ಚೀನಾದಲ್ಲಿ ರೋಬೋಗಳು ​ ಏನೆಲ್ಲಾ ಮಾಡ್ತಿವೆ ಗೊತ್ತಾ? ಇಂಟರೆಸ್ಟಿಂಗ್​ ಮಾಹಿತಿ ಹೇಳಿದ ಡಾ.ಬ್ರೋ

Published : Apr 29, 2024, 07:30 PM ISTUpdated : Apr 29, 2024, 07:32 PM IST
ಚೀನಾದಲ್ಲಿ ರೋಬೋಗಳು ​ ಏನೆಲ್ಲಾ ಮಾಡ್ತಿವೆ ಗೊತ್ತಾ? ಇಂಟರೆಸ್ಟಿಂಗ್​ ಮಾಹಿತಿ ಹೇಳಿದ ಡಾ.ಬ್ರೋ

ಸಾರಾಂಶ

ಚೀನಾದಲ್ಲಿ ರೋಬೋಟಿಕ್​ ಹಾವಳಿ ಹೆಚ್ಚಾಗಿದೆ ಎನ್ನುತ್ತಲೇ ಇದರ ವಿಶೇಷ ಮಾಹಿತಿಯನ್ನು ಶೇರ್​ ಮಾಡಿದ್ದಾರೆ ಡಾ.ಬ್ರೋ.   

ಈಗ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ರೋಬೋಟ್​ ಕಿತ್ತುಕೊಳ್ಳುತ್ತಿದೆ. ಐದಾರು ಮನುಷ್ಯರು ಮಾಡುವ ಕೆಲಸವನ್ನು ಒಂದು ರೋಬೋಟ್​ ಮಾಡಿ, ಹಲವರ ಉದ್ಯೋಗಗಳನ್ನು ಕಸಿದುಕೊಂಡದ್ದೂ ಆಗಿದೆ. ಇನ್ನು ಚೀನಾದಲ್ಲಂತೂ ಕೇಳುವುದೇ ಬೇಡ. ಈ ದೇಶ ವೇಗವಾಗಿ ಯಾಂತ್ರೀಕೃತಗೊಂಡ ಜಾಗತಿಕ ನಾಯಕನಾಗುವತ್ತ ಹೆಜ್ಜೆ ಇಟ್ಟಿದೆ.  ಒಂದು ವರದಿಯ ಪ್ರಕಾರ,  ಕೈಗಾರಿಕಾ ರೋಬೋಟ್‌ಗಳಿಗೆ ವರ್ಷಕ್ಕೆ ಸರಾಸರಿ 15-20 ಶೇಕಡಾ ಮಾರಾಟ ಹೆಚ್ಚಳ ಕಾಣುತ್ತಿದೆ ಚೀನಾದಲ್ಲಿ.  ಚೀನಾದಲ್ಲಿ ವಾರ್ಷಿಕ ಮಾರಾಟದ ಪ್ರಮಾಣವು ಪ್ರಸ್ತುತ ಒಂದೇ ದೇಶಕ್ಕೆ ದಾಖಲಾದ ಅತ್ಯಧಿಕ ಮಟ್ಟವನ್ನು ತಲುಪುತ್ತಿದೆ ಎಂದು ಇಲ್ಲಿ ಯಾವ ಮಟ್ಟಿಗೆ ಯಾಂತ್ರೀಕೃತವಾಗುತ್ತಿದೆ ಎನ್ನುವುದನ್ನು ಗಮನಿಸಬಹುದು.

