ತಿಂಗಳಿಗೆ 19 ಲಕ್ಷ ಸಂಪಾದಿಸೋ ಈ ಹುಡುಗಿ ನೀಡ್ತಾಳೆ ಸೈಡ್ ಬ್ಯುಸಿನೆಸ್ ಮಾಡಲು ಟಿಪ್ಸ್ ಕೊಡ್ತಾರೆ!

By Suvarna NewsFirst Published Apr 30, 2024, 12:33 PM IST
Highlights

ತಿಂಗಳಿಗೆ ಒಂದೈವತ್ತು ಸಾವಿರ ಗಳಿಸೋದು ಕಷ್ಟ. ಈಕೆ 19 ಲಕ್ಷ ಸಂಪಾದನೆ ಮಾಡ್ತಿದ್ದಾಳೆ. ಅದು ಫುಲ್ ಟೈಂ ಅಲ್ಲ ಪಾರ್ಟ್ ಟೈಂ ಕೆಲಸ ಮಾಡಿ ಅಂದ್ರೆ ನೀವು ನಂಬ್ಲೇಬೇಕು. 
 

ಒಂದೇ ಕೆಲಸ ನೆಚ್ಚಿ ಕುಳಿತ್ರೆ ಈಗಿನ ಕಾಲದಲ್ಲಿ ಹೊಟ್ಟೆ ತುಂಬೋದು ಕಷ್ಟ. ಒಂದಕ್ಕಿಂತ ಹೆಚ್ಚು ಕೆಲಸ ಮಾಡೋದು ಅನಿವಾರ್ಯ. ಲಾಭದಾಯಕ ವ್ಯವಹಾರ ಶುರು ಮಾಡೋದು ಸುಲಭವಲ್ಲ. ಅದಕ್ಕೆ ಧೈರ್ಯ, ತಾಳ್ಮೆ, ನಿರಂತರ ಪ್ರಯತ್ನ ಅಗತ್ಯ. ಹೆಚ್ಚಿನ ಲಾಭಗಳಿಸಬೇಕು ಎಂದಾಗ ಜನರ ತಲೆಯಲ್ಲಿ ಓಡೋದು ಮಾರಾಟ. ಯಾವ ವಸ್ತು ಹೆಚ್ಚು ಸೇಲ್ ಆಗ್ತಿದೆ ಎಂಬುದನ್ನು ನೋಡಿ ಆ ವಸ್ತುವಿನ ಮಾರಾಟಕ್ಕೆ ಇಳಿಯುವ ಜನರೇ ಹೆಚ್ಚು. ಬರೀ ಮಾರಾಟದಿಂದ ಮಾತ್ರ ಗಳಿಕೆ ಹೆಚ್ಚಾಗಲು ಸಾಧ್ಯವಿಲ್ಲ. ನಿಮ್ಮ ಆದಾಯ ಜಾಸ್ತಿಯಾಗ್ಬೇಕು ಅಂದ್ರೆ ನೀವು ಬೇರೆ ಮಾರ್ಗವನ್ನು ಕೂಡ ಅನುಸರಿಸಬಹುದು. ಕೆಲವರಿಗೆ ಹೊಸದನ್ನು ಮಾಡುವ ಉತ್ಸಾಹ ಇರುತ್ತದೆ. ಆದ್ರೆ ಏನು ಮಾಡೋದು, ಹೇಗೆ ಮಾಡೋದು ಎಂಬ ಮಾಹಿತಿ ಲಭ್ಯವಿರೋದಿಲ್ಲ. ಯಾವುದೇ ವ್ಯಕ್ತಿ ನಿಮಗೊಂದು ಸರಿಯಾದ ಮಾರ್ಗ ತೋರಿಸಿದ್ರೆ ನೀವು ಅದ್ರಲ್ಲಿ ಸುಲಭವಾಗಿ ಮುನ್ನಡೆಯುತ್ತೀರಿ. ಬರ್ನಾಡೆಟ್ ಜಾಯ್ ಹೆಸರಿನ ಮಹಿಳೆ ಇದೇ ಕೆಲಸ ಮಾಡ್ತಿದ್ದಾಳೆ. ಬೇರೆಯವರಿಗೆ ಮಾರ್ಗದರ್ಶನ ನೀಡುವ ಮೂಲಕ ತಾನು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. 

ಯಶಸ್ಸಿ (Success) ಗೆ ಮೊದಲು ಸೋಲು ಸಾಮಾನ್ಯ : ಬರ್ನಾಡೆಟ್ ಜಾಯ್ (Bernadette Joy) , ನಾರ್ತ್ ಕೆರೊಲಿನಾ (North Carolina) ದ ಚಾರ್ಲೊಟ್‌ ನಲ್ಲಿ ಬಟ್ಟೆ ಅಂಗಡಿಯೊಂದನ್ನು ತೆರೆದಿದ್ದಳು. ಬ್ರೈಡಲ್ ಗೌನ್ ಗಳನ್ನು ಇಲ್ಲಿ ಬಾಡಿಗೆಗೆ ನೀಡಲಾಗ್ತಿತ್ತು. ಜಾಯ್ ಯಾವಾಗ್ಲೂ ಒಂದೇ ಕೆಲಸವನ್ನು ಮಾಡಿದವಳಲ್ಲ. ಈ ಸಮಯದಲ್ಲೇ ಆಕೆ ತನ್ನ ಕಾಲೇಜು ಸಾಲ ತೀರಿಸಕೊಂಡಳು. ಪೂರ್ಣ ಸಮಯ ಮಾಡ್ತಿದ್ದ ಕೆಲಸ ಬಿಟ್ಟಳು. ಹಾಗೆಯೇ ತನ್ನ ಕೆಲಸಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿಕೊಂಡಳು. ಆದ್ರೆ ಜಾಯ್, ಬ್ರೈಡಲ್ ಗೌನ್ ಬಾಡಿಗೆ ನೀಡುವ ಅಂಗಡಿ ಹೆಚ್ಚು ಕಾಲ ಓಡಲಿಲ್ಲ. 2019ರಲ್ಲಿ ಆಕೆ ಇದನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಯ್ತು. ಆದ್ರೆ ಜಾಯ್, ಬಾಸ್ ಹೇಗಿರಬೇಕು ಎಂಬುದನ್ನು ಇದರಿಂದ ಕಲಿತಳು. ಅಂಗಡಿ ನಡೆಸುವ ಸಮಯದಲ್ಲಿ ಜಾಯ್ ಸವಾಲುಗಳನ್ನು ಎದುರಿಸಿದ್ದಳು. ಚಿಲ್ಲರೆ ವ್ಯಾಪಾರದಲ್ಲಿ ಇಷ್ಟೊಂದು ಸಮಯ ಹಾಳು ಮಾಡೋದು ಆಕೆಗೆ ಇಷ್ಟವಿರಲಿಲ್ಲ.

