20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆ ಮೆದುಳಿನ ಆರೋಗ್ಯಕ್ಕೆ ಶಿಫಾರಸು ಮಾಡೋ ಸೂಪರ್‌ಫುಡ್ ಇದು!

By Suvarna News  |  First Published Apr 27, 2024, 6:37 PM IST

ಹಾರ್ವರ್ಡ್ ತಜ್ಞರಾಗಿ 20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆಯೊಬ್ಬರು, ನಿಮ್ಮ ಮೆದುಳನ್ನು ಸದಾ ಚುರುಕಾಗಿಡುವ ಸೂಪರ್ ಫುಡ್ ಯಾವುದು ಎಂಬ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಅದು ಯಾವುದು ಹಾಗಿದ್ದರೆ?


ಉಮಾ ನಾಯ್ಡು ಅವರು 20 ವರ್ಷಗಳ ಕಾಲ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ತರಬೇತಿ ಪಡೆದ ಮನೋವೈದ್ಯೆ ಮತ್ತು ಪೌಷ್ಟಿಕತಜ್ಞೆ. ಅವರು 'ಮೆದುಳಿನ ಆಹಾರಗಳು' ಮತ್ತು ನಮ್ಮ ಆಹಾರಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಆರೋಗ್ಯಕರ ಮೆದುಳನ್ನು ಜೀವನ ಮೂರ್ತಿ ಕಾಪಾಡಿಕೊಳ್ಳೋಕೆ ಅಗತ್ಯವಿರುವ ನಂ. 1 ಪೋಷಕಾಂಶ ಯಾವುದು ಎಂಬ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ.

ವಯಸ್ಸಾಗುತ್ತಾ ಹೋದ ಹಾಗೆ ನಮ್ಮ ನೆನಪು ಹಾಗೂ ಅರಿವಿನಲ್ಲಿ ಮಸುಕು ಮಸುಕು ಕವಿಯುತ್ತದೆ. ಈ ಅರಿವಿನ ನಷ್ಟವನ್ನು ಕೆಲವು ಪೋಷಕಾಂಶಗಳು ಹೇಗೆ ತಡೆಯಬಹುದು ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಮೆದುಳಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಮೂರು ವಿಧದ "ನ್ಯೂರೋಪ್ರೊಟೆಕ್ಟಿವ್ ನ್ಯೂಟ್ರಿಯೆಂಟ್ಸ್"ಗಳಿವೆ. ಅವುಗಳೆಂದರೆ: ಆಂಟಿ ಆಕ್ಸಿಡೆಂಟ್‌ಗಳು, B ವಿಟಮಿನ್‌ಗಳು ಮತ್ತು ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳು (PUFAs).

Latest Videos

undefined

PUFA ಅಥವಾ ಫ್ಯಾಟಿ ಆಸಿಡ್‌ಗಳಲ್ಲಿ ಎರಡು ಮುಖ್ಯ ವಿಧಗಳಿವೆ: ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು. ಡಾ. ಉಮಾ ನಾಯ್ಡು ಪ್ರಕಾರ, ಒಮೆಗಾ-3 ಕೊಬ್ಬಿನಾಮ್ಲಗಳು ಆರೋಗ್ಯಕರ ಮೆದುಳಿಗೆ ನಂ. 1 ಪೋಷಕಾಂಶವಾಗಿದೆ. ಇದನ್ನು ಪಡೆಯುವುದು ಎಲ್ಲಿಂದ?

ಡಾಕ್ಟರ್ ನಿಮಗೆ ಇವುಗಳ ಸಪ್ಲಿಮೆಂಟ್‌ಗಳನ್ನು ಕೊಡಬಹುದು. ಆ ಮೂಲಕ ಈ ಪೋಷಕಾಂಶಗಳನ್ನು ಒದಗಿಸಬಹುದು. ಆದರೆ ದೇಹಕ್ಕೆ ಇದರ ಉತ್ತಮ ಪ್ರಯೋಜನ ಆಗಬೇಕಿದ್ದರೆ ಅವುಗಳನ್ನು ನೈಜ ಆಹಾರಗಳಿಂದಲೇ ಪಡೆಯಬೇಕು ಅನ್ನುತ್ತಾರೆ ಹಾರ್ವರ್ಡ್ ತರಬೇತಿ ಪಡೆದ ಮನೋವೈದ್ಯರು. ಅದರ ಪ್ರಕಾರ, ಒಮೆಗಾ-3ಗಳು ಆಂಚೊವಿಗಳು, ಸಾರ್ಡೀನ್‌ಗಳು ಮತ್ತು ಸಾಲ್ಮನ್‌ಗಳಂತಹ  ಕೊಬ್ಬಿನ ಮೀನುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಯಸ್ಕರು ದಿನಕ್ಕೆ ಕನಿಷ್ಠ 250-500 ಮಿಲಿಗ್ರಾಂಗಳಷ್ಟು ಸಂಯೋಜಿತ EPA ಮತ್ತು DHA (ಎರಡು ರೀತಿಯ ಒಮೆಗಾ-3 ಕೊಬ್ಬಿನಾಮ್ಲಗಳು) ಸೇವಿಸಬೇಕು. ಸಾಲ್ಮನ್ ನಿರ್ದಿಷ್ಟವಾಗಿ ಇಪಿಎ ಮತ್ತು ಡಿಎಚ್‌ಎ ಮಟ್ಟವನ್ನು ಹೊಂದಿದ್ದು ಅದು ನಮ್ಮ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ನಾಯ್ಡೂ ಹೇಳುತ್ತಾರೆ.

