ಅಧಿಕ ತೂಕ ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ವರ್ಕೌಟ್ ಮಾಡಿ ವೈಟ್ ಲಾಸ್ ಮಾಡಿಕೊಳ್ಳಬೇಕೆಂದು ಬಯಸ್ತಾರೆ. ಆದ್ರೆ ಯಾವಾಗ್ಲೂ ಎಕ್ಸರ್‌ಸೈಸ್ ಮಾಡುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸ ಅಲ್ಲ. ಆದರೆ ಈ ಒಂದು ಎಕ್ಸರ್‌ಸೈಸ್‌ನ್ನು ನೀವು ಜಿಮ್‌ನ ಸಹಾಯವಿಲ್ಲದೆ ಮನೆಯಲ್ಲಿಯೇ ಮಾಡಬಹುದು. ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಅಧಿಕ ತೂಕ ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ವರ್ಕೌಟ್ ಮಾಡಿ ವೈಟ್ ಲಾಸ್ ಮಾಡಿಕೊಳ್ಳಬೇಕೆಂದು ಬಯಸ್ತಾರೆ. ಆದ್ರೆ ಯಾವಾಗ್ಲೂ ಎಕ್ಸರ್‌ಸೈಸ್ ಮಾಡುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸ ಅಲ್ಲ. ಜಿಮ್‌ಗೆ ಹೋಗೋಕೆ ಸಮಯವನ್ನು ಹೊಂದಿಸಲು ಕೆಲವರಿಗೆ ಕಷ್ಟವಾಗಬಹುದು. ಇನ್ನು ಕೆಲವರಿಗೇ ಮನೆಯಲ್ಲೇ ಕಠಿಣ ಎಕ್ಸರ್‌ಸೈಸ್ ಮಾಡಲು ಕಷ್ಟವಾಗಬಹುದು. ಆದರೆ ಈ ಒಂದು ಎಕ್ಸರ್‌ಸೈಸ್‌ನ್ನು ನೀವು ಜಿಮ್‌ನ ಸಹಾಯವಿಲ್ಲದೆ ಮನೆಯಲ್ಲಿಯೇ ಮಾಡಬಹುದು. ಸ್ಕಿಪ್ಪಿಂಗ್, ತೂಕ ಇಳಿಸಿಕೊಳ್ಳಲು ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಸ್ಕಿಪ್ಪಿಂಗ್ ಉತ್ತಮ ಕ್ಯಾಲೋರಿ ಬರ್ನರ್. ಇದು ಕೇವಲ ತೂಕನಷ್ಟಕ್ಕೆ ಕಾರಣವಾಗುವುದು ಮಾತ್ರವಲ್ಲದೆ, ಇತರ ಹಲವು ಆರೋಗ್ಯ ಸಮಸ್ಯೆಗಳನ್ನು ಸಹ ಬಗೆಹರಿಸುತ್ತದೆ.
ತೂಕ ನಷ್ಟಕ್ಕೆ ಸ್ಕಿಪ್ಪಿಂಗ್ ಹಗ್ಗದ ಪ್ರಯೋಜನಗಳು
ತೂಕವನ್ನು ಕಳೆದುಕೊಳ್ಳಲು ಹಲವಾರು ಮಾರ್ಗಗಳಿವೆ. ಹಗ್ಗವನ್ನು ಸ್ಕಿಪ್ಪಿಂಗ್ ಮಾಡುವುದು ಇದರಲ್ಲಿ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ದಿನಕ್ಕೆ 30 ನಿಮಿಷದಿಂದ ಒಂದು ಗಂಟೆಯವರೆಗೆ ಸ್ಕಿಪ್ಪಿಂಗ್ ಮಾಡಿದರೆ ಸುಮಾರು 200-300 ಕ್ಯಾಲೊರಿಗಳನ್ನು ಕಳೆದುಕೊಳ್ಳಬಹುದು. ಫಿಟ್‌ನೆಸ್ ದಿನಚರಿಯಲ್ಲಿ ಜಂಪ್-ರೋಪಿಂಗ್ ಅನ್ನು ಸೇರಿಸುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಮೊದಲನೆಯದಾಗಿ, ಇದು ಕಡಿಮೆ ವೆಚ್ಚದ ದೈಹಿಕ ಚಟುವಟಿಕೆಯಾಗಿದ್ದು ಇದಕ್ಕೆ ದುಬಾರಿ ಉಪಕರಣಗಳ ಅಗತ್ಯವಿರುವುದಿಲ್ಲ. ಇದು ಸರಳವಾದ ಎಕ್ಸರ್‌ಸೈಸ್ ಆದ ಕಾರಣ ಇದನ್ನು ಮಾಡಲು ಹೆಚ್ಚು ಜಾಗದ ಅವಶ್ಯಕತೆಯಿಲ್ಲ. ಹೆಚ್ಚುವರಿಯಾಗಿ, ಇತರ ಕ್ರೀಡೆಗಳು ಅಥವಾ ಫಿಟ್‌ನೆಸ್ ಚಟುವಟಿಕೆಗಳಿಗೆ ಹೋಲಿಸಿದರೆ, ಜಂಪ್-ರೋಪಿಂಗ್ ಕಡಿಮೆ ಶ್ರಮದಾಯಕ ವ್ಯಾಯಾಮವಾಗಿದೆ.
