ಆಲ್ಕೋಹಾಲ್ ಮಾತ್ರವಲ್ಲ, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೂ ಹಾಳಾಗುತ್ತೆ ಲಿವರ್!

First Published Jul 21, 2022, 4:01 PM IST

ಲಿವರ್ ನಿಮ್ಮ ದೇಹದ ಪ್ರಮುಖ ಭಾಗವಾಗಿದೆ. ತಿನ್ನೋದರಿಂದ ಹಿಡಿದು ಮಲದ ರೂಪದಲ್ಲಿ ವಿಷ ಜೀರ್ಣಿಸಿಕೊಳ್ಳುವವರೆಗೆ ಮತ್ತು ತೆಗೆದುಹಾಕೋವರೆಗೆ, ಲಿವರ್ ಆರೋಗ್ಯ ಉತ್ತಮವಾಗಿರಲು ಎಲ್ಲಾ ಕೆಲಸ ಮಾಡುತ್ತೆ. ಹಾಗಾಗಿ, ಅದರ ಆರೋಗ್ಯವು ಬಹಳ ಮುಖ್ಯ. ಆಲ್ಕೋಹಾಲ್ ಯಕೃತ್ತಿಗೆ ಹಾನಿ ಮಾಡುತ್ತೆ ಎಂದು ಸಾಮಾನ್ಯ ಜನರಿಗೆ ತಿಳಿದಿದೆ. ಆದರೆ ನಿಮ್ಮ ಯಕೃತ್ತು ಆರೋಗ್ಯಕ್ಕೆ ಒಳ್ಳೆದಲ್ಲದ ಬಹಳಷ್ಟು ಕೆಲಸಗಳನ್ನು ನೀವು ಪ್ರತಿದಿನ ಮಾಡುತ್ತಿದ್ದೀರಿ ಅವುಗಳನ್ನು ಅವಾಯ್ಡ್ ಮಾಡಿದ್ರೆ ಉತ್ತಮ ಆರೋಗ್ಯ ನಿಮ್ಮದಾಗುತ್ತೆ .ಅವು ಯಾವುವೆಂದು ಇಲ್ಲಿ ತಿಳಿಯಿರಿ.  
 

ಯಕೃತ್ತು(Liver) ದುರ್ಬಲಗೊಳ್ಳುವ ಲಕ್ಷಣ ಯಾವುವು?

ನಿಮ್ಮ ಲಿವರ್ ದುರ್ಬಲಗೊಳ್ಳುತ್ತಿದ್ದರೆ ಆಗ ನಿಮ್ಮ ದೇಹದಲ್ಲಿ ಕೆಲವು ವಿಶೇಷ ರೋಗಲಕ್ಷಣ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತೆ. ಇದು ದೌರ್ಬಲ್ಯ, ಹಸಿವಾಗದಿರೋದು, ವಾಂತಿ, ನಿದ್ರಾಹೀನತೆ, ದಿನವಿಡೀ ದಣಿದ ಭಾವನೆ, ತ್ವರಿತ ತೂಕ ನಷ್ಟ ಮತ್ತು ಲಿವರ್ ನಲ್ಲಿ ಊತದಂತಹ ರೋಗಲಕ್ಷಣಗಳನ್ನು ಒಳಗೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಲಿವರ್ಗೆ ಸಂಬಂಧಿಸಿದ  ಕಾಯಿಲೆ ದೇಶದಲ್ಲಿ ಸಾವುಗಳಿಗೆ(Death) ಹತ್ತನೇ ಅತ್ಯಂತ ಸಾಮಾನ್ಯ ಕಾರಣವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಸುಮಾರು 10 ಲಕ್ಷ ಭಾರತೀಯರು ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದಾರೆ. ಇದು ಜಗತ್ತಿನಲ್ಲಿ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಔಷಧಿಗಳ(Medicines) ಅತಿಯಾದ ಬಳಕೆ

