ನೀತೂ ಮನದಾಳದ ಮಾತು, ಏನ್ ಹೇಳಿದ್ರು ಅನ್ನೋದಕ್ಕಿಂತ ಯಾಕ್ ಹೇಳಿದ್ರು ಅಂತ ಯೋಚಿಸಿ!

Published : Apr 29, 2024, 05:51 PM ISTUpdated : Apr 29, 2024, 05:57 PM IST
ನೀತೂ ಮನದಾಳದ ಮಾತು, ಏನ್ ಹೇಳಿದ್ರು ಅನ್ನೋದಕ್ಕಿಂತ ಯಾಕ್ ಹೇಳಿದ್ರು ಅಂತ ಯೋಚಿಸಿ!

ಸಾರಾಂಶ

ನೀತೂ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಯಾಕೆ ದೂರ ಉಳಿದರು, ಯಾಕೆ ದೂರ ಉಳಿಯುವಂತಾಯ್ತು, ಅವರು ತುಂಬಾ ದಪ್ಪವಾಗಿದ್ದು ಯಾಕೆ? ಈ ಎಲ್ಲ ಪ್ರಶ್ನಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ಹೇಳುತ್ತಾರೆ. ಆದರೆ..

ಸ್ಯಾಂಡಲ್‌ವುಡ್‌ನಲ್ಲಿ ಅದೊಂದು ಕಾಲದಲ್ಲಿ ಮಿಂಚಿ ಬಳಿಕ ನಿಧಾನಕ್ಕೆ ಮರೆಯಾದ ನಟಿ ನೀತೂ, ಅಂದರೆ ನೀತೂ ಶೆಟ್ಟಿ (Neethu Shetty)ಮೂಲತಃ ಮಂಗಳೂರಿನವರು. ಕನ್ನಡದಲ್ಲಿ ಗಾಳಿಪಟ, ಫೋಟೋಗ್ರಾಫರ್, ಜೋಕ್‌ ಫಾಲ್ಸ್, ಪೂಜಾರಿ, ಮೊಂಬತ್ತಿ ಹಾಗೂ 1988 ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದವರು ಈ ನಟಿ ನೀತೂ. ಯೋಜರಾಜ್ ಭಟ್ ನಿರ್ದೇಶನದ 'ಗಾಳಿಪಟ' ಚಿತ್ರದಲ್ಲಂತೂ ದಿಗಂತ್ ಎದುರು ಬಜಾರಿ ಪಾತ್ರದಲ್ಲಿ ಅಕ್ಷರಶಃ ಮಿಂಚಿದ್ರು ನೀತೂ. ತಮ್ಮದೇ ಹೆಸರಿನ ಕೊನೆಯ ಅಕ್ಷರವನ್ನು ಅವರು ಬಳಸುವ ಸಂಭಾಷಣೆಯಲ್ಲಿ 'ಥೂ' ಎಂದು ಬಳಸಿ ಜನರಿಗೆ ಸಖತ್ ಮನರಂಜನೆ ನೀಡಿದ್ದರು ನೀತೂ. 

ಆದರೆ, ಇಂದು ಅದೇ ನೀತೂ (Neethu) ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಯಾಕೆ ದೂರ ಉಳಿದರು, ಯಾಕೆ ದೂರ ಉಳಿಯುವಂತಾಯ್ತು, ಅವರು ತುಂಬಾ ದಪ್ಪವಾಗಿದ್ದು ಯಾಕೆ? ಈ ಎಲ್ಲ ಪ್ರಶ್ನಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ಹೇಳುತ್ತಾರೆ. ಆದರೆ, ಯಾವುದೋ ಅನಾರೋಗ್ಯಕ್ಕೆ ತೆಗೆದುಕೊಂಡ ಮೆಡಿಸಿನ್ ಅಡ್ಡ ಪರಿಣಾಮ ಬೀರಿ ಅವರು ದಪ್ಪಗಾದರು ಎನ್ನಲಾಗುತ್ತದೆ. ಸ್ವಲ್ಪ ದಪ್ಪಗಾಗಿದ್ದಕ್ಕೋ ಅಥವಾ ಬೇರೆಯದೇ ಕಾರಣಕ್ಕೋ ನೀತೂ ಡಿಫ್ರೆಶನ್‌ಗೆ ಜಾರಿದ್ದರು ಎನ್ನುತ್ತಾರೆ ಕೆಲವರು. ಆದರೆ ಸ್ವತಃ ನಟಿ ನೀತೂ ಈ ಬಗ್ಗೆ ಎನು ಹೇಳಿದ್ದಾರೆ ನೋಡಿ..

ಅಭಿಮಾನಿ ಪತ್ರಕ್ಕೆ ಸ್ವತಃ ಕೈ ಬರಹದಲ್ಲೇ ಏನಂತ ಉತ್ತರ ಬರೆದಿದ್ದರು ನಟ ವಿಷ್ಣುವರ್ಧನ್?

ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟಿ ನೀತೂ 'ಕೆಲವೊಂದು ಸಲ ಅನ್‌ಪಾಚ್ರ್ಯುನೇಟ್ ನ್ಯೂಸ್ ನೋಡ್ತೀವಿ ನಾವು, ಖಿನ್ನತೆಯಿಂದ ಅವ್ರು ಜೀವ್ನ ಕಳ್ಕೊಂಡ್ರು ಅಂತ.. ಆಗ ಕೆಲವೊಬ್ರು ಅದಕ್ಕೆ ಬರೀತಾರೆ.. ಓಹ್, ಇಂಥ ಚಿಕ್ಕಚಿಕ್ಕ ವಿಷ್ಯಗಳಿಗೆಲ್ಲ ಜೀವ ಕಳ್ಕೊಳಾಂಗಿದ್ರೆ ನಾವ್ ಯಾವತ್ತೋ ಸಾಯ್ಬೇಕಿತ್ತು ಅಂತ ಬರೀತಾರೆ. ಆದ್ರೆ, ರಿಯಾಲಿಟಿ? ಅವ್ರು ಅಬರೆಯೋದೇನೋ ಫೈನ್, ನಿನಗೆಷ್ಟು ಸಪೋರ್ಟ್ ಇತ್ತು, ನಿನಗೇನಿತ್ತು ಜೀವದಲ್ಲಿ ಚೈತನ್ಯ, ಅದು ಎಲ್ಲರಲ್ಲೂ ಇರ್ಬೇಕು ಅಂತ ಇಲ್ಲ. 