undefined
ತಿನ್ನದೇ ಇರೋದ್ರಿಂದ ತೂಕ ಕಡಿಮೆಯಾಗಲ್ಲ..ವೈಟ್ ಲಾಸ್ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು
ತೂಕ ನಷ್ಟಕ್ಕೆ ಸ್ಕಿಪ್ಪಿಂಗ್ ಕಾರಣವಾಗೋದು ಹೇಗೆ?
ಸ್ಕಿಪ್ಪಿಂಗ್ ಅಭ್ಯಾಸ ದೇಹದ ಎಲ್ಲಾ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಹೆಚ್ಚು ಕೆಲಸ ಮಾಡುವ ಕಾರಣ ದೇಹ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಮಾತ್ರವಲ್ಲ ದಿನಾ ಸ್ಕಿಪ್ಪಿಂಗ್ ಮಾಡೋ ಅಭ್ಯಾಸ ಕ್ರಮೇಣ ನಿಮ್ಮ ಇಡೀ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಸ್ಕಿಪ್ಪಿಂಗ್ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸುವುದು ಸಹ ತುಂಬಾ ಮುಖ್ಯ. ಅನೇಕ ಸೆಲೆಬ್ರಿಟಿಗಳು ತೂಕನಷ್ಟಕ್ಕೆ ಸ್ಕಿಪ್ಪಿಂಗ್ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ.
ಸ್ಕಿಪ್ಪಿಂಗ್‌ನ ಇತರ ಆರೋಗ್ಯ ಪ್ರಯೋಜನಗಳು
ಸ್ಕಿಪ್ಪಿಂಗ್ ರೋಪ್ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದ್ದು ಅದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಪ್ರತಿಯೊಂದು ಕಾರ್ಡಿಯೋ ವ್ಯಾಯಾಮವು ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ಸ್ಕಿಪ್ಪಿಂಗ್ ಅವುಗಳಲ್ಲಿ ಒಂದಾಗಿದೆ. ಸ್ಕಿಪ್ಪಿಂಗ್ ದೇಹವನ್ನು ಶಾಂತಗೊಳಿಸುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ದಿನಾ ಈ ಹಣ್ಣುಗಳನ್ನು ತಿಂದ್ರೆ ಬೆಲ್ಲಿ ಫ್ಯಾಟ್ ಈಝಿಯಾಗಿ ಕರಗುತ್ತೆ
ನಿರಂತರವಾಗಿ ಕೆಲಸ ಮಾಡಿದಾಗ ಸಾಮಾನ್ಯವಾಗಿ ಹೆಚ್ಚು ಸುಸ್ತಾದ ಅನುಭವವಾಗುತ್ತದೆ. ಆದ್ರೆ ಸ್ಕಿಪ್ಪಿಂಗ್ ಇಂಥಾ ಸಮಸ್ಯೆಯಾಗದಂತೆ ತಡೆಯುತ್ತದೆ. ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಸ್ಥಿರವಾದ ಸ್ಕಿಪ್ಪಿಂಗ್ ಶ್ರೇಣಿಯ ಅಭ್ಯಾಸವು ಆಯಾಸವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಸ್ಕಿಪ್ಪಿಂಗ್ ಅಭ್ಯಾಸ ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ವ್ಯಾಯಾಮವು ನಿಮ್ಮ ದೇಹ ಮತ್ತು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ತೀವ್ರತೆಯ ಸ್ಕಿಪ್ಪಿಂಗ್ ವ್ಯಾಯಾಮಗಳು ಆಹಾರವಿಲ್ಲದೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಪ್ರತಿ ದಿನ ಸ್ಕಿಪ್ಪಿಂಗ್ ಮಾಡುವುದರಿಂದ ಮೂಳೆಗಳು ಬಲವಾಗುತ್ತದೆ. ಈ ಅಭ್ಯಾಸ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ, ಹೀಗಾಗಿ ಆಸ್ಟಿಯೊಪೊರೋಸಿಸ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ತಾಲೀಮು ನಂತರದ ಹೊಳಪು ಒಬ್ಬರು ಪಡೆಯಬಹುದಾದ ಅತ್ಯುತ್ತಮ ಗ್ಲೋಗಳಲ್ಲಿ ಒಂದಾಗಿದೆ. ಸ್ಕಿಪ್ಪಿಂಗ್‌ನಂತಹ ವ್ಯಾಯಾಮಗಳು ಯಾವಾಗಲೂ ನಿಮಗೆ ಆರೋಗ್ಯಕರ, ಬ್ಲಶಿಂಗ್ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.