ಒಂದು ಅಧ್ಯಯನದ ಪ್ರಕಾರ, ಹೆಚ್ಚು ಔಷಧ ಸೇವಿಸೋದರಿಂದ ಲಿವರ್‌ಗೆ ಹಾನಿಯಾಗಬಹುದು. ಗಿಡಮೂಲಿಕೆ, ಸಪ್ಲೆಮೆಂಟ್ಸ್ ಮತ್ತು ಔಷಧಿಗಳು ಸೇರಿ ವ್ಯಕ್ತಿಯು ಸೇವಿಸುವ ಯಾವುದೇ ಆಹಾರವನ್ನು ವಿಭಜಿಸೋದು ಯಕೃತ್ತಿನ ಕೆಲಸ. ಕೆಲವು ಔಷಧಿಗಳು ತುಂಬಾ ಕಠಿಣವಾಗಿರುತ್ತೆ, ಅವುಗಳನ್ನು ಅತಿಯಾಗಿ ಸೇವಿಸೋದರಿಂದ ಲಿವರ್ಗೆ ಹಾನಿಯಾಗಬಹುದು. ಪ್ರತಿಯೊಂದು ಸಣ್ಣ ಕಾಯಿಲೆಗೆ  ಔಷಧ ತಿನ್ನುವ  ಅಭ್ಯಾಸವು ಲಿವರ್ ಇನ್ಫೆಕ್ಷನ್ ನಿಂದ ಲಿವರ್ ಫೇಲ್ಯೂರ್ ವರೆಗೆ ತರಬಹುದು.

ನೀರು(Water) ಕುಡಿಯಿರಿ

ಆರೋಗ್ಯ ತಜ್ಞರು ಸಾಮಾನ್ಯವಾಗಿ  8-ಔನ್ಸ್  ಅಥವಾ ಗ್ಲಾಸ್ ನೀರು ಪ್ರತಿದಿನ ಕುಡಿಯಬೇಕೆಂದು ಶಿಫಾರಸು ಮಾಡ್ತಾರೆ, ಇದು ದಿನಕ್ಕೆ ಸುಮಾರು 2 ಲೀಟರ್ ಅಥವಾ ಅರ್ಧ ಗ್ಯಾಲನ್ ಗೆ ಸಮ. ಇದನ್ನು 8×8 ನಿಯಮ ಎಂದು ಕರೆಯಲಾಗುತ್ತೆ . ಆದಾಗ್ಯೂ, ನಿಮಗೆ ಬಾಯಾರಿಕೆಯಾಗದಿದ್ದರೂ ನೀವು ದಿನವಿಡೀ ನಿರಂತರವಾಗಿ ಒಂದು ಗುಟುಕು ನೀರನ್ನು ಕುಡಿಯಬೇಕು ಎಂದು ಕೆಲವು ತಜ್ಞರು ನಂಬುತ್ತಾರೆ.

ನಿದ್ರಾಹೀನತೆಯು(Sleeplessness)

ನಿದ್ರಾಹೀನತೆಯ ಯಕೃತ್ತಿಗೆ ಆಕ್ಸಿಡೇಟಿವ್ ಒತ್ತಡ ಸೇರಿದಂತೆ ಕೆಲವು ಅಪಾಯಗಳನ್ನು ಉಂಟು ಮಾಡುತ್ತದೆ. ಅಧ್ಯಯನದ ಪ್ರಕಾರ, ನಿದ್ರೆಯ ಕೊರತೆಯಿಂದ ಬಳಲುತ್ತಿರುವ ಜನರು ಮಧುಮೇಹ, ಬೊಜ್ಜು, ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಧೂಮಪಾನ(Smoke)

ಸಿಗರೇಟಿನ ಹೊಗೆಯು ಯಕೃತ್ತಿನ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುವ ಒಂದು ಅಭ್ಯಾಸ. ಸಿಗರೇಟಿನ ಹೊಗೆಯಲ್ಲಿ ಕಂಡುಬರುವ ವಿಷಕಾರಿ ರಾಸಾಯನಿಕಗಳು ಕ್ರಮೇಣ ಯಕೃತ್ತಿಗೆ ತಲುಪಿ ಆಕ್ಸಿಡೇಟಿವ್ ಒತ್ತಡ ಉಂಟುಮಾಡುತ್ತೆ. ಇದರ ಪರಿಣಾಮವಾಗಿ, ಲಿವರ್ ಫ್ರೀ ರಾಡಿಕಲ್  ಉತ್ಪಾದಿಸಲು ಪ್ರಾರಂಭಿಸುತ್ತೆ, ಅದು ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತೆ.