ಇದೀಗ ಇಡೀ ಚೀನಾದಲ್ಲಿನ ರೋಬೋಟ್​ ವ್ಯವಸ್ಥೆಯ ಕುರಿತು ತಮ್ಮದೇ ಆದ ಶೈಲಿನಲ್ಲಿ ವಿವರಿಸಿದ್ದಾರೆ ಡಾ. ಬ್ರೋ. ಅರ್ಥಾತ್​ ಗಗನ್​.  ಚೀನಾದ ಹಲವಾರು ಕಡೆಗಳಿಗೆ ಭೇಟಿ ಕೊಟ್ಟಿರುವ ಅವರು, ರೆಸ್ಟೋರೆಂಟ್​ ಸೇರಿದಂತೆ ವಿವಿಧ ಕಡೆಗಳಲ್ಲಿ ರೋಬೋಟ್​ ಹೇಗೆ ಕೆಲಸ ನಿರ್ವಹಿಸುತ್ತಿದೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.  ಕೈಗಾರಿಕಾ ರೋಬೋಟ್‌ಗಳ ಕಾರ್ಯಾಚರಣೆಯ ಸ್ಟಾಕ್ ವಿಶ್ವದ ಅತ್ಯುನ್ನತ ಮಟ್ಟವನ್ನು ಗುರುತಿಸುತ್ತದೆ. ಅದೇ ಸಮಯದಲ್ಲಿ, ಚೀನಾದ ರೋಬೋಟ್ ತಯಾರಕರು ತಮ್ಮ ದೇಶೀಯ ಮಾರುಕಟ್ಟೆಯನ್ನು ವಿಸ್ತರಿಸುತ್ತಲೇ ಇರುತ್ತಾರೆ. ವಿಶ್ವ ರೋಬೋಟಿಕ್ಸ್ ವರದಿಯ ಪ್ರಕಾರ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೋಬೋಟಿಕ್ಸ್ (IFR) ಪ್ರಕಟಿಸಿದ ಫಲಿತಾಂಶಗಳ ಪ್ರಕಾರ ಚೀನಾ ರೋಬೋಟಿಕ್​ಕ್ಷೇತ್ರದಲ್ಲಿ ಏರುಗತಿಯಲ್ಲಿ ಸಾಗಿದೆ. ಇವುಗಳ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ಡಾ. ಬ್ರೋ. 

ರಾವಣನ ಅಪಾಯಕಾರಿ ಗುಹೆಯೊಳಗೆ ಡಾ. ಬ್ರೋ: ರಿಸ್ಕ್​ ತಗೋಬೇಡಪ್ಪಾ... ಭಯ ಆಗ್ತಿದೆ ಎಂದ ಫ್ಯಾನ್ಸ್...

 ವಾರ್ಷಿಕ ಮಾರಾಟ ಮತ್ತು ಕಾರ್ಯಾಚರಣೆಯ ಸ್ಟಾಕ್‌ಗೆ ಸಂಬಂಧಿಸಿದಂತೆ ಚೀನಾವು ವಿಶ್ವದ ಅತಿದೊಡ್ಡ ರೋಬೋಟ್ ಮಾರುಕಟ್ಟೆಯಾಗಿದೆ ಎಂಬ ಮಾಹಿತಿ ನೀಡಿರುವ ಅವರು,  ಇದು ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಬೇರೆ ಯಾವುದೇ ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಅಂತಹ ಕ್ರಿಯಾತ್ಮಕ ಏರಿಕೆ ಕಂಡುಬಂದಿಲ್ಲ ಎಂದಿದ್ದಾರೆ.  ಚೀನಾವು ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಒಳಗೊಂಡಂತೆ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಕಾರುಗಳಿಗೆ ವಿಶ್ವದ ಅತಿದೊಡ್ಡ ಉತ್ಪಾದನಾ ತಾಣವಾಗಿದೆ. ಆದರೆ ಇದೀಗ ರೋಬೋಟಿಕ್​ ಮಾರುಕಟ್ಟೆಯನ್ನು ವ್ಯಾಪಿಸಿದೆ. ಕೆಲವು ಅಂತರರಾಷ್ಟ್ರೀಯ ರೋಬೋಟ್ ಪೂರೈಕೆದಾರರು ಈಗಾಗಲೇ ಚೀನಾದಲ್ಲಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಮುಂಬರುವ ವರ್ಷಗಳಲ್ಲಿ ಹೆಚ್ಚಿನವುಗಳು ಇದನ್ನು ಅನುಸರಿಸುವ ಸಾಧ್ಯತೆಯಿದೆ. ಚೀನಾದಲ್ಲಿ ಹೆಚ್ಚಿನ ಕೈಗಾರಿಕಾ ರೋಬೋಟ್‌ಗಳನ್ನು ಜಪಾನ್, ಕೊರಿಯಾ, ಯುರೋಪ್ ಮತ್ತು ಉತ್ತರ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಡಾ.ಬ್ರೋ ವಿವರಿಸಿದ್ದಾರೆ. 