ರಾಮ್‌ದೇವ್ ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು!

ಈ ಮಧ್ಯೆ ಫಿನ್ ಕಾನ್ ನಲ್ಲಿ ನಡೆದ ವೈಯಕ್ತಿಕ ಹಣಕಾಸು ಸಮ್ಮೇಳನದಲ್ಲಿ (Personal Financial Convention) ಜಾಯ್ ಪಾಲ್ಗೊಂಡಿದ್ದಳು. ಈ ವೇಳೆ ಜನರಿಗೆ ಹೇಗೆ ವೈಯಕ್ತಿಕ ಹಣಕಾಸಿನ ಬಗ್ಗೆ ಮಾಹಿತಿ ನೀಡ್ಬೇಕು ಎಂಬ ಜ್ಞಾನವನ್ನು ಜಾಯ್ ಪಡೆದಳು. ಕೋಚಿಂಗ್ ಕಂಪನಿ ಹೇಗೆ ಶುರು ಮಾಡ್ಬೇಕು ಎಂಬ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ 2020ರಲ್ಲಿ ಜಾಯ್ ಕೋಚಿಂಗ್ ಕಂಪನಿಯನ್ನು ಅಧಿಕೃತವಾಗಿ ಶುರು ಮಾಡಿದಳು. 

ಸದ್ಯ ಜಾಯ್, ಕ್ರಶ್ ಯುವರ್ ಮನಿ ಗೋಲ್ಸ್ ಎಂಬ ಮನಿ-ಕೋಚಿಂಗ್ ವ್ಯವಹಾರ ನಡೆಸುತ್ತಿದ್ದಾಳೆ. 202ರಲ್ಲಿ ಆನ್‌ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಜಾಯ್ ಶುರು ಮಾಡಿದ್ದಳು. ಈಗ ಕೋಚಿಂಗ್ (Coaching), ಫ್ರೀಲ್ಯಾನ್ಸಿಂಗ್ (Freelancing) ಮತ್ತು ಪ್ಲಾನಿಂಗ್ ಸ್ಪೀಕಿಂಗ್ ಎಂಗೇಜ್‌ಮೆಂಟ್‌ಗಳ ಮೂಲಕ ಜಾಯ್ ಹಣ ಗಳಿಸುತ್ತಿದ್ದಾಳೆ. ಒಂದು ವರ್ಷದಲ್ಲಿ ಜಾಯ್ 300,000 ಡಾಲರ್  ಅಂದ್ರೆ ಸುಮಾರು 2.5 ಕೋಟಿ ಸಂಪಾದನೆ ಮಾಡ್ತಾಳೆ. ಅಂದ್ರೆ ತಿಂಗಳಿಗೆ 19 ಲಕ್ಷ ಗಳಿಸ್ತಾಳೆ ಜಾಯ್.

ಅತ್ತೆ ಮಾಳವಿಕಾ ಸಿದ್ಧಾರ್ಥ್‌ ಹೆಗ್ಡೆಗೆ ಥ್ಯಾಂಕ್ಸ್ ಎಂದಿದ್ಯಾಕೆ ಡಿಕೆಶಿ ಮಗಳು!

ಇಷ್ಟು ಸಂಪಾದನೆ ಮಾಡುವ ಜಾಯ್ ಇಡೀ ದಿನ ಈ ಕೆಲಸ ಮಾಡೋದಿಲ್ಲ. ವಾರದಲ್ಲಿ 20 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾಳೆ. ಒಂದಕ್ಕಿಂತ ಹೆಚ್ಚು ಕೆಲಸ ಮಾಡಲು ಬಯಸುವವರು ನೀವಾಗಿದ್ದರೆ ನಿಮ್ಮ ಸ್ವಾಭಾವಿಕ ಕೌಶಲ್ಯಕ್ಕೆ (Natural Skill) ಮಹತ್ವ ನೀಡಿ ಎನ್ನುತ್ತಾಳೆ ಜಾಯ್. ನಿಮ್ಮ ಕೌಶಲ್ಯ, ಆಸಕ್ತಿಗೆ ತಕ್ಕ ಕೆಲಸ ಮಾಡಿದ್ರೆ ಸಂತೋಷದ (Happiness) ಜೊತೆ ಬೇಗ ಯಶಸ್ಸು ಗಳಿಸಬಹುದು ಎಂಬುದು ಜಾಯ್ ಅಭಿಪ್ರಾಯ. 
 

click me!