Prajwal Revanna: ಮಗನ ಪೆನ್‌ಡ್ರೈವ್‌ ಬಗ್ಗೆ ಮೌನ ಮುರಿದ ರೇವಣ್ಣ:  ಅಶ್ಲೀಲ ವಿಡಿಯೋ ಬಗ್ಗೆ ಹೇಳಿದ್ದೇನು..?

Prajwal Revanna: ಮಗನ ಪೆನ್‌ಡ್ರೈವ್‌ ಬಗ್ಗೆ ಮೌನ ಮುರಿದ ರೇವಣ್ಣ: ಅಶ್ಲೀಲ ವಿಡಿಯೋ ಬಗ್ಗೆ ಹೇಳಿದ್ದೇನು..?

Published : Apr 29, 2024, 04:33 PM IST

ಕಾನೂನು ರೀತಿಯಲ್ಲಿ  ಕ್ರಮ ತೆಗೆದುಕೊಳ್ಳಲಿ. ದೇವೇಗೌಡರ ಜತೆ ಪ್ರಜ್ವಲ್ ವಿಡಿಯೋ  ಚರ್ಚಿಸಿಲ್ಲ ಎಂದು ಹೆಚ್‌.ಡಿ.ರೇವಣ್ಣ ಹೇಳಿದ್ದಾರೆ.
 

ಮಗನ ಅಶ್ಲೀಲ ವಿಡಿಯೋ ಬಗ್ಗೆ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ಅವರದೇ ಸರ್ಕಾರ ಇದೆ ತನಿಖೆ ನಡೆಸಲಿ. ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ ಎಂದು ಶಾಸಕ ರೇವಣ್ಣ(HD Revanna) ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ(Prajwal Revanna) ವಿದೇಶಕ್ಕೆ ತೆರಳಿದ ವಿಚಾರವಾಗಿ ಮಾತನಾಡಿದ ಅವರು, ಎಫ್ಐಆರ್  ಹಾಕ್ತಾರೆ , ಎಸ್ಐಟಿ ಮಾಡ್ತಾರೆ ಅಂತಾ ಗೊತ್ತಿತ್ತಾ?. ಪ್ರಜ್ವಲ್ ವಿದೇಶಕ್ಕೆ ಹೋಗಬೇಕಿತ್ತು ಹೋಗಿದ್ದಾನೆ. ಎಸ್ಐಟಿ(SIT)  ಕರೆದರೆ ಬರ್ತಾನೆ . ಕಾನೂನು ರೀತಿಯಲ್ಲಿ  ಕ್ರಮ ತೆಗೆದುಕೊಳ್ಳಲಿ. ದೇವೇಗೌಡರ(Devegowda) ಜತೆ ಪ್ರಜ್ವಲ್ ವಿಡಿಯೋ  ಚರ್ಚಿಸಿಲ್ಲ. ಕಾನೂನು ರೀತಿ ಪ್ರಕರಣವನ್ನು ಎದುರಿಸುತ್ತೇವೆ. 4-5 ವರ್ಷಗಳ ಹಳೆಯ ಪ್ರಕರಣ ತಂದು ಕೇಸ್ ಹಾಕಿದ್ದಾರೆ. ಅಶ್ಲೀಲ ವಿಡಿಯೋ ಸೇರಿ ಯಾವುದೇ ವಿಷಯಕ್ಕೂ ಮಾತಾಡಲ್ಲ. ಎಸ್ಐಟಿ ತನಿಖೆಗೆ ತೊಂದರೆ ಆಗಬಾರರೆಂದು ಮಾತಾಡಲ್ಲ. ನನ್ನ ವಿರುದ್ಧ  ಎಫ್ಐಆರ್ ರಾಜಕೀಯ ಪ್ರೇರಿತ ಎಂದು ರೇವಣ್ಣ ಹೇಳಿದ್ದಾರೆ. ಜೆಡಿಎಸ್‌ನಿಂದ(JDS)ರೇವಣ್ಣ , ಪ್ರಜ್ವಲ್ ಉಚ್ಛಾಟನೆ ಒತ್ತಡ ಕೇಳಿ ಬಂದ ಬಗ್ಗೆ ಮಾತನಾಡಿದ ಅವರು, ನಮ್ಮ ವಿರುದ್ಧ ಕ್ರಮ  ಪಕ್ಷದ ನಿರ್ಧಾರ ಎಂದ ರೇವಣ್ಣ. ದೇವೇಗೌಡರ ಜತೆ ಪ್ರಜ್ವಲ್ ವಿಡಿಯೋ  ಚರ್ಚಿಸಿಲ್ಲ. ಕಾನೂನು ಕ್ರಮ ಏನ್ ಆಗುತ್ತೆ ಆಗಲಿ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  'ಪ್ರಜ್ವಲ್ ಪ್ರಕರಣದಲ್ಲಿ ಕುಟುಂಬವನ್ನು ಏಕೆ ಎಳೆಯುತ್ತೀರಾ? ದೇವೇಗೌಡರು,ನನ್ನ ಹೆಸರನ್ನು ಏಕೆ ಸೇರಿಸುತ್ತೀರಾ?'

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?