ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

Published : Apr 30, 2024, 10:52 AM ISTUpdated : Apr 30, 2024, 10:53 AM IST

ಸೋಷಿಯಲ್ ಮೀಡಿಯಾಗಳಲ್ಲಿ ತಿರುಚಿದ ವಿಡಿಯೋಗಳ ಅಬ್ಬರ
ಕಾಂಗ್ರೆಸ್ ಪರವಾದ..ಬಿಜೆಪಿ ವಿರುದ್ಧವಾದ ಫೇಕ್ ವಿಡಿಯೋಸ್
ವೈರಲ್ ಆದ ಅಮೀರ್.. ಅಲ್ಲು ಅರ್ಜುನ್ ಫೇಕ್ ವಿಡಿಯೋಸ್
ದೇಶದ ಮೂಡ್ ಚೈಂಜ್ ಮಾಡುವ ಪ್ರಯತ್ನ ಮಾಡ್ತಿರೋದ್ಯಾರು? 

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ(Karnataka) ಜನತೆಯನ್ನು ಪಾಪಿಗಳು ಅಂದರಾ? ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಮೋದಿ(Narendra Modi) ಹೀಗೆ ಹೇಳಿದ್ದಾರೆಂದು ವಿಡಿಯೋ ಪೋಸ್ಟ್ ಮಾಡಿದ್ದವರು ಯಾರು ಗೊತ್ತಾ? ಮಲ್ಲಿಕಾರ್ಜುಕ್ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ? ಇವರೇ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆಂದ್ರೆ ಇದು ನಿಜಾನಾ? ಇಲ್ಲಿ ನೋಡಿ. ಪ್ರಿಯಾಂಕ್ ಖರ್ಗೆ ತಮ್ಮದೇ ಟ್ವೀಟ್ ಪೇಜ್‌ನಲ್ಲಿ ಮೋದಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅರೇ! ಇದೇನಿದು? ಕಟ್ಟರ್ ಬಿಜೆಪಿ ವಿರೋಧಿ, ಕಾಂಗ್ರೆಸ್(Congress) ಕಟ್ಟಾಳು ಪ್ರಿಯಾಂಕ್ ಖರ್ಗೆ(Priyank Kharge) ಅವರು ತಮ್ಮ ಪೇಜ್‌ನಲ್ಲಿ ಮೋದಿ ವಿಡಿಯೋ ಶೇರ್ ಮಾಡಿದ್ದಾರಾ? ಎಂದು ಅಚ್ಚರಿಯಾಗಬೇಡಿ. ಮೋದಿ ಇದರಲ್ಲಿ ಹೇಳಿದ್ದೇನೆಂದರೆ, ಕರ್ನಾಟಕದ ಜನ ಈ ಹಿಂದೆ ಪಾಪ ಮಾಡಿದ್ದಾರಲ್ವಾ, ಅವರು ಮಾಡಿದ ಆ ಪಾಪಕ್ಕೆ ಈ ಚುನಾವಣೆಯಲ್ಲಿ ನೀವೆಲ್ಲ ಶಿಕ್ಷೆ ಕೊಡಿ ಎಂದು ಈ ವಿಡಿಯೋದಲ್ಲಿ ಮೋದಿ ಹೇಳಿದ್ದಾರೆ. ಈ ವಿಡಿಯೋ ಪೋಸ್ ಮಾಡಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಏನೆಂದು ಬರೆದುಕೊಂಡಿದ್ದಾರೆ ಗೊತ್ತಾ? ಪ್ರಧಾನಿ ಮೋದಿಯವರೇ ಕನ್ನಡಿಗರನ್ನು(Kannadigas) ಪಾಪಿಗಳು ಎಂದೇಕೆ ಕರೆದಿದ್ದೀರಿ? ಕನ್ನಡಿರ ಮೇಲೆ ನಿಮಗೇಕೆ ಇಷ್ಟೊಂದು ಕೋಪ? ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ಕನ್ನಡಿಗರು ಯಾವ ಪಾಪ ಮಾಡಿದ್ದಾರೆ? ಭ್ರಷ್ಟ ಬಿಜೆಪಿಯನ್ನು ತಿರಸ್ಕರಿಸಿದ್ದು ಪಾಪವೇ? 40% ಕಮಿಷನ್ ಸರ್ಕಾರವನ್ನು ಒದ್ದೋಡಿಸಿದ್ದು ಪಾಪವೇ? 25 ಬಿಜೆಪಿ ಸಂಸದರು ನಿಷ್ಕ್ರೀಯರಾಗಿದ್ದು ಕನ್ನಡಿಗರ ಯಾವ ಪಾಪಕ್ಕೆ? ಹೀಗೆ ಇನ್ನೂ ಏನೇನೂ ಉದ್ದಕ್ಕೆ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ. ಇಷ್ಟೆಲ್ಲ ಬರೆದುಕೊಳ್ಳುವ ಮೊದಲು ಈ ವಿಡಿಯೋ ನಿಜವಾದದ್ದಾ ಅಥವಾ ಸುಳ್ಳಾ ಅನ್ನೋ ಯೋಚನೆಯನ್ನೂ ಈ ಮಹಾನ್ ಮೇಧಾವಿ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಮೋದಿ ಮಾತನ್ನು ತಿರುಚಿದ ವಿಡಿಯೋವನ್ನು ಇಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹಾಗಿದ್ರೆ ನಿಜವಾದ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ಇಲ್ಲಿ ಕೇಳಿ.

ಇದನ್ನೂ ವೀಕ್ಷಿಸಿ:  Prajwal Revanna : ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಯ ಜ್ವಾಲಾಗ್ನಿ: SIT ಎದುರು ಸಂತ್ರಸ್ತೆಯರು ಹೇಳಿದ್ದೇನು ?

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more