World Heard Day 2020: ಪುಟ್ಟ ಹೃದಯದ ಬಗ್ಗೆ ಇರಲಿ ಹೆಚ್ಚು ಕಾಳಜಿ, ಇಲ್ಲಿವೆ ಕೆಲವು ಹೃದಯಸ್ಪರ್ಶಿ ವಿಚಾರಗಳು..!

First Published Sep 29, 2020, 9:31 AM IST

ಕೊರೋನಾ ಕಾಲದಲ್ಲಿ ಅತಿ ಹೆಚ್ಚು ಮಂದಿ ಮರಳಿ ಬಾರದ ಲೋಕಕ್ಕೆ ಹೋಗಿದ್ದಕ್ಕೆ ಕಾರಣ ಹೃದಯಾಘಾತ | ಹೃದಯದ ತೊಂದರೆಯನ್ನು ನಿವಾರಿಸಿಕೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬಹುದು | ಅದಕ್ಕೆಂದೇ 7 ವಿಧಾನಗಳಿವೆ. ಇವೆಲ್ಲವನ್ನೂ ಪಾಲಿಸಿ, ಹೃದಯವನ್ನು ಲಾಲಿಸಿ.

30 ನಿಮಿಷದಿಂದ 60 ನಿಮಿಷ ಎಕ್ಸರ್‌ಸೈಸ್‌:ದಿನಕ್ಕೆ 30 ನಿಮಿಷದಿಂದ 60 ನಿಮಿಷದ ಎಕ್ಸರ್‌ಸೈಸ್‌ ಮಾಡಿದರೆ ಹೃದಯಕ್ಕೆ ಒಳ್ಳೆಯದು. ಎಕ್ಸರ್‌ಸೈಸ್‌ ಮಾಡುವುದರಿಂದ ಅತಿಯಾದ ರಕ್ತದೊತ್ತಡ, ಅತಿ ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅವೆರಡೂ ನಿಯಂತ್ರಣದಲ್ಲಿದ್ದರೆ ಹೃದಯ ಆರೋಗ್ಯವಾಗಿರುತ್ತದೆ.
undefined
ಭಾರಿ ಎಕ್ಸರ್‌ಸೈಸ್‌ ಮಾಡಬೇಕು ಅಂತೇನಿಲ್ಲ. ಸ್ವಲ್ಪ ಹೊತ್ತು ವಾಕಿಂಗ್‌, ಮತ್ತೊಂದಷ್ಟುಸಮಯ ಲಭು ವ್ಯಾಯಾಮಗಳನ್ನು ಮಾಡಬಹುದು. ಎಕ್ಸರ್‌ಸೈಸ್‌ ಮಾಡುತ್ತಾ ಮಾಡುತ್ತಾ ಉಲ್ಲಾಸ, ಉತ್ಸಾಹ ಎರಡೂ ನಿಮ್ಮದಾಗುತ್ತದೆ.
undefined
ಧೂಮಪಾನ ಮಾಡದಿರಿ:ಟೊಬ್ಯಾಕೋದಲ್ಲಿರುವ ಕೆಮಿಕಲ್‌ಗಳನ್ನು ಹೃದಯ ಇಷ್ಟಪಡುವುದಿಲ್ಲ. ಹಾಗಾಗಿಯೇ ಸ್ಮೋಕಿಂಗ್‌ ಒಳ್ಳೆಯದಲ್ಲ. ಧೂಮಪಾನ ಮಾಡುವುದರಿಂದ ರಕ್ತದೊತ್ತಡ ಕೂಡ ಹೆಚ್ಚುತ್ತದೆ ಅಂತ ಡಾಕ್ಟ್ರು ಹೇಳುವುದು ಕೇಳಿರಬಹುದು.
undefined
ಅದರಿಂದಾಗಿ ಹೃದಯಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ. ಯಾವಾಗ ಧೂಮಪಾನ ನಿಲ್ಲಿಸುತ್ತೀರೋ ಆವಾಗ ಒತ್ತಡವೂ ನಿಲ್ಲುತ್ತದೆ.
undefined
ಹೆಲ್ದೀ ಡಯಟ್‌ ಮರೆಯದಿರಿ:ಉತ್ತಮವಾದ ಆಹಾರ ಸೇವಿಸುವುದು ಕೂಡ ಮುಖ್ಯ. ಊಟದಲ್ಲಿ ಹೇರಳವಾದ ಹಣ್ಣು, ತರಕಾರಿಗಳು ಸೇರಿರಬೇಕು. ಎಣ್ಣೆ ಪದಾರ್ಥಗಳನ್ನು ವರ್ಜಿಸಬೇಕು. ಆಲಿವ್‌ ಆಯಿಲ್‌ ಆಯಿಲ್‌ ಬಳಸಿದರೆ ಉತ್ತಮ.
undefined
