
ನವದೆಹಲಿ(ಏ.29) ಭಾರತೀಯ ರೈಲ್ವೇ ಆಧುನಿಕತೆಗೆ ತೆರೆದುಕೊಂಡಿದೆ. ತಂತ್ರಜ್ಞಾನದ ಮೂಲಕ ಪ್ರಯಾಣಿಕರಿಗೆ ನೀಡುವ ಸೇವೆಯನ್ನು ಮತ್ತಷ್ಟು ಸುಲಭ ಹಾಗೂ ಸರಳೀಕರಣಗೊಳಿಸಲಾಗಿದೆ. ಇದೀಗ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರಿಗಿದ್ದ ಕೆಲ ನಿರ್ಬಂಧ ಹಾಗೂ ತೊಡಕುಗಳನ್ನು ರೈಲ್ವೇ ಇಲಾಖೆ ತೊಡೆದು ಹಾಕಿದೆ. ಇದೀಗ ಆ್ಯಪ್ ಮೂಲಕ ಎಲ್ಲಿಂದ ಬೇಕಾದರೂ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ರೈಲ್ವೇ ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿಸಲು ಆಯಾ ನಿಲ್ದಾಣಕ್ಕೆ ತೆರಳಿ ಖರೀದಿಸಬೇಕು ಎಂದಿಲ್ಲ. ಆ್ಯಪ್ ಮೂಲಕ ಎಲ್ಲಿ ಬೇಕಾದರೂ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆದುಕೊಳ್ಳಬಹುದು.
ಭಾರತೀಯ ರೈಲ್ವೇ ಇಲಾಖೆಯ ಹೊಸ ಯೋಜನೆಯಿಂದ ಇದೀಗ ಪ್ರಯಾಣಿಕರು ಮನೆಯಲ್ಲೇ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಿಕೊಳ್ಳಹುದು. ಜೊತೆಗೆ ಪ್ಲಾಟ್‌ಫಾರ್ಮ್ ಟಿಕೆಟ್ ಬುಕ್ ಮಾಡಲು ಸಾಧ್ಯವಿದೆ. ಕಾಯ್ದಿರಿಸದ ಟಿಕೆಟ್ ಬುಕಿಂಗ್‌ಗೆ ಈ ಮೊದಲು ಕನಿಷ್ಠ ಜಿಯೋ ಫೆನ್ಸಿಂಗ್ ವ್ಯಾಪ್ತಿ 50 ಕಿ.ಮೀ ಒಳಗಿರಬೇಕಿತ್ತು. ಆದರೆ ಈ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಎಲ್ಲೇ ಇದ್ದರೂ ರೈಲಿನ ಕಾಯ್ದಿರಿಸದ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಭಾರತೀಯ ರೈಲ್ವೇಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್, 20 ರೂಪಾಯಿಗೆ ಊಟ-ತಿಂಡಿ!
ರೈಲ್ವೇ ಇಲಾಖೆಯ ಈ ಮಹತ್ವದ ಬದಲಾವಣೆಯಿಂದ ನಗರ ಪ್ರದೇಶದಲ್ಲಿ ಸಿಟಿ ರೈಲಿನ ಮೂಲಕ ಓಡಾಡುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಾರಣ ಸಬರ್‌ಬನ್ ರೈಲು ಟಿಕೆಟ್‌ಗೆ ಗರಿಷ್ಠ 20 ಕಿ.ಮೀ ವ್ಯಾಪ್ತಿ ಹಾಗೂ ಉಪನಗರಗಳಲ್ಲದ ರೈಲಗಳ ಕಾಯ್ದಿರಿಸದ ಟಿಕೆಟ್ ಖರೀದಿಗೆ ಗರಿಷ್ಠ 50 ಕಿ.ಮೀ ವ್ಯಾಪ್ತಿಯೊಳಗೆ ಟಿಕೆಟ್ ಖರೀದಿಗೆ ಮಾತ್ರ ಅವಕಾಶವಿತ್ತು. ಇದರಿಂದ ಪ್ರಯಾಣಿಕರು ರೈಲು ನಿಲ್ದಾಣದ ವ್ಯಾಪ್ತಿಯೊಳಗೆ ಬಂದು ಆನ್‌ಲೈನ್ ಟಿಕೆಟ್ ಬುಕ್ ಮಾಡಬಬೇಕಿತ್ತು. ಅಥವಾ ರೈಲು ನಿಲ್ದಾಣದಲ್ಲಿ ಟಿಕೆಟ್ ಖರೀದಿಸಬೇಕಿತ್ತು. ಇದೀಗ ಈ ಸಮಸ್ಯೆನ್ನು ನಿವಾರಿಸಿ ಎಲ್ಲಿಂದ ಬೇಕಾದರೂ ಕಾಯ್ದಿರಿಸಿದ ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ.
ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಮತ್ತೊಂದು ಯೋಜನೆ ಘೋಷಿಸಿದೆ. ಅಂತರ್ ನಗರಗಳಲ್ಲಿ ವಂದೇ ಭಾರತ್ ರೈಲು ಜಾರಿಗೊಳಿಸಲು ತಯಾರಿ ನಡೆಯುತ್ತಿದೆ. ಹತ್ತಿರದ ನಗರಗಳಿಗೆ ವಂದೇ ಭಾರತ್ ರೈಲು ಯೋಜನೆ ಜುಲೈ 2024ರಿಂದ ಆರಂಭಗೊಳ್ಳಲಿದೆ. ಈ ಮೂಲಕ ದೇಶಾದ್ಯಂತ ವಂದೇ ಭಾರತ್ ರೈಲು ಸೇವೆಯನ್ನು ಲಭ್ಯವಾಗಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಈ ಮೂಲಕ ಭಾರತೀಯ ರೈಲ್ವೇ ಹಲವು ಹೊಸತನ, ಆಧುನಿಕತೆ ಹಾಗೂ ತಂತ್ರಜ್ಞಾನದ ಮೂಲಕ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ.
ಭಾರತದ ಎಲ್ಲ ರೈಲ್ವೆ ನಿಲ್ದಾಣದ ಗಡಿಯಾರ ಒಂದೇ ಟೈಂ ತೋರಿಸುತ್ತಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