ಮೀನು ಸೇವಿಸುವುದಿಲ್ಲವೇ? 
ನೀವು ಮೀನು ಸೇವಿಸುವವರಲ್ಲವೇ? ಶುದ್ಧ ಸಸ್ಯಾಹಾರಿಯೇ? ಅನೇಕ ಜನರು ವಿವಿಧ ಕಾರಣಗಳಿಗಾಗಿ ಮೀನಿನಾಹಾರವನ್ನು ತಿನ್ನುವುದಿಲ್ಲ. ಸ್ವತಃ ಉಮಾ ನಾಯ್ಡು ಅವರು ಸಹ ಸಸ್ಯಾಹಾರಿಯಾಗಿ ಬೆಳೆದವರು. ಇಂಥವರು ತಮ್ಮ ದೈನಂದಿನ ಅಗತ್ಯ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸಸ್ಯ-ಆಧಾರಿತ ಮೂಲಗಳಿಂದಲೂ ಪಡೆಯಬಹುದು. ಒಮೆಗಾ-3 ಕೊಬ್ಬಿನಾಮ್ಲಗಳ ಕೆಲವು ಸಸ್ಯಾಹಾರಿ ಮೂಲಗಳು ಇಲ್ಲಿವೆ:

ಹಸ್ತಮೈಥುನ, ಹದಿ ಹರೆಯದ ಹೆಣ್ಣು ಮಾಡಿಕೊಂಡರೇನು ತಪ್ಪು?

ಚಿಯಾ ಬೀಜಗಳು
ಎಳ್ಳು
ವಾಲ್ನಟ್ಸ್
ಅಗಸೆ ಬೀಜಗಳು

ಸುಮಾರು ಒಂದು ಔನ್ಸ್ ಚಿಯಾ ಬೀಜಗಳು (ಸುಮಾರು 28 ಗ್ರಾಂ) ಒಮೆಗಾ -3 ಕೊಬ್ಬಿನಾಮ್ಲಗಳ ಅಗತ್ಯ ಅಂಶವನ್ನು ನಿಮ್ಮ ದೇಹಕ್ಕೆ ಸೇರಿಸುತ್ತವೆ. ಇದು ದೈನಂದಿನ ಶಿಫಾರಸು ಸೇವನೆಗಿಂತ ಹೆಚ್ಚಿನದನ್ನು ಒದಗಿಸುತ್ತದೆ ಎಂದು ನಾಯ್ಡು ಹೇಳುತ್ತಾರೆ.

ವಾಸ್ತವವಾಗಿ, ಚಿಯಾ ಬೀಜದ ಪುಡಿಂಗ್ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಅವರ ಐದು ಉಪಹಾರ ಆಯ್ಕೆಗಳಲ್ಲಿ ಒಂದು. "ಇದು ಟನ್‌ಗಟ್ಟಲೆ ಫೈಬರ್ ಅನ್ನು ಹೊಂದಿರುತ್ತದೆ, ಇದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಕಡಿಮೆ ಉರಿಯೂತದ ಸೂಕ್ಷ್ಮಜೀವಿ, ಆಪ್ಟಿಮೈಸ್ಡ್ ಗಟ್-ಮೆದುಳಿನ ಸಂವಹನ ಮತ್ತು ಮನಸ್ಥಿತಿ-ಪೋಷಕ ನರಪ್ರೇಕ್ಷಕಗಳ ಉತ್ಪಾದನೆಗೆ ಕಾರಣವಾಗುತ್ತದೆ" ಎಂದು ಪೌಷ್ಟಿಕತಜ್ಞೆ ಹೇಳುತ್ತಾರೆ.

ಈಗ ಗೊತ್ತಾಯಿತಲ್ಲ? ಮೆದುಳಿನ ಆರೋಗ್ಯದ ಸೂಪರ್‌ಫುಡ್ ಯಾವುದು ಅಂತ. ಇನ್ನು ನೀವು ಪ್ರತಿದಿನ ಇವುಗಳನ್ನು ಸೇರಿಸಿ ಮೆದುಳನ್ನು ಚುರುಕಾಗಿಟ್ಟುಕೊಳ್ಳಲು ಅಡ್ಡಿಯಿಲ್ಲ.

ವೈಟ್‌ ಲಾಸ್ ಮಾಡ್ಕೊಳ್ಳೋಕೆ ದಿನಕ್ಕೆ ಎಷ್ಟು ಲೋಟ ನೀರು ಕುಡೀಬೇಕು?
 

click me!