'ಪ್ರಜ್ವಲ್ ಪ್ರಕರಣದಲ್ಲಿ ಕುಟುಂಬವನ್ನು ಏಕೆ ಎಳೆಯುತ್ತೀರಾ? ದೇವೇಗೌಡರು,ನನ್ನ ಹೆಸರನ್ನು ಏಕೆ ಸೇರಿಸುತ್ತೀರಾ?'

Apr 29, 2024, 12:34 PM IST

ಜೆಡಿಎಸ್‌ನಿಂದ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅಮಾನತು(Suspend) ಮಾಡುವ ಸುಳಿವನ್ನು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಜ್ವಲ್ ವಿರುದ್ಧ ಪಕ್ಷ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇ ಬೇಕು. ಎಸ್ಐಟಿ(SIT)  ರಚನೆಯಾಗಿದೆ  ತನಿಖೆ ಮೂಲಕ ಸತ್ಯಾಂಶ ಹೊರ ಬರಲಿ. ಎಸ್ಐಟಿ  ತಪ್ಪು ಸಾಬೀತು ಮಾಡಿದ್ರೆ ಶಿಕ್ಷೆ ಅನುಭವಿಸಲೇ ಬೇಕು. ಅಶ್ಲೀಲ ವಿಡಿಯೋ ಪ್ರಕರಣ ವೈಯಕ್ತಿಯವಾಗಿ ವ್ಯಕ್ತಿಯ ಹಿನ್ನೆಲೆಯಲ್ಲಿ ನಡೆದಿದೆ. ಪ್ರಜ್ವಲ್ ಪ್ರಕರಣದಲ್ಲಿ ಕುಟುಂಬವನ್ನು ಏಕೆ ಎಳೆಯುತ್ತೀರಾ..? ದೇವೇಗೌಡರು , ನನ್ನ ಹೆಸರನ್ನು ಏಕೆ ಇದರಲ್ಲಿ ಸೇರಿಸುತ್ತೀರಾ..? ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ. ದೇವೇಗೌಡರು(HD Devegowda) ನಾನು ಮಹಿಳೆಯರ ವಿಚಾರದಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಪ್ರಜ್ವಲ್ ವಿಚಾರ ಈಗ ತಿಳಿದಿದೆ , ಮೊದಲೇ ತಿಳಿದಿದ್ದರೆ ಕ್ರಮ ತೆಗೆದುಕೊಳ್ಳುತ್ತಿದ್ದೆ. ಅಶ್ಲೀಲ ವಿಡಿಯೋ ಪ್ರಕರಣ  ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮುಜುಗರ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Prajwal Revanna Case : ಜೆಡಿಎಸ್‌ನಿಂದ ಅಮಾನತು ಆಗ್ತಾರಾ ಪ್ರಜ್ವಲ್‌ ರೇವಣ್ಣ? ದೊಡ್ಡಗೌಡರಿಗೆ ಪತ್ರ ಬರೆದ ಶಾಸಕ