಕೆ ಮಾಡಿಕೊಂಡು ಅದನ್ನು ಸಂತೋಷವಾಗಿಯೇ ಸ್ವೀಕರಿಸುತ್ತಾನೆ. ನಂತರ ಹೆಂಡತಿಗೊಂದು ತುಟಿಗೆ ತುಟಿ ಸೇರಿಸಿ ಮುತ್ತಿಟ್ಟು, ಹೆಂಡತಿ ಕೊಟ್ಟಿದ್ದು, ಮಹಾನ್ ಉಡುಗೆ ಎಂಬಂತೆ ವಿಡಿಯೋ ಕ್ಯಾಮರಾಕ್ಕೆ ಪೋಸ್ ನೀಡುತ್ತಾನೆ.

ಇದನ್ನೂ ಓದಿ: ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟ ತಾಯಿ, ಕಂದಮ್ಮನ ಜೊತೆ ಅಪರಿಚಿತ ಮಹಿಳೆ ಪರಾರಿ!

ಟ್ರೆಂಡಿಂಗ್ ಆಗಿದೆ ಹುಡಿಗಿ ಫೋಟೋ ಇರುವ ಚೆಡ್ಡಿ: ಕನ್ನಡದ ಚಲನಚಿತ್ರವೊಂದರಲ್ಲಿ ಇದೇ ರೀತಿ ನಟಿಯರ ಫೋಟೋಗಳನ್ನು ಒಳ ಉಡುಪಿನ ಮೇಲೆ ಪ್ರಿಂಟ್ ಮಾಡಿ ಅದನ್ನು ತಮ್ಮ ವ್ಯಾಪಾರಕ್ಕೆ ಬಳಕೆ ಮಾಡಿಕೊಂಡಿದ್ದರು. ಆದರೆ, ಇದನ್ನು ತಮಾಷೆಯಾಗಿ ಮಾಡಿದ್ದು, ಅದನ್ನು ಅನುಕರಣೆ ಮಾಡುವುದಕ್ಕೆ ಜನರು ಒಪ್ಪಿಕೊಳ್ಳುವುದಿಲ್ಲವೆಂದು ಈ ಬ್ಯೂಸಿನೆಸ್ ಐಡಿಯಾವನ್ನು ಯಾರೂ ಬಳಸಲು ಮುಂದಾಗಲಿಲ್ಲ. ಇದೀಗ ಒಳ ಉಡುಪಿನ ಮೇಲೆ ತಮ್ಮ ನೆಚ್ಚಿನವರ ಫೋಟೋ ಮುದ್ರಿ ಕೊಡುವುದು ಒಂದು ಟ್ರೆಂಡಿಂಗ್ ಆಗಿದೆ. ಆರಂಭದಲ್ಲಿ ಮದುವೆಗೆ ಗಿಫ್ಟ್ ಕೊಡುವ ಕೆಲವು ಸ್ನೇಹಿತರು ಹುಡುಗನಿಗೆ ಮದುವೆ ಆಗುತ್ತಿರುವ ಹುಡುಗಿಯ ಫೋಟೋ ಇರುವ ಚೆಡ್ಡಿ ನೀಡಿ ಗೇಲಿ ಮಾಡುವುತ್ತಿದ್ದರು.. ಇದೀಗ ಅದರ ಟ್ರೆಂಡ್ ಬದಲಾಗಿದ್ದು, ಸ್ವತಃ ಹುಡುಗಿಯರು ಅಥವಾ ಹೆಂಡತಿಯರು ತನ್ನ ಗಂಡನಿಗೆ ತಮ್ಮದೇ ಫೋಟೊ ಪ್ರಿಂಟ್ ಮಾಡಿರುವ ಚೆಡ್ಡಿಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಆದರೆ, ಇದನ್ನು ಸಮಾಜ ಇದೀಗ ತಮಾಷೆಯಾಗಿ ಸ್ವೀಕಾರ ಮಾಡುತ್ತಿದ್ದು, ಮುಂದೆ ಯಾವ ರೀತಿಗೆ ಬದಲಾಗುತ್ತದೆಯೋ ಕಾದು ನೋಡಬೇಕಿದೆ.

click me!