ಡಾರ್ಲಿಂಗ್ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಪಕ್ಕಾ ಉತ್ತರ!

ಒಂದಿನ ನನ್ ತಂಗಿ ವಿಂಟರ್‌ ಬ್ರೇಕ್‌ನಲ್ಲಿ ಇಲ್ಲಿಗ್ ಬಂದ್ಳು.. ನಾನ್ ಬಂದಾಗ್ಲಿಂದ ನೋಡ್ತಾ ಇದೀನಿ, ಯೂ ಆರ್ ಓನ್ಲಿ ಸಿಟಿಂಗ್ ನೀತೂ.. ನೀ ಯೆಲ್ಲೂ ಹೋಗ್ತಾ ಇಲ್ಲ, ಏನೂ ಮಾಡ್ತಾ ಇಲ್ಲ, ಬರೀ ಸೋಫಾ ಮೇಲೆ ಕೂತ್ಕೊಂಡೇ ಇದೀಯ.. ವಾಟ್ ಈಸ್ ದಿಸ್, ಗೆಟ್ ಅಪ್ ಅಂಡ್ ಎಕ್ಸರಿಸೈಜ್' ಅಂತ ಅದ್ಳು. 

ಬೆಂಗಳೂರಲ್ಲಿ ಕಿಟ್ಟಿ ಪಾರ್ಟೀಲಿ ಮಡದಿ ಬ್ಯುಸಿ ಇದ್ರೆ, ನೀರ್ನಳ್ಳಿ ರಾಮಕೃಷ್ಣ ಹಳ್ಳಿಗೆ ಹೋಗಿದ್ಯಾಕೆ?

'ಇಲ್ಲ, ನಂಗೂ ಮಾಡ್ಬೇಕಂತ ಇದೆ. ಆದ್ರೆ ಐ ಆಮ್ ನಾಟ್ ಏಬಲ್ ಟು ಡೂ ಇಟ್.. ನಂಗೆ ಆಗ್ತಾನೇ ಇಲ್ಲ. ಅದು ಆಗ್ತಾ ಇಲ್ಲ ಅನ್ನೋದು ಇದ್ಯಲ್ಲ, ಅದು ನಿಜವಾಗಿಯೂ ಯೋಚ್ನೆ ಮಾಡ್ಲೇಬೇಕಾಗಿದ್ದು. ಅದ್ಯಾರೇ ಅದೆಷ್ಟೇ ದೊಡ್ಡ ಮೋಟಿವೇಶನಲ್ ಸ್ಪೀಕರ್ ನಿಮ್ಮ ಮುಂದೆ ಬಂದು ನಿಂತ್ಕೊಂಡು 'ಗೆಟ್ ಅಪ್, ಡು ಇಟ್, ಕಮಾನ್, ಗೆಟ್‌ ಅಪ್ ಅಂಡ್ ಡೂ ಇಟ್ ಅಂತ ಅದೆಷ್ಟೇ ಹೇಳಿದ್ರು ಆಗಲ್ಲ, ಮಾಡೋದಕ್ಕೆ ಆಗಲ್ಲ.. ಇಟ್ಸ್ ನಾಟ್ ಪಾಸಿಬಲ್' ಅಂದಿದ್ದಾರೆ ನಟಿ ನೀತೂ ಶೆಟ್ಟಿ.

ಮಹಿಳೆಯರು ಯಾವುದೋ ಗ್ರಹದ ಜೀವಿಗಳು ಎಂದುಕೊಂಡಿದ್ದೆ; ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ!

ಒಟ್ಟಿನಲ್ಲಿ, 'ಕಾಲಾಯ ತಸ್ಮೈ ನಮಃ' ಎಂಬಂತೆ, ಒಬ್ಬೊಬ್ಬರದೂ ಒಂದೊಂದು ಕಾಲದಲ್ಲಿ ವಿಭಿನ್ನ ಸ್ಟೋರಿ ಎನ್ನಬಹುದು. ಹಲವರು ಚಿತ್ರರಂಗದಲ್ಲಿ ಅಥವಾ ಬೇರೆ ಕ್ಷೇತ್ರದಲ್ಲಿ ಒಮ್ಮೆ ಮಿಂಚಿ ಬಳಿಕ ಮರೆಯಾಗುತ್ತಾರೆ. ಆ ಸಾಲಿಗೆ ನಟಿ ನೀತೂ ಸೇರಿದ್ದಾರೆ ಎನ್ನಬಹುದು. ಆದರೆ, ಅವರು ಯಾವತ್ತೂ ಕೂಡ ತಮ್ಮ ಪಾತ್ರದ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಇರುತ್ತಾರೆ ಎಂಬುದಂತೂ ನಿತ್ಯಸತ್ಯ. 

ರಜನಿಕಾಂತ್ ಸೇಡು ತೀರಿಸಿಕೊಂಡಿದ್ದು ಕೂಡ ಸಖತ್ ಸ್ಟೈಲಿಶ್ ಆಗಿಯೇ ಅಂದ್ರೆ ನಂಬ್ಲೇಬೇಕು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