ಸೊಪ್ಪು, ಧಾನ್ಯ ಜಾಸ್ತಿಯೇ ಸೇವಿಸಿ. ಉಪ್ಪು, ಸಕ್ಕರೆ ಪದಾರ್ಥಗಳನ್ನು ಕಡಿಮೆ ತೆಗೆದುಕೊಳ್ಳಿ. ಆಲ್ಕೋಹಾಲ್‌ನಿಂದ ಅಂತರ ಕಾಪಾಡಿಕೊಳ್ಳುವುದು ಉತ್ತಮ. ಅತಿಯಾದ ಫಾಸ್ಟ್‌ಫುಡ್‌ ಬಳಕೆ ಬೇಡ.
undefined
ತೂಕ ಹೆಚ್ಚಾಗದಿರಲಿ :ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾದದ್ದು. ಎಷ್ಟುತೂಕ ಇದ್ದರೆ ಪರವಾಗಿಲ್ಲ ಎಂದು ತೂಕದ ಮಂದಿ ಕೇಳಬಹುದು. ಅದಕ್ಕೊಂದು ವಿಧಾನ ಇದೆ. ಪುರುಷರಾದರೆ ಸೊಂಟದ ಸುತ್ತಳತೆ 40 ಇಂಚಿಗಿಂತ ಜಾಸ್ತಿ ಹೋಗಬಾರದು. ಮಹಿಳೆಯರಿಗೆ 35 ಇಂಚಿಗಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು.
undefined
ಸಣ್ಣಗಿದ್ದರೆ ಆರೋಗ್ಯ ಭಾಗ್ಯ ಸಿಗುವುದರಿಂದ ಅಗತ್ಯಕ್ಕಿಂತ ಹೆಚ್ಚು ತೂಕ ಹೊಂದದಿರುವುದೇ ಒಳ್ಳೆಯದು. ಹಾಗಾಗಿ ನಿಮ್ಮ ಗಮನ ನಿಮ್ಮ ತೂಕದ ಮೇಲೂ ಇರಲಿ.
undefined
ಒಳ್ಳೆಯ ನಿದ್ದೆ ಜೀವಕೆ ಸಂತೋಷ:ಒಳ್ಳೆಯ ನಿದ್ದೆ ಕೂಡ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಲ್ಲದು. ನಿದ್ದೆ ಕಡಿಮೆಯಾಗಿ ದಿನವಿಡೀ ಆಕಳಿಸುತ್ತಿದ್ದರೆ ಜೀವಕ್ಕೆ ನೆಮ್ಮದಿ ಇರುವುದಿಲ್ಲ. ನಿದ್ದೆ ಕಡಿಮೆಯಾದಷ್ಟುಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ.
undefined
ಒಂದೇ ಸಮಯಕ್ಕೆ ನಿದ್ದೆಗೆ ಜಾರಿ, ಒಂದೇ ಟೈಮಲ್ಲಿ ನಿದ್ದೆಯಿಂದ ಏಳುವುದು ಕೂಡ ಮುಖ್ಯವಾದದ್ದು. ನಿದ್ದೆ ಮಾಡುವ ಜಾಗವನ್ನು ಕತ್ತಲಾಗಿರುವಂತೆ ನೋಡಿಕೊಳ್ಳು. ನಿಮ್ಮ ಕಣ್ಣು ಮತ್ತು ಜೀವ ತಂಪಾಗಲಿ.
undefined
ಸ್ಟ್ರೆಸ್‌ ಇರದಿರಲಿ ಈ ಬಾಳಲಿ:ಸ್ಟ್ರೆಸ್‌ಗೆನಾನಾ ಕಾರಣಗಳು. ಕೆಲಸದಿಂದ ಹಿಡಿದು ಅವರವರ ಹವ್ಯಾಸಗಳವರೆಗೆ. ಆದರೆ ಲೈಫು ತುಂಬಾ ಶಾರ್ಟು. ಇರುವಷ್ಟುದಿನ ಏನೇ ಇದ್ದರೂ ಆರಾಮಾಗಿ ಎದುರಿಸುವ ಧೈರ್ಯ, ಛಲ ಇರಬೇಕು.
undefined
ಹಾಗಿದ್ದಾಗ ಸ್ಟ್ರೆಸ್ ಇರುವುದಿಲ್ಲ. ಕೂಲಾಗಿ ಎಲ್ಲವನ್ನು ನಿಭಾಯಿಸುವ ಕಲೆ ಕಲಿತವರಿಗೆ ಒತ್ತಡ ಇರುವುದಿಲ್ಲ. ಆ ಕಲೆ ಕಲಿಯುವುದೇ ಸವಾಲು. ಆ ಸವಾಲು ಗೆದ್ದವರು ಸುಖವಾಗಿ ನೂರ್ಕಾಲ ಬಾಳುತ್ತಾರೆ.
undefined
click me!