Sanju Weds Geetha: ಡಿಂಪಲ್ ಕ್ವೀನ್ ಜೊತೆ ಶ್ರೀನಗರ ಕಿಟ್ಟಿ ರೊಮ್ಯಾನ್ಸ್..! ಸಂಜು ವೆಡ್ಸ್ ಗೀತಾ ಲವ್ ಸಾಂಗ್ ಸೂಪರ್..!

Sanju Weds Geetha: ಡಿಂಪಲ್ ಕ್ವೀನ್ ಜೊತೆ ಶ್ರೀನಗರ ಕಿಟ್ಟಿ ರೊಮ್ಯಾನ್ಸ್..! ಸಂಜು ವೆಡ್ಸ್ ಗೀತಾ ಲವ್ ಸಾಂಗ್ ಸೂಪರ್..!

Published : Apr 30, 2024, 11:14 AM ISTUpdated : Apr 30, 2024, 11:15 AM IST

ಸಂಜು ವೆಡ್ಸ್ ಗೀತಾ ಸ್ಯಾಂಡಲ್‌ವುಡ್‌ನ ಸ್ಪೆಷಲ್ ಫ್ಲೇವರ್ ಸಿನಿಮಾ. ಶ್ರೀನಗರದ ಕಿಟ್ಟಿ ಹಾಗೂ ನಿರ್ದೇಶಕ ನಾಗಶೇಕರ್‌ಗೆ ನೇಮ್ ಅಂಡ್ ಫೇಮ್ ತಂದುಕೊಟ್ಟ ಸಿನಿಮಾ. ಇದೀಗ ಸಂಜು ವೆಡ್ಸ್ ಗೀತಾ 2 ಬರ್ತೀದೆ. ಈಗಾಗ್ಲೇ ಸಾಕಷ್ಟು ಸ್ಪೆಷಾಲಿಟಿಗಳಿಂದ ಗಮನ ಸೆಳೆಯುತ್ತಿರೋ ಸಂಜು ವೆಡ್ಸ್ ಗೀತಾ ಪಾರ್ಟ್ 2 ಚಿತ್ರದ ಸಾಂಗ್ ಮೇಕಿಂಗ್ ಈಗ ರಿವೀಲ್ ಆಗಿ ಸಖತ್ ಸೌಂಡ್ ಮಾಡ್ತಿದೆ.

ಝಗಮಗಿಸೋ ಬೆಳಕು. ಅದ್ದೂರಿ ಸೆಟ್, ಅಬ್ಬಾ ನೋಡ್ತಿದ್ರೆ, ಯಾವುದೋ ಲೋಕದಲ್ಲಿ ಇದ್ದೇವಾ ಅನ್ನುವ ಅನುಭವ.. ಹೌದು, ಈ ಹಾಡು, ಹಾಡಿನ ಚಿತ್ರೀಕರಣ, ಅದಕ್ಕಾಗಿ ಹಾಕಿರೋ ಸೆಟ್ ಎಲ್ಲವೂ ವೆರಿ ಸ್ಪೆಷಲ್ ಅನ್ನುವಂತಿದೆ. ನಿರ್ದೇಶಕ ನಾಗಶೇಖರ್(Nagashekar) ಕಲ್ಪನೆಯಲ್ಲಿ ಅವರ ಡ್ರೀಮ್ ನಂತೆ ಈ ಸಾಂಗ್ ಶೂಟಿಂಗ್(Song Shooting) ನಡೆದಿದೆ. ಈ ಒಂದೇ ಒಂದು ಹಾಡಿನ ಚಿತ್ರೀಕರಣಕ್ಕೆ 50 ಕೋಟಿ ಬಂಡವಾಳ ಹೂಡಲಾಗಿದೆ. ಕುಣಿಗಲ್ ನ ಯುಬಿ ಸ್ಟೆಡ್ ಫಾರಂನಲ್ಲಿ 5 ದಿನಗಳ ಕಾಲ, ಈ ಕಲರ್ ಫುಲ್  ಹಾಡಿನ  ಚಿತ್ರೀಕರಣ ನಡೆಸಲಾಗಿದೆಯಂತೆ. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿನಲ್ಲಿ ನಟಿ ಡಿಂಪಲ್ ಕ್ವೀನ್ ರಮ್ಯಾ ಜೊತೆ ಶ್ರೀನಗರ ಕಿಟ್ಟಿ(Srinagara Kitty) ರಮ್ಯಾನ್ಸ್ ಮಾಡಿದ್ದಾರೆ. ಶ್ರೀಧರ ವಿ. ಸಂಭ್ರಮ  ಮ್ಯೂಸಿಕ್ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಈ ಹಾಡಿಗೆ ರೊಮ್ಯಾಂಟಿಕ್ ಫ್ರೇಮ್ ಕೊಡಲಾಗಿದೆ. ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್ ಸಂಜು ವೆಡ್ಸ್ ಗೀತಾ(Sanju Weds Geetha 2) ಸಿನಿಮಾದಲ್ಲೂ ಅದನ್ನೇ ಮಾಡಿದ್ದಾರೆ.ಬ ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 12 ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. 

ಇದನ್ನೂ ವೀಕ್ಷಿಸಿ:  ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?