ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ಜೆಡಿಎಸ್‌ನಿಂದ ಅಮಾನತು; ಜಿ.ಟಿ. ದೇವೇಗೌಡ

By Sathish Kumar KHFirst Published Apr 30, 2024, 12:54 PM IST
Highlights

ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ ಎಂದು ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡ ಹೇಳಿದರು.
 

ಧಾರವಾಡ (ಏ.30): ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ. ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಂಡು ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ ಎಂದು ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯ ನಂತರ ಮಾತನಾಡಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡವನ್ನು ರಚಿಸಿದ್ದು, ಅದನ್ನು ಸ್ವಾಗತ ಮಾಡುತ್ತೇವೆ. ಇನ್ನು ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಜೊತೆಗೆ, ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್‌ ಪಕ್ಷದಿಂದ ಅಮಾನತು ಮಾಡುವುದಕ್ಕೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರಿಗೆ ಶಿಫಾರಸು ಮಾಡಲಾಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಮಾಹಿತಿ ನೀಡಿದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಪ್ರಧಾನಿ ಮೋದಿಯೇ ನೇರ ಕಾರಣ; ಸಂಸದ ಡಿ.ಕೆ. ಸುರೇಶ್ ಆರೋಪ

ಎಸ್‌ಐಟಿ‌ ತನಿಖೆಯಲ್ಲಿ ಬರುವುದು ವರದಿ ಆಧರಿಸಿ ಉಚ್ಚಾಟನೆ ನಿರ್ಧಾರ ಮಾಡಲಾಗುವುದು. ಎಷ್ಟು ವರ್ಷ ಮಾಡಬೇಕು ಅನ್ನೋದು ವರದಿ ನೋಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಿಳಾ ಆಯೋಗದಿಂದ ದೂರು ಕೊಡಿಸಿದವರು ಯಾರೆಂಬುದು ಗೊತ್ತಿದೆ: ಮಹಿಳಾ ಆಯೋಗದ ಅಧ್ಯಕ್ಷ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದ ದಿನವೇ ಎಸ್ ಐಟಿ ನೀಡುವುದು ಘೋಷಣೆ ಮಾಡಿದ್ದಾರೆ. 28ರಂದು ಬೆಂಗಳೂರನಲ್ಲಿ‌ ಕೂತುಕೊಂಡು ದೂರು ಟೈಪಿಸಿಕೊಂಡು ಹೊಳೆನರಸೀಪುರ ದೂರು ಕೊಡಿಸಿದ್ದಾರೆ. ದೂರು ಪತ್ರ ಸಿದ್ದಪಡಿಸುವಾಗ ಯಾರಾರು ಇದ್ದರು. ಎಲ್ಲಿ‌ಕೂತು ಬರೆದಿದ್ದರು ಎಂಬುದು ತನಿಖೆಯಾಗಬೇಕಿದೆ. 2012-13 ರಲ್ಲಿ ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದರು ಅನ್ನೋದನ್ನು ದೂರಿನಲ್ಲಿ ಉಲ್ಲೇಖಿಸಿದ್ದರು. ಚುನಾವಣಾ ಮುಗಿದ ಮೇಲೆ‌ ಈ‌ ದೂರು ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದರು.

ಘಟನೆ ಬೆಳಿಕೆಗೆ ಬಂದಾಗ ಡಿಸಿಎಂ ಪೆನ್ ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ನನ್ನ ಬಳಿಯೂ ಪೆನ್ ಡ್ರೈವ್ ಇದೆ. ಈ ರೀತಿಯ ಪೆನ್ ಡ್ರೈವ್ ಅದಲ್ಲ. ಇದ್ರ ಹಿಂದೆ ಪೆನ್ ಡ್ರೈವ್ ಪಿತಾಮಹ ಇದಾರೆ. ಈ ಘಟನೆಯಲ್ಲಿ ಬಲವಂತ ಇದ್ದರೆ ಎಸ್ಐಟಿಗೆ ದೂರು ಕೊಡಿ. ವಿಷಯವನ್ನು ಬಿಡುಗಡೆ ಮಾಡಿದ್ದು ಯಾರು..? ಮಹಿಳೆಯರಿಗೆ ಬಹಳ ಅನ್ಯಾವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಪುಡಾರಿಗಳು ಪ್ರತಿಭಟನೆ ಮಾಡಿದ್ದಾರೆ. ವಿಡಿಯೋ ದಲ್ಲಿರೋ ಯಾರಾದ್ರೂ ಪ್ರತಿಭಟನೆ ಮಾಡಿದ್ದಾರಾ..? ನನ್ನ ಮನೆ ಮುಂದೆಯೂ ಪ್ರತಿಭಟನೆ ಮಾಡಿದ್ದರು. ಈ ಪ್ರಕರಣಕ್ಕೂ ನನಗು ಏನು ಸಂಬಂಧ..? ದುಬೈಗೆ ಹೋಗಿ ವಿಡಿಯೋ ಅಪ್ ಲೋಡ್ ಮಾಡಲು ಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಕೇಂದ್ರ ಸರ್ಕಾರ ತಲುಪಿದ ಪ್ರಜ್ವಲ್ ರೇವಣ್ಣ ಕಾಮಕಾಂಡ; ಮಹಿಳೆಯರ ಅವಮಾನ ಸಹಿಸೊಲ್ಲವೆಂದ ಅಮಿತ್ ಶಾ!

ಕನಿಷ್ಠ ಮಹಿಲೆಯರ ಮುಖವನ್ನಾದರೂ ಬ್ಲರ್ ಮಾಡಬಾರದೇ?: ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್ ಮಾಡುವ ಮುನ್ನ ಕನಿಷ್ಠ ವಿಡಿಯೋಗಳಲ್ಲಿ ಮತ್ತು ಫೋಟೋಗಳಲ್ಲಿ ಹೆಣ್ಣುಮಕ್ಕಳ ಬ್ಲರ್ ಮಾಡಬೇಕಲ್ಲವೇ..? ಇಷ್ಟು ಕೀಳು ಮಟ್ಟದಲ್ಲಿ ಮಾಡಿರೋದು ಸರಿಯೇ.? ಕಾಂಗ್ರೆಸ್ ನವ್ರು ಮಹಿಳೆಯರಿಗೆ ಎಷ್ಟು ಗೌರವ ಕೊಡ್ತಾರೆ ಅಂತ ಇದ್ರಲ್ಲಿ ಗೊತ್ತಾಗುತ್ತದೆ. ದೇವರಾಜೇಗೌಡ ಮಾಧ್ಯಮ ಹೇಳಿಕೆ ಕೊಟ್ಟಿದ್ದಾರೆ..? ನಮಗೆ ಸುತ್ತಿ ಹಾಕಿಕೊಳ್ಳುತ್ತೆ ಅಂತ ಮಹಾನ್ ನಾಯಕರಿಗೆ ಈಗ ಗೊತ್ತಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

click me!