ಪ್ಯಾಕ್ ಮಾಡಿದ ಆಹಾರದ(Packed food) ಅತಿಯಾದ ಸೇವನೆ

ಒಂದು ಅಧ್ಯಯನದ ಪ್ರಕಾರ, ಹೆಚ್ಚು ಪ್ಯಾಕ್ ಮಾಡಿದ ಆಹಾರ ಸೇವಿಸೋದರಿಂದ ಯಕೃತ್ತಿಗೆ ಹಾನಿಯಾಗುತ್ತೆ. ವಾಸ್ತವವಾಗಿ, ಇದು ಅಡಿಟಿವ್ಸ್, ಪ್ರೆಸೆರ್ವೆಟಿವ್ಸ್ ಮತ್ತು ಫ್ಲೇವರ್ಗಳಿಂದ ತುಂಬಿರುತ್ತೆ ,  ಅವು ವಿವಿಧ ರಾಸಾಯನಿಕಗಳನ್ನು ಹೊಂದಿರೋದರಿಂದ ಲಿವರ್ಗೆ ಆಹಾರ ಒಡೆಯಲು ಕಷ್ಟವಾಗುತ್ತೆ.

ಆಹಾರದಲ್ಲಿ ಅತಿಯಾದ ಸಕ್ಕರೆ

ಬ್ರೆಡ್, ಐಸ್ ಕ್ರೀಮ್(Ice cream), ಜ್ಯೂಸ್ ಮತ್ತು ಸೋಡಾದಂತಹ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಕಂಡು ಬರುತ್ತದೆ. ಮಾನವ ದೇಹದ ಹೆಚ್ಚಿನ ಜೀವಕೋಶಗಳು ಗ್ಲುಕೋಸ್ ಅನ್ನು ಚಯಾಪಚಯಗೊಳಿಸಬಹುದಾದರೂ, ಯಕೃತ್ತಿನ ಜೀವಕೋಶಗಳು ಮಾತ್ರ ಫ್ರಕ್ಟೋಸ್ ನಿರ್ವಹಿಸಲು ಸಮರ್ಥವಾಗಿವೆ. ಒಬ್ಬ ವ್ಯಕ್ತಿಯು ಹೆಚ್ಚು ಫ್ರಕ್ಟೋಸ್ ಸೇವಿಸಿದರೆ, ಯಕೃತ್ತಿಗೆ ಗಂಭೀರ ಹಾನಿ ಸಂಭವಿಸಬಹುದು.

ಅಸುರಕ್ಷಿತ ಲೈಂಗಿಕತೆ(Sex)

ಮುಖ್ಯವಾಗಿ ಹಲವು ಜನರೊಂದಿಗೆ ಅಸುರಕ್ಷಿತ ಸೆಕ್ಸ್ ಮಾಡಿದರೆ ಯಕೃತ್ತಿನ ಆರೋಗ್ಯಕ್ಕೆ ನೀವು ಯೋಚಿಸೋದಕ್ಕಿಂತ ಹೆಚ್ಚು ಅಪಾಯಕಾರಿಯಾಗಬಹುದು. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ಹೆಪಟೈಟಿಸ್ ಗೆ ತುತ್ತಾಗಬಹುದು.  ಹೆಪಟೈಟಿಸ್ ಸಿ ಒಂದು ಸಂಭಾವ್ಯ ಮಾರಣಾಂತಿಕ ಯಕೃತ್ತಿನ ಕಾಯಿಲೆಯಾಗಿದ್ದು, ಅದು ಲೈಂಗಿಕವಾಗಿ ಹರಡುತ್ತೆ.

click me!