ಈಚೆಗಷ್ಟೇ ಶ್ರೀಲಂಕಾಕ್ಕೆ ಹೋಗಿದ್ದ ಗಗನ್​ ಅವರು,   ರಾವಣನ ಗುಹೆಯ ಕುರಿತು ಡಾ.ಬ್ರೋ ಅರ್ಥಾತ್​ ಗಗನ್​ ಕೆಲವೊಂದು ಕುತೂಹಲದ ಮಾಹಿತಿ ನೀಡಿದ್ದರು. ಬಹಳ ಅಪಾಯಕಾರಿ ಎನ್ನುವ ಗುಹೆಯೊಳಕ್ಕೆ ಹೋಗಿ ಅಲ್ಲಿನ ಸಂಪೂರ್ಣ ವಿವರ ನೀಡಿದ್ದರು. ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಯೋಧ್ಯೆ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿ ಇರುವ ಶ್ರೀರಾಮನ ನೆಲೆ, ರಾಮಾಯಣಕ್ಕೆ ಸಂಬಂಧಿಸಿದಂತೆ ಇರುವ ಸ್ಥಳಗಳ ದರ್ಶನ ಭಾಗ್ಯ ಮಾಡಿಸಿ ಕೆಲಕಾಲ ಕಣ್ಮರೆಯಾಗಿದ್ದ ಡಾ.ಬ್ರೋ ಅರ್ಥಾತ್​ ಗಗನ್​ ಮತ್ತೆ ಕಾಣಿಸಿಕೊಂಡಿದ್ದಾರೆ. ರಾಮನ ದರ್ಶನ ಮಾಡಿಸಿದ ಬಳಿಕ ಇದೀಗ ಲಂಕೆಗೆ ಹೋಗಿರುವ ಅವರು ಅಲ್ಲಿಯ ಕೆಲವು ಕುತೂಹಲದ ಮಾಹಿತಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ  ಶ್ರೀಲಂಕಾದಲ್ಲಿರುವ ರಾವಣನ ಚಿನ್ನದ ಅರಮನೆಯ ಮಾಹಿತಿ ನೀಡಿದ್ದರು.  ಪುರಾಣಗಳ ಪ್ರಕಾರ,  ರಾವಣ ಲಂಕೆಯಲ್ಲಿ ಚಿನ್ನದ ಅರಮನೆಯನ್ನು ಹೊಂದಿದ್ದ. ಇದನ್ನು ರಾವಣನು  ಕುಬೇರನಿಂದ ತೆಗೆದುಕೊಂಡನೆಂದು ಹೇಳಲಾಗುತ್ತದೆ. ಈ ಬಗ್ಗೆ ಗಗನ್​ ಮಾಹಿತಿ ನೀಡಿದ್ದರು.

ಲಂಕೆಗೆ ಹಾರಿದ ಡಾ.ಬ್ರೋ: ವಿಶ್ವದ ಎಂಟನೇ ಅದ್ಭುತ ಎನಿಸಿರುವ ರಾವಣನ ಚಿನ್ನದ ಅರಮನೆ ದರುಶನ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್